ಪ್ರೆಸ್ಟೀಜ್ ಸ್ಟೀಜ್ ಅಪಾರ್ಟ್‌ಮೆಂಟ್‌ನ 20 ಮಂದಿಗೆ ಅನಾರೋಗ್ಯ, ಆಸ್ಪತ್ರೆಗೆ ದಾಖಲು
ಬೆಂಗಳೂರು, ಏ.9: ಪ್ರೆಸ್ಟೀಜ್ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿರುವ 20ಕ್ಕೂ ಹೆಚ್ಚು ನಿವಾಸಿಗಳು ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಕಲುಷಿತ ನೀರು ಕುಡಿದು ಹರಳೂರು ಪ್ರೆಸ್ಟೀಜ್ ಫರ್ಮ್ಸ ರೆಸಿಡೆನ್ಸಿ ಅಪಾರ್ಟ್‌ಮೆಂಟ್ ನ ನಿವಾಸಿಗಳು ಆಸ್ಪತ್ರೆ ಸೇರಿದ್ದಾರೆ. 10-17ನೇ ಮಹಡಿಯ ನಿವಾಸಿಗಳು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ತೇಜಸ್, ಕೇಶವ್, ಅದಿತಿ, ನಕ್ಷ, ಅಭಿನವ, ಅರ್ಜಿತ್, ಪರಿಯದರ್ಶನ್, ತನಿಷ್ಕ್, ವೀರ್, ರಾಧಿಕಾ, ಆರವ್ ಹಾಗೂ ಸುಗುಣ ಗೋಪಿನಾಥನ್ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನುಳಿದ ಮಹಡಿಯ ನಿವಾಸಿಗಳಲ್ಲಿ ಕೂಡ ಇದೇ ರೀತಿ ಲಕ್ಷಣಗಳು ಕಂಡು ಬರುತ್ತಿವೆ ಎಂದು ಹೇಳಲಾಗುತ್ತಿದೆ. 2 ವರ್ಷದ ಮಗುವಿನ ಸ್ಥಿತಿ ಸ್ವಲ್ಪ ಗಂಭೀರವಾಗಿದೆ.

ಅಪಾರ್ಟ್‌ಮೆಂಟ್‌ನಲ್ಲಿ ಒಟ್ಟು 19 ಮಹಡಿಗಳಿವೆ. ಟ್ಯಾಂಕಿಗೆ ನೀರು ಪಂಪ್ ಮಾಡಲಾಗುತ್ತದೆ ಅದರಿಂದ ನಿವಾಸಿಗಳು ಬಳಸಿಕೊಳ್ಳುತ್ತಾರೆ. ಬೆಳ್ಳಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.












Click it and Unblock the Notifications