ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಮೇಯರ್ ಹಾಗೂ ಉಪಮೇಯರ್ ಅಧಿಕಾರಾವಧಿ ಹೆಚ್ಚಳ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 8: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಅವರ ಆಡಳಿತ ಅವಧಿಯನ್ನು ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ.

Recommended Video

Siddharaj kalyankar , ಹಿರಿಯ ಧಾರವಾಹಿ ಹಾಗು ಚಲನಚಿತ್ರ ನಟ ಇನ್ನಿಲ್ಲ | Oneindia Kannada

ಪ್ರಸ್ತುತ ಇರುವ ಒಂದು ವರ್ಷದ ಬದಲಿಗೆ 30 ತಿಂಗಳು ( ಎರಡೂವರೆ) ವರ್ಷಗಳಿಗೆ ಹೆಚ್ಚಿಸಲಾಗಿದೆ. ನಗರದಲ್ಲಿನ ವಾರ್ಡ್ ಗಳ ಸಂಖ್ಯೆಯನ್ನು 198ರಿಂದ 225ಕ್ಕೆ ಏರಿಕೆ ಮಾಡಲು ನಿರ್ಧರಿಸಲಾಗಿದೆ.

ಬಿಬಿಎಂಪಿ ಚುನಾವಣೆ ಸದ್ಯಕ್ಕಿಲ್ಲ; ಆಡಳಿತಾಧಿಕಾರಿ ನೇಮಕಬಿಬಿಎಂಪಿ ಚುನಾವಣೆ ಸದ್ಯಕ್ಕಿಲ್ಲ; ಆಡಳಿತಾಧಿಕಾರಿ ನೇಮಕ

ಬಿಬಿಎಂಪಿ ಆಯುಕ್ತರನ್ನು ಇನ್ನು ಮುಂದೆ ಮುಖ್ಯ ಆಯುಕ್ತರು ಎಂದು ಕರೆಯಲಾಗುತ್ತದೆ. ಪ್ರಸ್ತುತ ಇರುವ 8 ವಲಯಗಳನ್ನು ಐದು ಅಥವಾ 10-12ಕ್ಕೆ ಪ್ರತ್ಯೇಕಿಸುವ ಸಂಬಂಧ ಮುಂದಿನ ವಾರ ನಡೆಯಲಿರುವ ಸಭೆಯಲ್ಲಿಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

3 Month Term For BBMP Mayor And Deputy Mayor

ಜಂಟಿ ವಿಧಾನಸಭೆ ಬೃಹತ್ ಮಹಾನಗರ ಪಾಲಿಕೆ ಪುನರಚನಾ ಸಮಿತಿ ಮಾಡಿದ್ದ ಈ ಶಿಫಾರಸ್ಸುಗಳಿಗೆ ರಾಜ್ಯ ಸರ್ಕಾರ ಸೋಮವಾರ ಅನುಮೋದನೆ ನೀಡಿದೆ.

12 ಸ್ಥಾಯಿ ಸಮಿತಿಗಳ ಬದಲಿಗೆ 8 ಸ್ಥಾಯಿ ಸಮಿತಿಗಳಿಗೆ ಇಳಿಸಲು ನಿರ್ಧರಿಸಲಾಗಿದೆ. ವಿಧಾನ ಪರಿಷತ್ ಸದಸ್ಯರು ಕೂಡಾ ಬಿಬಿಎಂಪಿ ಕೌನ್ಸಿಲ್ ನಲ್ಲಿ ಮತ ಚಲಾಯಿಸುವ ಹಕ್ಕನ್ನು ಪಡೆಯಲು ಸರ್ಕಾರ ಅನುಮತಿ ನೀಡಿದೆ.

ಮೇಯರ್ ಮತ್ತು ಪಾಲಿಕೆ ಸದಸ್ಯರ ಅವಧಿ ಸೆಪ್ಟೆಂಬರ್ 10ಕ್ಕೆ ಮುಗಿಯಲಿದೆ. ಮುಂದಿನ ಚುನಾವಣೆಯ ನಂತರ ಇದು ಜಾರಿಗೆ ಬರಲಿದೆ. ಕಳೆದ ವಾರ ನಡೆದ ಮೊದಲ ಸಭೆಯಲ್ಲಿ ಚರ್ಚೆ ಮಾಡಿದ ರೀತಿಯಲ್ಲಿ ಸೋಮವಾರ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ.

English summary
The Select Committee of legislators constituted to study the draft Bruhat Bengaluru Mahanagara Palike bill.2020 is likely to recommend an extenstion of Mayor's term for the present one year to Two and half years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X