Breaking: ಒಂದೇ ದಿನ 3 ಕೊರೊನಾ ಕೇಸ್ ಪತ್ತೆ, ಸೋಂಕಿತರ ಸಂಖ್ಯೆ 18ಕ್ಕೆ ಏರಿಕೆ
ಬೆಂಗಳೂರು, ಮಾರ್ಚ್ 21: ಕರ್ನಾಟಕ ರಾಜ್ಯದಲ್ಲಿ ಮತ್ತೆ ಎರಡು ಕೊರೊನಾ ಕೇಸ್ ದೃಢಪಟ್ಟಿದೆ. ಇಂದು ಬೆಳಿಗ್ಗೆ ಚಿಕ್ಕಬಳ್ಳಾಪುರದ ಗೌರಿಬಿದನೂರಿನಲ್ಲಿ, ಮೆಕ್ಕಾ ಪ್ರವಾಸದಿಂದ ಹಿಂತಿರುಗಿದ್ದ 32 ವರ್ಷದ ವ್ಯಕ್ತಿಯೊಬ್ಬರಿಗೆ #Covid19 ಸೋಂಕು ಪತ್ತೆಯಾಗಿತ್ತು.
ಇದೀಗ, ಮತ್ತೆ ಇಬ್ಬರಲ್ಲಿ ಕೊರೊನಾ ಸೋಂಕು ಖಚಿತವಾಗಿದೆ ಎಂದು ಕರ್ನಾಟಕ ಆರೋಗ್ಯ ಇಲಾಖೆ ಹೆಲ್ತ್ ಬುಲಿಟಿನ್ ಬಿಡುಗಡೆ ಮಾಡಿದೆ. ಈ ಬಗ್ಗೆ ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿ ಒಂದೇ ದಿನ ಮೂರು ಜನರಿಗೆ ಸೋಂಕು ದೃಢಪಟ್ಟಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

''ರಾಜ್ಯದಲ್ಲಿ ಇಂದು 3 ಜನರಲ್ಲಿ #Covid_19 ಸೋಂಕು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 18ಕ್ಕೆ ಏರಿದೆ. ನಾಗರಿಕರು ಎಲ್ಲಾ ಮುಂಜಾಗೃತಾ ಕ್ರಮಗಳನ್ನು ತಪ್ಪದೇ ಕೈಗೊಳ್ಳಬೇಕೆಂದು ವಿನಂತಿಸುತ್ತೇನೆ'' ಎಂದು ಟ್ವೀಟ್ ಮಾಡಿದ್ದಾರೆ.
ರಾಜ್ಯದಲ್ಲಿ ಇಂದು 3 ಜನರಲ್ಲಿ #Covid_19 ಸೋಂಕು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 18ಕ್ಕೆ ಏರಿದೆ. ನಾಗರಿಕರು ಎಲ್ಲಾ ಮುಂಜಾಗೃತಾ ಕ್ರಮಗಳನ್ನು ತಪ್ಪದೇ ಕೈಗೊಳ್ಳಬೇಕೆಂದು ವಿನಂತಿಸುತ್ತೇನೆ.
— B Sriramulu (@sriramulubjp) March 21, 2020
ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 18ಕ್ಕೆ ಏರಿದೆ. ಇಂದು ಖಚಿತವಾದ ಸೋಂಕಿತರಲ್ಲಿ ಒಬ್ಬರು ಚಿಕ್ಕಬಳ್ಳಾಪುರದ ಗೌರಿಬಿದನೂರಿನವರು. ಉಳಿದ ಇಬ್ಬರು ಎಲ್ಲಿಯವರು ಎಂಬ ಮಾಹಿತಿ ಸದ್ಯಕ್ಕೆ ಗೌಪ್ಯವಾಗಿದೆ.
ಜಿಲ್ಲಾವಾರು ನೋಡುವುದಾದರೆ, ಬೆಂಗಳೂರು 13, ಕಲಬುರಗಿ 3 (ಒಂದು ಸಾವು ಸೇರಿ), ಮಡಿಕೇರಿ 1, ಚಿಕ್ಕಬಳ್ಳಾಪುರ 1 ಸೇರಿ ಒಟ್ಟು ರಾಜ್ಯದಲ್ಲಿ 18 ಸೋಂಕಿತರು ದೃಢಪಟ್ಟಿದ್ದಾರೆ.











Click it and Unblock the Notifications