ವಿದೇಶದಿಂದ ಏರ್‌ಲಿಫ್ಟ್: ಬೆಂಗಳೂರಿಗೆ ಎಷ್ಟು ಜನ ಬರ್ತಿದ್ದಾರೆ?

ಬೆಂಗಳೂರು, ಮೇ 5: ಕೊರೊನಾ ವೈರಸ್ ಲಾಕ್‌ಡೌನ್‌ನಿಂದ ವಿದೇಶದಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಕರೆತರಲು ಸರ್ಕಾರ ಸಿದ್ಧವಾಗಿದ್ದು, ಮೇ 7ರಿಂದ ಆಪರೇಷನ್ ಪ್ರಾರಂಭಿಸಲಿದೆ.

ಮೊದಲನೇ ಹಂತದಲ್ಲಿ ಸುಮಾರು 13 ದೇಶಗಳಿಂದ 14 ಸಾವಿರ ಜನರನ್ನು ಭಾರತಕ್ಕೆ ಕರೆತರಲು ಯೋಜನೆ ರೂಪಿಸಿದೆ. ಏಳು ದಿನಗಳು ಕಾಲ 64 ವಿಮಾನಗಳು ವಿದೇಶದಿಂದ ಜನರನ್ನು ಭಾರತದ ವಿವಿಧ ರಾಜ್ಯಗಳಿಗೆ ಕರೆದುಕೊಂಡು ಬರಲಿದೆ.

14 ಸಾವಿರ ಜನರ ಪೈಕಿ ಬೆಂಗಳೂರಿಗೆ ಎಷ್ಟು ಜನ ಬರಲಿದ್ದಾರೆ ಎಂಬ ಕುತೂಹಲ ಕಾಡುತ್ತಿದೆ. ಕೇಂದ್ರ ಸರ್ಕಾರ ಈಗಾಗಲೇ ಈ ಕುರಿತು ಪಟ್ಟಿ ಬಿಡುಗಡೆ ಮಾಡಿದ್ದು, ಯಾವ ಯಾವ ರಾಜ್ಯಕ್ಕೆ ಎಷ್ಟು ವಿಮಾನ ತಲುಪಲಿದೆ ಮತ್ತು ಅದರಲ್ಲಿ ಎಷ್ಟು ಜನರು ಇರಲಿದ್ದಾರೆ ಎಂದು ಮಾಹಿತಿ ನೀಡಿದೆ.

ಬೆಂಗಳೂರಿಗೆ ಮೂರು ವಿಮಾನ

ಬೆಂಗಳೂರಿಗೆ ಮೂರು ವಿಮಾನ

ಒಟ್ಟು 64 ವಿಮಾನಗಳ ಪೈಕಿ ಬೆಂಗಳೂರಿಗೆ ಕೇವಲ 3 ವಿಮಾನ ಮಾತ್ರ ಈ ಆಪರೇಷನ್‌ನಲ್ಲಿ ಬಂದಿಳಿಯಲಿದೆ. ಮೇ 7 ರಂದು ಮೊದಲ ದಿನ ಬೆಂಗಳೂರಿಗೆ ಯಾವ ವಿಮಾನವೂ ಬರಲ್ಲ. ಎರಡನೇ ದಿನ ಲಂಡನ್‌ನಿಂದ ಸುಮಾರು 200 ಜನರನ್ನು ಹೊತ್ತು ವಿಮಾನ ಬರಲಿದೆ.

ಎರಡನೇ ವಿಮಾನದಲ್ಲಿ ಎಷ್ಟು ಜನ?

ಎರಡನೇ ವಿಮಾನದಲ್ಲಿ ಎಷ್ಟು ಜನ?

ಮೂರನೇ ದಿನ, ನಾಲ್ಕನೇ ದಿನ ಬೆಂಗಳೂರಿಗೆ ವಿಮಾನ ಇಲ್ಲ. ಐದನೇ ದಿನ ಯುಎಸ್‌ನ ಸ್ಯಾನ್ ಫ್ರಾನ್ಸಿಸ್ಕೋದಿಂದ 300 ಜನರನ್ನು ಒಳಗೊಂಡು ವಿಮಾನ ಬೆಂಗಳೂರಿಗೆ ಬರಲಿದೆ. ಇದರಲ್ಲಿ ದೆಹಲಿಗೆ ಹೋಗುವ ಪ್ರಯಾಣಿಕರು ಇರಲಿದ್ದಾರೆ. ಹಾಗಾಗಿ, ನಿರ್ದಿಷ್ಟವಾಗಿ ಎಷ್ಟು ಜನ ಬೆಂಗಳೂರಿನವರು ಎಂದು ಸದ್ಯಕ್ಕೆ ಮಾಹಿತಿ ಇಲ್ಲ.

ಒಟ್ಟು ಎಷ್ಟು ಜನ ಬೆಂಗಳೂರಿಗೆ?

ಒಟ್ಟು ಎಷ್ಟು ಜನ ಬೆಂಗಳೂರಿಗೆ?

ಮತ್ತೆ ಆರನೇ ದಿನ ಸಿಂಗಾಪುರದಿಂದ 200 ಜನರನ್ನು ಒಳಗೊಂಡು ವಿಮಾನ ಬೆಂಗಳೂರಿಗೆ ಬರಲಿದೆ. ಅಲ್ಲಿಗೆ ಮೂರು ವಿಮಾನದಲ್ಲಿ ಸಿಲಿಕಾನ್ ಸಿಟಿಗೆ 500-700 ಮಂದಿವರೆಗೂ ಬಂದಿಳಿಯಲಿದ್ದಾರೆ. ಇದು ಮೊದಲ ಹಂತದ ಏರ್‌ಲಿಫ್ಟ್ ಆಗಿದ್ದು, ಕೇವಲ ಮೂರು ದೇಶಗಳಿಂದ ಮಾತ್ರ ಸಿಲಿಕಾನ್‌ ಸಿಟಿಗೆ ಜನರು ಪ್ರವೇಶ ಮಾಡಲಿದ್ದಾರೆ.

ಕ್ವಾರೆಂಟೈನ್‌ ಕಡ್ಡಾಯ

ಕ್ವಾರೆಂಟೈನ್‌ ಕಡ್ಡಾಯ

ಈ ವಿಮಾನಗಳಲ್ಲಿ ಬರುವ ಎಲ್ಲರಿಗೂ 14 ದಿನಗಳ ಕ್ವಾರೆಂಟೈನ್‌ ಕಡ್ಡಾಯವಾಗಿರುವುದರಿಂದ, ಇವರನ್ನು ದೊಡ್ಡಬಳ್ಳಾಪುರ ಮತ್ತು ಮಂಗಳೂರಿನ ಖಾಸಗಿ ಹೋಟೆಲ್, ವಸತಿ ಗೃಹಗಳಲ್ಲಿ ಗೃಹಬಂಧನದಲ್ಲಿಡಲು ಸರ್ಕಾರ ತೀರ್ಮಾನಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+