ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಪೊಲೀಸರ ಮೇಲೆ ಹಲ್ಲೆ ನಡೆಸಿದ ನಾಲ್ವರ ಬಂಧನ

By Sachhidananda Acharya
|
Google Oneindia Kannada News

ಬೆಂಗಳೂರು, ಮಾರ್ಚ್ 19: ನಗರದ ಪೊಲೀಸ್ ಪೇದೆ ಮೇಲೆ ಇಂದು ಮುಂಜಾನೆ ಹಲ್ಲೆ ನಡೆಸಿದ ನಾಲ್ವರನ್ನು ಬಂಧಿಸಲಾಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಇಂದು ಮುಂಜಾನೆ ಪೊಲೀಸ್ ಕಾನ್ ಸ್ಟೇಬಲ್ ಒಬ್ಬರ ಮೇಲೆ ಬೆಂಗಳೂರಿನಲ್ಲಿ ಹಾಡಹಗಲೇ ದಾಳಿ ನಡೆದಿತ್ತು. ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಜೂಜು ಅಡ್ಡೆಯೊಂದರ ಮೇಲೆ ಪೇದೆಯೊಬ್ಬರು ದಾಳಿ ನಡೆಸಿದ್ದರು.

ಹಾಡಹಗಲೇ ಬೆಂಗಳೂರಿನಲ್ಲಿ ಗೂಂಡಾಗಳಿಂದ ಪೊಲೀಸ್ ಮೇಲೆ ಹಲ್ಲೆ ಹಾಡಹಗಲೇ ಬೆಂಗಳೂರಿನಲ್ಲಿ ಗೂಂಡಾಗಳಿಂದ ಪೊಲೀಸ್ ಮೇಲೆ ಹಲ್ಲೆ

ಈ ವೇಳೆ ಪೇದೆ ಮೇಲೆ ಗೂಂಡಾಗಳು ಕೈ ಮಾಡಿದ್ದು, ರಸ್ತೆಯಲ್ಲೇ ಪೇದೆಗೆ ಅಟ್ಟಾಡಿಸಿ ಹೊಡೆದಿದ್ದಾರೆ. ಈ ಎಲ್ಲಾ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಪೇದೆ ಮೇಲೆ ಹಲ್ಲೆ ಮಾಡಿದವರು ಬಿಜೆಪಿ ಶಾಸಕರ ಬೆಂಬಲಿಗರು ಎನ್ನಲಾಗಿದೆ.

4 people arrested in connection with thrashing a cop in Bengaluru

ಈ ಕುರಿತು ಪ್ರತಿಕ್ರಿಯೆ ನೀಡಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್, "ಇದು ಬಿಜೆಪಿ ಸಂಸ್ಕೃತಿ. ಅವರು ಕಾನೂನನ್ನು ಕೈಗೆ ತೆಗೆದುಕೊಳ್ಳುತ್ತಿದ್ದಾರೆ. ಸರ್ಕಾರವು ಈ ಘಟನೆಗಳನ್ನು ದೃಢವಾಗಿ ಎದುರಿಸುತ್ತದೆ. ಬಿಜೆಪಿ ಗೊಂಡಾಗಿರಿಗೆ ಹೆಸರುವಾಸಿ ಎಂಬುದು ಗೊತ್ತಿದೆ. ಅವರು ಕೇಂದ್ರ ಸರ್ಕಾರ ಮಾತ್ರವಲ್ಲದೆ ಅಧಿಕಾರದಲ್ಲಿರುವ ಸ್ಥಳೀಯ ಸಂಸ್ಥೆಗಳಲ್ಲಿಯೂ ತಮ್ಮ ಎಲ್ಲಾ ತಂತ್ರಗಳನ್ನು ಬಳಸುತ್ತಿದ್ದಾರೆ," ಎಂದು ಕಿಡಿಕಾರಿದ್ದಾರೆ.

English summary
Four people arrested in connection with thrashing a cop who went to bust a gambling den in Bengaluru's Whitefield area. Case registered.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X