350 ಕೋಟಿ ರೂ. ಬೆಂಗಳೂರು ಸ್ಕೈಡೆಕ್ ಯೋಜನೆಗೆ ಭಾರೀ ವಿರೋಧ, ಕಾರಣವೇನು ?
ಬೆಂಗಳೂರಲ್ಲಿ ಭಾರತದಲ್ಲೇ ಎತ್ತರದ ಆಕಾಶಗೋಪುರ (ಸ್ಕೈಡೆಕ್) ನಿರ್ಮಾಣ ಮಾಡುವುದಕ್ಕೆ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಮುಂದಾಗಿದೆ. ಆದರೆ ಈ ಯೋಜನೆಗೆ ಬರೋಬ್ಬರಿ 350 ಕೋಟಿ ರೂಪಾಯಿ ಖರ್ಚಾಗುತ್ತಿದೆ. ಇದಕ್ಕೆ ಜನರಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಬೆಂಗಳೂರಿಗರು ಹಾಗೂ ಕರ್ನಾಟಕದ ಜನರ ವಿರೋಧದ ನಡುವೆಯೂ ಈ ಯೋಜನೆಗೆ ಸಿದ್ಧತೆ ಹಾಗೂ ಜಾಗ ಗುರುತಿಸುವುದು ಭರ್ಜರಿಯಾಗಿಯೇ ನಡೆದಿದೆ.
ವಿಶ್ವದಲ್ಲೇ ದೊಡ್ಡದಾದ ಮತ್ತು ಆಕಾಶದ ಎತ್ತರದಲ್ಲಿ ಗೋಪುರ ನಿರ್ಮಿಸುವ ಪ್ಲಾನ್‌ಗೆ ಜನ ರೊಚ್ಚಿಗೆದಿದ್ದಾರೆ. ಈ ಗೋಪುರ ನಿರ್ಮಾಣ ಮಾಡಿ ಅಲ್ಲಿಂದ ಬೆಂಗಳೂರನ್ನು ಸೊಬಗನ್ನು ನೋಡುವಂತೆ ಮಾಡುವುದು ಈ ಪ್ರಾಜೆಕ್ಟ್‌ನ ಪ್ಲಾನ್ ಆಗಿದೆ. ಕಿತ್ತೋಗಿರೋ ರೋಡ್‌ಗಳನ್ನ ಅಲ್ಲಿಂದ ನೋಡಬೇಕಾ ಅಂತ ಜನ ಕೇಳ್ತಾ ಇದ್ದಾರೆ. ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಈ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ.

350 ಕೋಟಿ ರೂಪಾಯಿ ಪ್ರಾಜೆಕ್ಟ್: ಬೆಂಗಳೂರಿನ ಸ್ಕೈಡೆಕ್ ಪ್ಲಾನ್ ಬರೋಬ್ಬರಿ 350 ಕೋಟಿ ವೆಚ್ಚವಾಗಲಿದೆ ಎಂದು ಹೇಳಲಾಗಿದೆ. ಈಗಾಗಲೇ ಈ ಯೋಜನೆಗೆ 50 ಕೋಟಿ ಮೊತ್ತವನ್ನು ಕಾಯ್ದಿರಿಸಲಾಗಿದೆ. ಇನ್ನು ಈ ಪ್ಲಾನ್‌ಗೆ ಜಾಗ ಹುಡುಕುವುದೇ ಬಿಗ್ ಟಾಸ್ಕ್ ಆಗಿತ್ತು. ಇದೀಗ ಜಾಗ ನಿಗದಿ ಮಾಡಲಾಗುತ್ತಿದೆ. ಆದರೆ, ಜಾಗ ನಿಗದಿಯಾಗುತ್ತಿದ್ದಂತೆಯೇ ಜನರಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಅಷ್ಟಕ್ಕೂ ಜನ ಈ ಯೋಜನೆಯ ಬಗ್ಗೆ ಜನ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಯಾಕೆ. ಜನ ಈ ಯೋಜನೆಯ ಬಗ್ಗೆ ಏನಂತಿದ್ದಾರೆ ಎನ್ನುವ ವಿವರ ಇಲ್ಲಿದೆ.
ಬೆಂಗಳೂರು ಮಾತ್ರ ಅಭಿವೃದ್ಧಿಯಾದರೆ ಸಾಕೆ
ಬರೋಬ್ಬರಿ 350 ಕೋಟಿ ಯೋಜನೆಗೆ ಜನರ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಇಷ್ಟು ದುಡ್ಡು ಕೊಟ್ಟು ಈ ಯೋಜನೆ ಮಾಡುವ ಅವಶ್ಯಕತೆ ಏನಿದೆ. ಬೆಂಗಳೂರು ಅಭಿವೃದ್ಧಿಯಾದರೆ ಸಾಕೆ ಕರ್ನಾಟಕದ ಉಳಿದ ಭಾಗದ ಅಭಿವೃದ್ಧಿ ಬೇಡವ ಅಂತ ಪ್ರಶ್ನೆ ಮಾಡಿದ್ದಾರೆ. ಮುಂದುವರಿದು ಬೆಂಗಳೂರಿನಲ್ಲಿ ರಸ್ತೆಗುಂಡಿಗಳನ್ನು ಮುಚ್ಚಿ ಆಮೇಲೆ ಗೋಪುರ ಕಟ್ಟುವಿರಂತೆ.
ಗೋಪುರದ ಮೇಲೆ ನಿಂತುಕೊಂಡು ಬೆಂಗಳೂರಿನ ಕಿತ್ತೋಗಿರುವ ರಸ್ತೆಗಳನ್ನ ನೋಡಬೇಕಾ ಅಂತ ಜನ ಕೇಳ್ತಾ ಇದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರು ಸಾವನ್ನಪ್ಪುತ್ತಿದ್ದಾರೆ. ರಾಜ್ಯದಲ್ಲಿ ಹಲವು ಸಮಸ್ಯೆಗಳು ಇವೆ. ಅದನ್ನು ಮೊದಲು ಬಗೆಹರಿಸಿ ಅಂತ ಹೇಳ್ತಿದ್ದಾರೆ. ಜನ ಅದೃಷ್ಟ ಮಾಡಿದ್ದಾರೆ ಬಿಡಿ ಅಂತಲೂ ಕೆಲವರು ವ್ಯಂಗ್ಯವಾಡಿದ್ದಾರೆ.
ಸ್ಕೈಡೆಕ್ ಯೋಜನೆಯ ಉದ್ದೇಶವೇನು ?
ಬೆಂಗಳೂರಿನಲ್ಲಿ ಪ್ರವಾಸೋದ್ಯಮ ಹಾಗೂ ವಿವಿಧ ಉದ್ದೇಶದಿಂದ ಈ ಗೋಪುರವನ್ನು ನಿರ್ಮಿಸಲಾಗುತ್ತಿದೆ. ಸ್ಕೈಡೆಕ್ ನಿರ್ಮಿಸುವುದಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇನ್ನು ಈ ಗೋಪುರವು ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಿರ್ಮಾಣ ಆಗಲಿದೆ ಎನ್ನುವುದು ವಿಶೇಷ. ಈ ಪ್ಲಾನ್‌ನಿಂದ ಬೆಂಗಳೂರಿನಲ್ಲಿ ಟೂರಿಸಂ, ಬೆಂಗಳೂರು ನಗರವನ್ನು ನೋಡುವುದು, ಉದ್ಯೋಗಾವಕಾಶ ಸೃಷ್ಟಿ. ಈ ಯೋಜನೆಯ ಮೂಲಕ ಆದಾಯ ಹೆಚ್ಚಿಸುವುದು. ಬೆಂಗಳೂರಿಗೆ ಹೊಸ ಮಾರ್ಡನ್ ಟಚ್ ಕೊಡುವುದು ಈ ಯೋಜನೆಯ ಪ್ಲಾನ್ ಆಗಿದೆ ಅಂತ ಹೇಳಲಾಗಿದೆ.
ಇನ್ನು ಬೆಂಗಳೂರಿನಲ್ಲಿ 250.00 ಮೀ ಎತ್ತರದ ಸ್ಕೈಡೆಕ್ ನಿರ್ಮಿಸಲು ಇರುವ ಪ್ರಮುಖ ಜಾಗಗಳನ್ನು ಬಿಬಿಎಂಪಿ ಅಂತಿಮ ಪಟ್ಟಿ ಮಾಡಿದೆ. ಹೆಮ್ಮಿಗೆಪುರ (ನೈಸ್ ಕ್ಲೋವರ್ ಲೀಫ್ ಹತ್ತಿರ), ಬೆಂಗಳೂರು ವಿಶ್ವ ವಿದ್ಯಾಲಯ - ಜ್ಞಾನಭಾರತಿ, ಕೊಮ್ಮಘಟ್ಟ (ನೈಸ್‌ರಸ್ತೆ ಹತ್ತಿರ) ಜಾಗಗಳನ್ನು ಶಾರ್ಟ್ ಲಿಸ್ಟ್ ಮಾಡಿಕೊಳ್ಳಲಾಗಿದೆ.
ಹೆಮ್ಮಿಗೆಪುರ (ನೈಸ್ ಕ್ಲೋವರ್ ಲೀಫ್ ಹತ್ತಿರ) ಹೋಗುವುದಕ್ಕೆ ತುಮಕೂರು, ಕನಕಪುರ, ಮೈಸೂರು, ಹೊಸೂರು ರಸ್ತೆಗಳಿಂದ ನೈಸ್ ರಸ್ತೆ ಮೂಲಕ ವಾಹನ ಸಂಪರ್ಕ ಸಾಧ್ಯವಿದೆ. ಅಲ್ಲದೆ ಈ ಜಾಗವು ಹೊರ ವಲಯದಲ್ಲಿರುವುದರಿಂದ ಇಲ್ಲಿ ಆಕಾಶಗೋಪುರ ನಿರ್ಮಿಸುವ ಸಮಯದಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಇಲ್ಲ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ಕಡಿಮೆ. ಅಲ್ಲದೆ ತುರಹಳ್ಳಿ ಕಾಡಿನ ಪ್ರದೇಶ ಹಸಿರು ತುಂಬಿದೆ. ಬೆಂಗಳೂರನ್ನು ವೀಕ್ಷಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಹೆಮ್ಮಿಗೆಪುರ ನೈಸ್‌ರಸ್ತೆ ಹತ್ತಿರ ಜಾಗವನ್ನು ಪ್ರಥಮ ಆಯ್ಕೆ ಮಾಡಿಕೊಂಡಿರುವುದಾಗಿಯೂ ಬಿಬಿಎಂಪಿ ಹೇಳಿದೆ.
ಬೆಂಗಳೂರಿನಲ್ಲಿ ರಸ್ತೆಗುಂಡಿಗಳ ಸಂಖ್ಯೆ ಹೆಚ್ಚಳವಾಗಿದೆ. ಕುಡಿರುವ ನೀರಿನ ಸಮಸ್ಯೆ ಇದೆ. ಅಲ್ಲದೆ ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿ ಇದ್ದಾರೆ. ಬಾಣಂತಿಯರ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಬೆಂಗಳೂರಿನಲ್ಲಿ ಸುಮ್ಮನೆ 350 ಕೋಟಿ ರೂಪಾಯಿ ಸುರಿದು ಆಕಾಶಗೋಪುರ ನಿರ್ಮಾಣ ಮಾಡುವ ಅವಶ್ಯಕತೆ ಏನಿದೆ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.
-
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ












Click it and Unblock the Notifications