ಕುಡಿದ ಮತ್ತಿನಲ್ಲಿ ಪಬ್ ನ 3ನೇ ಮಹಡಿಯಿಂದ ಬಿದ್ದು ಇಬ್ಬರ ಸಾವು

ಬೆಂಗಳೂರು, ಜೂನ್ 22: ಪಬ್ ವೊಂದರ ಮೆಟ್ಟಿಲು ಇಳಿಯುತ್ತಿದ್ದ ಸಂದರ್ಭದಲ್ಲಿ ಆಯತಪ್ಪಿ ಬಿದ್ದು, ಇಬ್ಬರು ಸಾವಿಗೀಡಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

2 youths died in a pub in Bengaluru

ಕಳೆದ ರಾತ್ರಿ ಮೂರನೇ ಮಹಡಿಯಿಂದ ಕೈ ಹಿಡಿದು ನಡೆದು ಬರುತ್ತಿದ್ದ ಸಂದರ್ಭದಲ್ಲಿ ವೇದಾ ಮತ್ತು ಪವನ್ ಎಂಬ ಇಬ್ಬರು ಆಯತಪ್ಪಿ ವೆಂಟಿಲೇಶನ್ ಶೀಟ್ ಮೇಲೆ ಬಿದ್ದ ಪರಿಣಾಮ ಈ ಘಟನೆ ನಡೆದಿದೆ ಎನ್ನಲಾಗಿದೆ. ಶಿವಮೊಗ್ಗ ಮೂಲದ ಪವನ್ ಮತ್ತು ಕೆ ಆರ್ ಪುರ ಮೂಲದ ವೇದಾ ಅವರು ಸಾವಿಗೀಡಾದ ದುರ್ವಿದೈಗಳು ಎನ್ನಲಾಗಿದೆ.

ಬೆಂಗಳೂರಿನ ಚರ್ಚ್ ಸ್ಟ್ರೀಟ್ ರಸ್ತೆಯಲ್ಲಿರುವ ಆಶ್ ಬೀರ್ ಪಬ್ ಗೆ ತೆರಳಿದ್ದ ಪವನ್ ಅತ್ತಾವರ್ ಹಾಗೂ ವೇದಾ ಆರ್ ಪಬ್ ನ ಮೂರನೇ ಮಹಡಿಯ ರೂಫ್ ಫಲೋರ್ ನಲ್ಲಿ ಕುಳಿತು ಪಾರ್ಟಿ ಮಾಡುತ್ತಿದ್ದರು. ಈ ಸಂದರ್ಬದಲ್ಲಿ ಮಹಡಿಯ ತುದಿಯಲ್ಲಿ ಕೈ ಕೈ ಹಿಡಿದು ನಿಂತಿದ್ದ ಇಬ್ಬರೂ ಕುಡಿದ ಮತ್ತಿನಲ್ಲಿ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಘಟನೆಯಲ್ಲಿ ಪವನ್ ಹಾಗೂ ವೇದಾ ತಲೆಯ ಭಾಗಕ್ಕೆ ಗಂಭೀರವಾಗಿ ಗಾಯವಾಗಿ ತೀವ್ರ ರಕ್ತಸ್ರಾವವಾಗಿತ್ತು. ಇದೇ ವೇಳೆ ನೂತನ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಅವರು ಚರ್ಚ್ ಸ್ಟ್ರೀಟ್ ರೋಡಲ್ಲಿ ನೈಟ್ ರೌಂಡ್ಸ್ ನಲ್ಲಿದ್ದರು.

ಘಟಣೆ ನಡೆಯುತ್ತಿದ್ದಂತೆಯೇ ಇಬ್ಬರನ್ನೂ ಬೌರಿಂಗ್ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅವರು ಅಷ್ಟರಲ್ಲೇ ಮೃತಪಟ್ಟಿದ್ದರು ಎನ್ನಲಾಗಿದೆ.

ಘಟನೆಯ ಕುರಿತು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಬ್ ಮಾಲಿಕರು ಮತ್ತು ಮ್ಯಾನೇಜರ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+