ಬೆಂಗಳೂರು: 2.2 ಕೋಟಿ ಮೌಲ್ಯದ ಹಳೆಯ ನೋಟು ವಶ, 5 ಮಂದಿ ಬಂಧನ

ಬೆಂಗಳೂರು, ಫೆಬ್ರವರಿ 28: ಸರ್ಕಾರ ರರದ್ದು ಮಾಡಿರುವ ಹಳೆ ನೋಟುಗಳ್ನು ಹೊಸ ನೋಟಿಗೆ ಬದಲಾಯಿಸಲು ಯತ್ನಿಸುತ್ತಿದ್ದ 5 ಮಂದಿಯನ್ನು ಈಶಾನ್ಯ ನಗರ ಪೊಲೀಸರು ಕೊತ್ತನೂರು ಬಳಿ ಬಂಧಿಸಿದ್ದಾರೆ.

ಇದೇ ದಂದೆಯಲ್ಲಿ ತೊಡಗಿದ್ದ ಇನ್ನೂ 6 ಜನ ತಲೆಮರೆಸಿಕೊಂಡಿದ್ದು ಅವರಿಗಾಗಿ ನಗರ ಈಶಾನ್ಯ ಪೊಲಿಸರು ಹುಡುಕಾಟ ನಡೆಸಿದ್ದಾರೆ. ಬಂಧಿತರಿಂದ 2.2 ಕೋಟಿ ರದ್ದು ಮಾಡಲಾಗಿರುವ ಹಣವನ್ನು ವಶಪಡಿಸಿಕೊಳ್ಳಲಾಗಿದ್ದು ಅದರ ಜೊತೆಗೆ ಒಂದು ಇಟಿಯಾಸ್ ಕಾರು, 6 ಮೊಬೈಲ್ ಒಂದು ದ್ವಿಚಕ್ರವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತರನ್ನು ಜಯಕುಮಾರ್, ಅಮ್ಜದ್ ಪಾಷಾ, ಸಚಿನ್, ಶಶಿಕುಮಾರ್ ಮತ್ತು ಮಂಗಳೂರಿನ ಶರತ್ ಎನ್ನಲಾಗಿದ್ದು ಸೈಯದ್ ಸಮೀರ್, ನದೀಂ, ಶಹನಾಜ್, ರಮೇಶ್, ಸತೀಶ್ ಅವರುಗಳು ತಲೆ ಮರೆಸಿಕೊಂಡಿದ್ದಾರೆ.

2.2 crore worth demonetized bank notes sized in Bengaluru

ಹಳೆ ನೋಟುಗಳನ್ನು ತಂದು ಕೊಟ್ಟರೆ ಅವನ್ನು ಅನಿವಾಸಿ ಭಾರತೀಯರಿಗೆ ತಲುಪಿಸಿ ಅಲ್ಲಿಂದ ಹೊಸ ನೋಟುಗಳಿಗೆ ಬದಲಾಯಿಸಿ ಕೊಡುವುದಾಗಿ ಮೊದಲ ಆರೋಪಿ ಸೈಯದ್ ಸಮೀರ್ ಹೇಳಿದ್ದ ಕಾರಣ ಎರಡನೇ ಆರೋಪಿ ಜಯಕುಮಾರ್‌ನು ಆತನ ಗೆಳೆಯ ಅಮ್ಜದ್ ಪಾಷಾ, ಸಚಿನ್, ನದೀಮ್, ಶಹನಾಜ್, ರಮೇಶ್, ಸತೀಶ್ ಅವರೊಂದಿಗೆ ಸೇರಿ 2.2 ಕೋಟಿ ಹಣವನ್ನು ಸೈಯದ್ ಸಮೀರ್‌ಗೆ ನೀಡಿ ಆ ಹಣವನ್ನು ಬದಲಾವಣೆ ಮಾಡಲು ಸಂಚು ರೂಪಿಸುತ್ತಿದ್ದ ವೇಳೆ ಪೊಲೀಸರಿಗೆ ದೊರಕಿದ್ದಾರೆ.

2.2 crore worth demonetized bank notes sized in Bengaluru

ಕೆ.ನಾರಾಯಣಪುರದ ಗೋಲ್ಡನ್ ಫಾರ್ಮ್ ಅಪಾರ್ಟ್‌ಮೆಂಟ್‌ನಲ್ಲಿ ಹಣ ಬದಲಾವಣೆ ಸಂಚು ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ವಶಪಡಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+