ಬೆಂಗಳೂರಿನಲ್ಲಿ ಲೋಡ್ ಶೆಡ್ಡಿಂಗ್ ಅವಧಿ 1 ಗಂಟೆ ಕಡಿತ
ಬೆಂಗಳೂರು, ಸೆ.15 : ಉದ್ಯಾನ ನಗರಿ ಬೆಂಗಳೂರಿನಲ್ಲಿ ಲೋಡ್ ಶೆಡ್ಡಿಂಗ್ ಅವಧಿಯನ್ನು ಒಂದು ಗಂಟೆ ಕಡಿತಗೊಳಿಸಲಾಗಿದೆ. ಪ್ರತಿದಿನ ಬೆಂಗಳೂರಿನಲ್ಲಿ 4 ಗಂಟೆ ಲೋಡ್ ಶೆಡ್ಡಿಂಗ್ ಜಾರಿಯಲ್ಲಿತ್ತು. ಮಂಗಳವಾರದಿಂದ ಇದು 3 ಗಂಟೆಗಳಿಗೆ ಇಳಿಕೆಯಾಗಿದೆ.
ಉಡುಪಿ ಮತ್ತು ಬಳ್ಳಾರಿಯ ಉಷ್ಣವಿದ್ಯುತ್ ಸ್ಥಾವರದ ಒಂದು ಘಟಕಗಳು ಪುನರಾರಂಭಗೊಂಡಿದ್ದರಿಂದ ನಗರದಲ್ಲಿ ಲೋಡ್ ಶೆಡ್ಡಿಂಗ್ ಅವಧಿಯನ್ನು ಒಂದು ಗಂಟೆ ಕಡಿತಗೊಳಿಸಲಾಗಿದೆ. ಸೆ.15ರಿಂದಲೇ ಈ ವೇಳಾಪಟ್ಟಿ ಜಾರಿಗೆ ಬರಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ಹೇಳಿದ್ದಾರೆ. [ವಿದ್ಯುತ್ ಕೊರತೆ ಶಾಶ್ವತ ಕ್ರಮಗಳು]

ವಿದ್ಯುತ್ ಕೊರತೆಯ ಕಾರಣ ಕಳೆದ ವಾರ ನಗರದಲ್ಲಿ ಪ್ರತಿದಿನ 4 ಗಂಟೆ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿತ್ತು. ಈಗ ಅದನ್ನು ಮೂರು ಗಂಟೆಗಳಿಗೆ ಇಳಿಕೆ ಮಾಡಲಾಗಿದೆ. ಆದರೆ, ಎಷ್ಟು ದಿನದ ತನಕ ಈ ವೇಳಾಪಟ್ಟಿ ಜಾರಿಯಲ್ಲಿರುತ್ತದೆ ಎಂಬುದು ಮಾತ್ರ ತಿಳಿದುಬಂದಿಲ್ಲ.
ಎಲ್ಲಿ ಎಷ್ಟು ಕಡಿತ : ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಬೆಸ್ಕಾಂ) ನೀಡಿರುವ ಮಾಹಿತಿಯಂತೆ ವಸತಿ ಪ್ರದೇಶಗಳಲ್ಲಿ 3 ಗಂಟೆ, ವಾಣಿಜ್ಯ ಪ್ರದೇಶದಲ್ಲಿ 1 ಗಂಟೆ ಮತ್ತು ಕೈಗಾರಿಕಾ ಪ್ರದೇಶದಲ್ಲಿ 1 ಗಂಟೆ ಲೋಡ್ ಶೆಡ್ಡಿಂಗ್ ಜಾರಿಯಲ್ಲಿರುತ್ತದೆ. [ಬೆಂಗಳೂರಲ್ಲಿ 4 ಗಂಟೆ ಲೋಡ್ ಶೆಡ್ಡಿಂಗ್]
ಬೆಂಗಳೂರು ನಗರಕ್ಕೆ ಪ್ರತಿದಿನ 4 ಸಾವಿರ ಮೆಗಾವಾಟ್ ವಿದ್ಯುತ್ ಅಗತ್ಯವಿದೆ. ಪ್ರದೇಶಗಳ ವಿದ್ಯುತ್ ಬಳಕೆಗೆ ಅನುಗುಣವಾಗಿ ಲೋಡ್ ಶೆಡ್ಡಿಂಗ್ ಜಾರಿಯಲ್ಲಿರುತ್ತದೆ. ಲೋಡ್ ಶೆಡ್ಡಿಂಗ್ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಬೆಸ್ಕಾಂ ವೆಬ್‌ಸೈಟ್‌ಗೆ ಭೇಟಿ ನೀಡಿ.












Click it and Unblock the Notifications