ಏರೋ ಶೋ ಅಗ್ನಿ ಅವಘಡ: 185 ಕಾರುಗಳಿಗೆ ವಿಮೆ ಹಣ

ಬೆಂಗಳೂರು, ಮಾರ್ಚ್ 26: ಯಲಹಂಕದ ವಾಯುನೆಲೆಯಲ್ಲಿ ನಡೆದ ಏರೋ ಶೋ ವೇಳೆ ಪಾರ್ಕಿಂಗ್‌ನಲ್ಲಿ ಬೆಂಕಿ ಕಾಣಿಸಿಕೊಂಡು 277 ಕಾರುಗಳು ಸುಟ್ಟು ಭಸ್ಮವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 185 ಕಾರುಗಳಿಗೆ ವಿಮಾ ಮೊತ್ತ ತಲುಪಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

21 ಕಾರುಗಳ ವಿಮೆ ಪಾಲಿಸಿ ಲ್ಯಾಪ್ಸ್ ಆಗಿದೆ. ಹೀಗಾಗಿ ಆ ಕಾರುಗಳ ಮಾಲೀಕರಿಗೆ ಪರಿಹಾರ ಸಿಗುವುದಿಲ್ಲ. ಇನ್ನುಳಿದ 71 ಕಾರುಗಳು ಹೊರ ರಾಜ್ಯದವರಿಗೆ ಸೇರಿವೆ ಅವರು ದಾಖಲೆಯನ್ನು ಇನ್ನೂ ಸಲ್ಲಿಸಿಲ್ಲ.

ವಿಮೆ ಇಲ್ಲದ 21 ಕಾರುಗಳ ಪೈಕಿ ಎಂಟು ಕಾರುಗಳು ವಿಮೆ ಅವಧಿ ಮುಗಿದಿದೆ. ಇನ್ನು 13 ಕಾರುಗಳು ಒಬ್ಬರಿಂದ ಮತ್ತೊಬ್ಬರಿಗೆ ಮಾರಾಟವಾಗಿದ್ದು ವಿಮೆ ಪಾವತಿ ಮಾಡಿಲ್ಲ. ಹೀಗಾಗಿ ಕಾರುಗಳಿಗೆ ವಿಮಾ ಪರಿಹಾರ ಸಿಗುವುದಿಲ್ಲ.

21 car insurance were lapsed in Aero india fire incident

ಘಟನಾ ಸ್ಥಳದಲ್ಲಿ ವಿಶೇಷ ಡೆಸ್ಕ್ ಆರಂಭಿಸಿದ್ದ ಕಾರಣ ಕಾರುಗಳ ಮಾಲೀಕರಿಗೆ ಪೊಲೀಸ್ ಇಲಾಖೆ ಸಾರಿಗೆ ಇಲಾಖೆಯಿಂದ ರಸೀದಿ ನೀಡಲಾಯಿತು. ಅಲ್ಲದೆ ವಿಮಾ ಕಂಪನಿಗಳು ಅವುಗಳನ್ನು ಸ್ವೀಕರಿಸಿದ ಕಾರಣ 12 ಕಾರುಗಳ ಮಾಲೀಕರು ನೇರವಾಗಿ ವಿಮೆ ಕ್ಲೇಮ್ ಮಾಡಿಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+