ಬೆಂಗಳೂರು; 380 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ಆರಂಭ

ಬೆಂಗಳೂರು, ಮೇ 10; ಬೆಂಗಳೂರು ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ನಗರದಲ್ಲಿ ಬೆಡ್ ಸಮಸ್ಯೆ ಬಗ್ಗೆ ಹಲವಾರು ಆರೋಪಗಳು ಕೇಳಿ ಬರುತ್ತಿವೆ. ಬಿಬಿಎಂಪಿ ಕೋವಿಡ್ ಹರಡುವಿಕೆ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಂಡಿದೆ.

ಕೋವಿಡ್ ರೋಗಿಗಳಿಗೆ ಸಹಾಯಕವಾಗಲು ಯಲಹಂಕ ವಲಯದ ಜಿಕೆವಿಕೆ ಕ್ಯಾಂಪಸ್‌ನಲ್ಲಿ 380 ಹಾಸಿಗೆಗಳ ಹೊಸ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ. ಬಿಜೆಪಿ ಶಾಸಕ ಮತ್ತು ಯಲಹಂಕ ವಲಯದ ಕೋವಿಡ್ ಉಸ್ತುವಾರಿಯಾದ ವಿಶ್ವನಾಥ್ ಮತ್ತು ಶಾಸಕ ಕೃಷ್ಣಭೈರೇಗೌಡ ಮತ್ತು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಕೇಂದ್ರವನ್ನು ಉದ್ಘಾಟಿಸಿದರು.

ಈ ಕೋವಿಡ್ ಕೇರ್ ಸೆಂಟರ್‌ನಲ್ಲಿ 80 ಹಾಸಿಗೆಗಳು ಪುರುಷರಿಗೆ, 80 ಮಹಿಳೆಯರಿಗೆ ಮೀಸಲಾಗಿವೆ. 170 ಸಾಮಾನ್ಯ ಹಾಗೂ 50 ಆಮ್ಲಜನಕಯುಕ್ತ ಹಾಸಿಗೆ‌ಗಳನ್ನು ಕೇಂದ್ರ ಹೊಂದಿದೆ.

380 Bed Covid Care Centre Inaugurated At Yelahanka

ಶೀಘ್ರದಲ್ಲೇ ಹೆಚ್ಚು ಆಮ್ಲಜನಕಯುಕ್ತ ಹಾಸಿಗೆಗಳನ್ನು ಈ ಕೋವಿಡ್ ಕೇರ್ ಸೆಂಟರ್‌ಗೆ ಸೇರಿಸಲಾಗುತ್ತಿದೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಈ ಕೇಂದ್ರ ಬಿಬಿಎಂಪಿಗೆ ಸಹಾಯಕವಾಗಲಿದೆ, ನಗರದಲ್ಲಿನ ಬೆಡ್‌ಗಳ ಮೇಲಿನ ಅವಲಂಬನೆ ಸ್ವಲ್ಪ ಕಡಿಮೆಯಾಗಲಿದೆ.

ಭಾನುವಾರದ ಮಾಹಿತಿಯಂತೆ ಬೆಂಗಳುರು ನಗರದಲ್ಲಿ 20,897 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ನಗರದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 3,50,370ಕ್ಕೆ ಏರಿಕೆಯಾಗಿದೆ.

ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಕೋವಿಡ್ ಹರಡುವಿಕೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದೆ. ಸೋಮವಾರ ಬೆಳಗ್ಗೆ 6 ಗಂಟೆಗೆ ಲಾಕ್ ಡೌನ್ ಜಾರಿಗೆ ಬಂದಿದ್ದು, ಮೇ 24ರ ತನಕ ಜಾರಿಯಲ್ಲಿರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+