• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆರ್‌ಟಿಓಗಳ ನೇಮಕಾತಿ ಶೀಘ್ರ: ಸಚಿವ ಡಿಸಿ ತಮ್ಮಣ್ಣ

|

ಬೆಂಗಳೂರು, ಡಿಸೆಂಬರ್ 27: ಆರ್‌ಟಿಓ ಕಚೇರಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಲಾಗುವುದು ಎಂದು ಸಚಿವ ಡಿಸಿ ತಮ್ಮಣ್ಣ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಲಿ ಇರುವ 271 ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಲಾಗುವುದು, ನಾನು ಸಚಿವರಾದ ಬಳಿಕ ಬಳಿಕ ಇಲಾಖೆಯಲ್ಲಿ 2.5 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಈಗಾಗಲೇ ನಿರ್ವಾಹಕ, ಚಾಲಕ ಹಾಗೂ ಮೆಕ್ಯಾನಿಕಲ್ ಹುದ್ದೆಗಳು ಕೂಡ ಭರ್ತಿಯಾಗಿವೆ.

ಯಾವ ವಾಹನ, ಯಾವ RTOಗೆ ಸೇರಿದ್ದು: ಇಲ್ಲಿದೆ ಫಿಂಗರ್ ಟಿಪ್ಸ್ ಮಾಹಿತಿ

ಆರ್‌ಟಿಓ ಅಧಿಕಾರಿಗಳ ನೇಮಕಾತಿ ನಿಟ್ಟಿನಲ್ಲಿ ಕೆಪಿಎಸ್‍ಸಿ ಜೊತೆಗೆ ಚರ್ಚೆ ನಡೆಸಲಾಗುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ವರ್ಷ ತರಬೇತಿ ಇರುತ್ತದೆ. ತರಬೇತಿ ಬಳಿಕವೂ ಒಂದು ಪರೀಕ್ಷೆ ನಡೆಸಿ, ಉತ್ತೀರ್ಣರಾಗುವ ಅಭ್ಯರ್ಥಿಗಳಿಗೆ ಸರ್ಕಾರಿ ಕೆಲಸ ನೀಡಲಾಗುತ್ತದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಆರ್‌ಟಿಓ ಅಧಿಕಾರಿಗಳ ಕೊರತೆ ಎದರುರಾಗಿದ್ದು, ಈ ನಿಟ್ಟಿನಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು. ಚೆಕ್‌ ಪೋಸ್ಟ್‌ಗಳಲ್ಲಿ ಹಣ ವಸೂಲಿ ವಿಚಾರ ಕುರಿತು ಮಾತನಾಡಿದ ಅವರು, ಚೆಕ್‌ಪೋಸ್ಟ್‌ಗಳನ್ನು ಮೇಲ್ದರ್ಜೆಗೇರಿಸಲು ಚಿಂತನೆ ನಡೆಸಲಾಗಿದೆ. ಸಿಸಿಟಿವಿ ಕ್ಯಾಮರಾ ಅಳವಡಿಸಲಾಗುತ್ತದೆ ಎಂದು ತಿಳಿಸಿದರು.

English summary
Every RTO working in two to three offices. So govt is decided to appoint new 271 RTO
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X