ನಡುರಸ್ತೆಯಲ್ಲೇ ಯುವತಿಯನ್ನು ತಬ್ಬಿ ಲೈಂಗಿಕ ದೌರ್ಜನ್ಯ: ಜಿಮ್ ಟ್ರೈನರ್ ಬಂಧನ
ಬೆಂಗಳೂರು, ಡಿಸೆಂಬರ್ 18: ನಡುರಸ್ತೆಯಲ್ಲೇ ಯುವತಿಯನ್ನು ತಬ್ಬಿಕೊಂಡು ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ ಜಿಮ್ ಟ್ರೈನರ್ ಅಲ್ವಿನ್ ಎಂಬುವವರನ್ನು ಬಂಧಿಸಲಾಗಿದೆ.
ಕುಡಿದ ಮತ್ತಿನಲ್ಲಿ ರಸ್ತೆಯ ಮೇಲೆ ಹೋಗುತ್ತಿದ್ದ ಯುವತಿಯನ್ನು ತಬ್ಬಿಕೊಂಡು ಅಸಭ್ಯವಾಗಿ ವರ್ತಿಸಿ ಜೈಲು ಪಾಲಾಗಿದ್ದಾನೆ.
ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವತಿಯನ್ನು ಏಕಾಏಕಿ ತಬ್ಬಿಕೊಂಡಿದ್ದ ಆಕೆ ಬೆಚ್ಚಿ ಬಿದ್ದು ಒಮ್ಮೆಲೆ ಕೂಗಿಕೊಂಡಿದ್ದು ಸುತ್ತಮುತ್ತಲಿನ ಜನರು ಸಹಾಯಕ್ಕೆ ಬಂದು ಆತನನ್ನು ಬೆದರಿಸಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ರಾತ್ರಿ ಹೊತ್ತಾಗಿದ್ದರಿಂದ ಒಂಟಿ ಮಹಿಳೆ ಓಡಾಡುವುದು ಸರಿಯಲ್ಲ ಎಂದು ಡ್ರಾಪ್ ಕೊಡಲು ಮಾತನಾಡಿಸಿದೆ. ಆಕೆ ನನ್ನ ಮಾತನ್ನು ಕೇಳದೆ ಮುಂದೆ ನಡೆದಾಗ ಅವಮಾನವೆನಿಸಿತು ಹಾಗಾಗಿ ಆಕೆಯ ಹಿಂದೆಯೇ ಹೋಗಿ ತಬ್ಬಿಕೊಂಡೆ ಎಂದು ವಿಚಾರಣೆ ವೇಳೆ ಆರೋಪಿ ಸತ್ಯ ಬಾಯ್ಬಿಟ್ಟಿದ್ದಾನೆ.












Click it and Unblock the Notifications