ಬೆಂಗಳೂರು: ಬೇಬಿ ಕೇರ್‌ನಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ
ಬೆಂಗಳೂರು, ಮೇ. 13: ಬೆಂಗಳೂರು ಮತ್ತೆ ಬೆಚ್ಚಿಬಿದ್ದಿದೆ. ಬೇಬಿ ಕೇರ್ ನಲ್ಲಿ 3 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆಘಾತಕಾರಿ ಪ್ರಕರಣ ಬೆಂಗಳೂರಿನ ಜೆಜೆ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗುರುವಾರ ಮಧ್ಯಾಹ್ನ ಘಟನೆ ನಡೆದಿದ್ದು ಸಂಜೆ ಬಾಲಕಿಯ ಪಾಲಕರು ಠಾಣೆಗೆ ತೆರಳಿ ಪ್ರಕರಣ ದಾಖಲು ಮಾಡಿದ್ದಾರೆ. ಪೊಲೀಸರು ಲಯಂಗಿಕ ದೌರ್ಜನ್ಯ ನಡೆಸಿದ ಆರೋಪಿ ಬೇಬಿ ಕೇರ್ ಮಾಲೀಕನನ್ನು ಬಂಧಿಸಿದ್ದಾರೆ.[ಬೇಸಿಗೆ ಶಿಬಿರ, ಬೆಂಗಳೂರು ಪಾಲಕರೇ ಎಚ್ಚರ]

ಪೋಕ್ಸೋ ಕಾಯ್ದೆಯಡಿ ಆರೋಪಿ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಕೆಲ ದಿನಗಳ ಹಿಂದೆ ಬೇಸಿಗೆ ಶಿಬಿರಕ್ಕೆ ತೆರಳಿದ್ದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣ ಬೆಂಗಳೂರನ್ನು ಬೆಚ್ಚಿ ಬೀಳಿಸಿತ್ತು.[ಬೆಂಗಳೂರಿನಲ್ಲಿ ಎಲ್ಲ ಆಟೋ ಏರೋದು ಸೇಫಲ್ಲ]












Click it and Unblock the Notifications