288 ಕಿ.ಮೀ ಉದ್ದದ ಈ ಯೋಜನೆಯಿಂದ ಕರ್ನಾಟಕದ 12 ಪ್ರದೇಶಗಳ ಭೂಮಿಗೆ ಚಿನ್ನದ ಬೆಲೆ!
ದಕ್ಷಿಣ ಭಾರತದ ರಾಜ್ಯಗಳಲ್ಲಿ ಬೆಂಗಳೂರು ಹಾಗೂ ಚೆನ್ನೈ ನಗರಗಳು ಸಹೋದರರಂತೆ ಅಭಿವೃದ್ಧಿ ಹೊಂದುತ್ತಿವೆ. ಈ ಎರಡೂ ನಗರಗಳ ನಡುವೆ ಹಲವು ಕ್ಷೇತ್ರಗಳಲ್ಲಿ ಪೈಪೋಟಿ ಇದೆ. ಇದೀಗ ಈ ಎರಡೂ ನಗರಗಳ ನಡುವೆ ಸಂಪರ್ಕ ಕಲ್ಪಿಸುವ ಪ್ರಮುಖ ಯೋಜನೆ ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಯೋಜನೆ (ಎಕ್ಸ್‌ಪ್ರೆಸ್‌ವೇ) Town Ring Road (STRR)ಯಿಂದ ಭರ್ಜರಿ ಲಾಭವಾಗಲಿದೆ. ಈ ಯೋಜನೆಯಿಂದ ಟ್ರಾಫಿಕ್ ಜಾಮ್ ಕಂಟ್ರೋಲ್‌ನೊಂದಿಗೆ ಕರ್ನಾಟಕ ಹಾಗೂ ತಮಿಳುನಾಡಿನ 12 ಪ್ರಮುಖ ಪ್ರದೇಶಗಳಲ್ಲಿ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಮುಂದಿನ ದಿನಗಳಲ್ಲಿ ವಿವಿಧ ಪ್ರದೇಶಗಳಲ್ಲಿ ಭೂಮಿ ಬೆಲೆ ಭರ್ಜರಿ ಹೆಚ್ಚಳವಾಗಲಿದೆ ಎಂದು ಹೇಳಲಾಗಿದೆ.
ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಎಕ್ಸ್‌ಪ್ರೆಸ್‌ವೇ ಯೋಜನೆ ಎಂದರೇನು ಹಾಗೂ ಈ ಯೋಜನೆಯಿಂದ ಬೆಂಗಳೂರು ಹಾಗೂ ಕರ್ನಾಟಕದ ಯಾವೆಲ್ಲ ಪ್ರದೇಶಗಳಿಗೆ ಲಾಭವಾಗಲಿದೆ ಎನ್ನುವುದರ ಸಂಪೂರ್ಣ ವಿವರ ನೋಡೋಣ. ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಯೋಜನೆಯಿಂದ 12 ಪ್ರದೇಶದಲ್ಲಿ ಭೂಮಿಗೆ ಚಿನ್ನದ ಬೆಲೆ ಬರುವ ನಿರೀಕ್ಷೆ ಮೂಡಿದೆ. ಬೆಂಗಳೂರು ಬೆಳೆದಂತೆ ಭಾರೀ ಟ್ರಾಫಿಕ್ ಜಾಮ್ ಸಮಸ್ಯೆಯೂ ಎದುರಾಗಿದ್ದು. ಇನ್ನಷ್ಟು ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಇದರೊಂದಿಗೆ ಈ ಯೋಜನೆಯಿಂದಾಗಿ ರಿಯಲ್ ಎಸ್ಟೇಟ್‌ಗೂ ಪೂರಕ ವಾತಾವರಣ ನಿರ್ಮಾಣವಾಗಿದೆ ಎಂದು tradebrains ವರದಿ ಮಾಡಿದೆ.

Town Ring Road (STRR) ಕೇಂದ್ರ ಸರ್ಕಾರದ ಪ್ರಮುಖ ಹಾಗೂ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಇದು ಸಹ ಒಂದು. ಬೆಂಗಳೂರಿನ ಉಪ ನಗರ ವರ್ತುಲ ರಸ್ತೆ ಯೋಜನೆ (ಎಸ್‌ಟಿಆರ್‌ಆರ್)ಗೆ ಭರ್ಜರಿ ಸಿದ್ಧತೆ ನಡೆದಿದ್ದು. ಬೆಂಗಳೂರು ಹಾಗೂ ಬೆಂಗಳೂರು ಸುತ್ತಮುತ್ತಲಿನ ಪ್ರದೇಶದ ಎಂಟು ಕೈಗಾರಿಕಾ ಪ್ರದೇಶಗಳಿಗೆ ಈ ಯೋಜನೆ ಸಂಪರ್ಕ ಕಲ್ಪಿಸಲಿದೆ. ಕರ್ನಾಟಕದಲ್ಲಿ ಅಂದಾಜು 243 ಕಿ.ಮೀ. ದೂರ ಈ ಎಕ್ಸ್‌ಪ್ರೆಸ್‌ವೇ ಇದಾಗಿದೆ. ಯೋಜನೆಗೆ ಬರೋಬ್ಬರಿ 4,750 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಹೇಳಲಾಗಿದೆ. ಈ ಯೋಜನೆಯು 4 ರಿಂದ 6 ಪಥದಲ್ಲಿ ನಿರ್ಮಾಣವಾಗಲಿದೆ. ಅಲ್ಲದೇ ಸಂಪೂರ್ಣ ನಿಯಂತ್ರಿತ ಪ್ರವೇಶ ವ್ಯವಸ್ಥೆ ಇರಲಿದೆ. ಬೆಂಗಳೂರು ಸುತ್ತಲಿನ ಉಪ ನಗರಗಳ ಮೂಲಕ ರಸ್ತೆ ಸಂಪರ್ಕ ಇರಲಿದೆ. ಇದರಿಂದ ಈ ಭಾಗದಲ್ಲಿ ಭೂಮಿಗೆ ಬಂಗಾರದ ಬೆಲೆ ಬರುತ್ತಿದ್ದು. ಮುಂದಿನ ವರ್ಷಗಳಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಕಡಿಮೆ ಆಗಲಿದೆ ಎಂದು ಹೇಳಲಾಗಿದೆ.
ಈ ಭಾಗದಲ್ಲಿ ಭೂಮಿಗೆ ಭರ್ಜರಿ ಬೆಲೆ: 12 ಪ್ರದೇಶಗಳಿಗೆ ಲಾಭ!
ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಯೋಜನೆ ಕರ್ನಾಟಕದಲ್ಲಿ 243 ಕಿ.ಮೀ ಮತ್ತು ತಮಿಳುನಾಡಿನಲ್ಲಿ 45 ಕಿ.ಮೀ ಉದ್ದ ಸೇರಿ ಒಟ್ಟಾರೆ 288 ಕಿ.ಮೀ ಉದ್ದ ಇರಲಿದೆ ಎಂದು ಅಂದಾಜಿಸಲಾಗಿದೆ. ಮುಖ್ಯವಾಗಿ ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಕನಕಪುರ, ರಾಮನಗರ, ಅತ್ತಿಬೆಲೆ, ಆನೇಕಲ್, ಮಾಗಡಿ, ಸರ್ಜಾಪುರ, ಬಿಡದಿ ಹಾಗೂ ದಾಬಸ್‌ಪೇಟೆಗೆ ಭರ್ಜರಿ ಲಾಭವಾಗಲಿದೆ ಎಂದೇ ಹೇಳಲಾಗುತ್ತಿದೆ. ಈಗಾಗಲೇ ಈ ಪ್ರಮುಖ ಪ್ರದೇಶಗಳಲ್ಲಿ ವಿವಿಧ ಕಾರಣಕ್ಕೆ ರಿಯಲ್ ಎಸ್ಟೇಟ್ ಚುರುಕು ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಭೂಮಿಯ ಬೆಲೆ ಚಿನ್ನದ ಬೆಲೆಯನ್ನೂ ಮಿರಿಸಲಿದೆ ಅಂತಲೇ ಹೇಳಲಾಗುತ್ತಿದೆ. ಇದು ಬೆಂಗಳೂರು ಮತ್ತು ಸುತ್ತಮುತ್ತಲಿನ ಉಪನಗರ ಪ್ರದೇಶಗಳನ್ನು ಸಂಪರ್ಕಿಸುತ್ತದೆ. ಅಲ್ಲದೇ ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್ ಹೈವೇ ಸೇರಲಿದೆ. ನಗರದ ಸುತ್ತಲಿನ ವೃತ್ತಾಕಾರದ ಕಾರಿಡಾರ್‌ಗೆ ಸಂಪರ್ಕಿಸುವ ಯೋಜನೆಯಾಗಿದ್ದು. ಈ ಯೋಜನೆಯು 6 ರಾಷ್ಟ್ರೀಯ ಹೆದ್ದಾರಿಗಳು ಹಾಗೂ 8 ರಾಜ್ಯ ಹೆದ್ದಾರಿಗಳನ್ನು ಸಂಪರ್ಕಿಸುತ್ತದೆ. 2027 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಮುಖ್ಯ ಉದ್ದೇಶವೇನು: ಇನ್ನು ಈ ಯೋಜನೆಯ ಮುಖ್ಯ ಉದ್ದೇಶ ಕೈಗಾರಿಕೆ ಹಾಗೂ ಉದ್ಯಮಕ್ಕೆ ಪೂರಕ ವಾತಾವರಣ ನಿರ್ಮಾಣ ಮಾಡುವುದೇ ಆಗಿದೆ. ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ಕನಸಿನ ಯೋಜನೆ ಇದಾಗಿದೆ. ಇದು ತಮಿಳುನಾಡಿನ ಹೊಸೂರು ಪ್ರದೇಶವನ್ನೂ ಸಂಪರ್ಕಿಸುತ್ತದೆ. ಕೈಗಾರಿಕೆಗಳಿಗೆ ಸರಕುಗಳನ್ನು (ವಸ್ತುಗಳನ್ನು) ಸಾಗಿಸುವ ಸಂದರ್ಭದಲ್ಲಿ ಯಾವುದೇ ಬೃಹತ್ ವಾಹನ ಬೆಂಗಳೂರು ನಗರದ ಒಳಗೆ ಬರದಂತೆ ನೋಡಿಕೊಳ್ಳುವುದು ಹಾಗೂ ಇದರೊಂದಿಗೆ ಕೈಗಾರಿಕೆಗೆ ಆಮದು ಮತ್ತು ರಫ್ತು ಸುಲಭ ಮಾಡುವುದು ಇದರ ಉದ್ದೇಶವಾಗಿದೆ ಎಂದು ಹೇಳಲಾಗಿದೆ.












Click it and Unblock the Notifications