13,000 ಕೋಟಿ ವೆಚ್ಚದಲ್ಲಿ 16 ಎಲಿವೇಟೆಡ್ ಕಾರಿಡಾರ್: ಬೆಂಗಳೂರಿನ ಆಸ್ತಿದಾರರಿಗೆ ಬಂಪರ್!

Bengaluru property: ಬೆಂಗಳೂರಿನಲ್ಲಿ ಬೃಹತ್ ಯೋಜನೆ ಜಾರಿ ಮಾಡುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಅಲ್ಲದೇ ಇದರಿಂದ ಈ ಭಾಗದ ಭೂಮಿದಾರರಿಗೂ ಬಂಪರ್ ಬಂದಿದೆ. ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಒದಗಿಸಲು 16 ಎಲಿವೇಟೆಡ್ ಕಾರಿಡಾರ್‌ಗಳ ನಿರ್ಮಾಣಕ್ಕೆ ಡಿಪಿಆರ್ ತಯಾರಿಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಇದು ಪರೋಕ್ಷವಾಗಿ ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಭೂಮಿಯನ್ನು ಹೊಂದಿರುವ ಆಸ್ತಿದಾರರಿಗೆ ಬಂಪರ್ ತಂದಿದೆ. ನಗರ ಶೇ 35ಕ್ಕೂ ಹೆಚ್ಚು ಭಾಗವನ್ನು ಇದು ಒಳಗೊಳ್ಳುವ ಸಾಧ್ಯತೆ ಇರಲಿದೆ. ಎಲ್ಲೆಲ್ಲಿ ಈ ಯೋಜನೆ ಜಾರಿಯಾಗಲಿದೆ. ಅಲ್ಲದೇ ಇದರಿಂದ ಯಾವ ಭಾಗದವರಿಗೆ ಲಾಭವಾಗಲಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

13,000 ಕೋಟಿ ರೂ: ಇನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 13,000 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 16 ಪ್ರಮುಖ ಎಲಿವೇಟೆಡ್ ಕಾರಿಡಾರ್‌ಗಳನ್ನು ಅಭಿವೃದ್ಧಿ ಮಾಡುವುದಕ್ಕೆ ನಿರ್ಧರಿಸಲಾಗಿದೆ. ಬರೋಬ್ಬರಿ 24 ಕೋಟಿ ರೂಪಾಯಿ ವೆಚ್ಚದಲ್ಲಿ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸುವುದಕ್ಕೆ ಸಂಬಂಧಿಸಿದಂತೆ ಮೂರು ಪ್ರಮುಖ ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗಿದೆ.

13 000 crore cost 16 elevated corridors bumper for Bengaluru property owners Property Boom

16 ಪ್ರಮುಖ ಯೋಜನೆ

* ಎಂಇಐ ಜಂಕ್ಷನ್ ನಲ್ಲಿ ವಿಭಜಿತ ಮೇಲೇತುವೆ

* ಯಶವಂತಪುರ (ಮತ್ತಿಕೆರೆ ಕ್ರಾಸ್)-ಐಐಎಸ್ಸಿ-ಮೇಖ್ರಿ ವೃತ್ತ-ಜಯಮಹಲ್ -ಸೇಂಟ್ ಜಾನ್ ಚರ್ಚ್ ರಸ್ತೆ, ಹಲಸೂರು ಕೆರೆ-ಹಳೆ ಮದ್ರಾಸ್ ರಸ್ತೆ-ಕೆ.ಆರ್.ಪುರವರೆಗೆ ಎಲಿವೇಟೆಡ್ ಕಾರಿಡಾರ್.

* ಕೋಣನಕುಂಟೆ ಕ್ರಾಸ್ ಮಾರ್ಗವಾಗಿ ಕನಕಪುರ ಕಡೆಯಿಂದ ಬನಶಂಕರಿ ಕಡೆಗೆ ಮೇಲ್ಸೇತುವೆ/ಅಂಡರ್ ಪಾಸ್

* ಕನಕಪುರ ರಸ್ತೆಯ ರಘುವನಹಳ್ಳಿ ಸಮೀಪದ ಅಡ್ಯಾರ್ ಆನಂದ ಭವನ್ ಬಳಿ ಮೇಲ್ಸೇತುವೆ

* ಮಾರೇನಹಳ್ಳಿ ಮುಖ್ಯರಸ್ತೆಯ ರಾಗಿಗುಡ್ಡದ 7ನೇ ಮುಖ್ಯರಸ್ತೆ ಜಂಕ್ಷನ್ ನಿಂದ ಪೈಪ್‌ಲೈನ್‌ ರಸ್ತೆ ಮಾರ್ಗವಾಗಿ ತಲಘಟ್ಟಪುರದ ನೈಸ್ ರಸ್ತೆವರೆಗೆ ಎಲಿವೇಟೆಡ್‌ ಕಾರಿಡಾರ್

* ಮಡಿವಾಳ ಸಂಚಾರ ಪೊಲೀಸ್ ಠಾಣೆ ಜಂಕ್ಷನ್‌ವರೆಗೆ ಅಂಡರ್‌ಪಾಸ್‌ ವಿಸ್ತರಣೆ

* ಹೊಸೂರು ರಸ್ತೆಯ ಶೂಲೆ ವೃತ್ತದಿಂದ ವೆಲ್ಲಾರ ಜಂಕ್ಷನ್-ಆನೇಪಾಳ್ಯ ಜಂಕ್ಷನ್ - ಆಡುಗೋಡಿ ಜಂಕ್ಷನ್ -ಫೋರಂ ಜಂಕ್ಷನ್-ಸೇಂಟ್ ಜಾನ್ ಚರ್ಚ್ ಜಂಕ್ಷನ್ -ಮಡಿವಾಳ ಜಂಕ್ಷನ್ -ಸಿಬೋರ್ಡ್ ಜಂಕ್ಷನ್‌ ವರೆಗೆ ಎಲಿವೇಟೆಡ್ ಕಾರಿಡಾರ್

* ಹಳೆ ಮದ್ರಾಸ್ ರಸ್ತೆಯ ಸ್ವಾಮಿ ವಿವೇಕಾನಂದ ಮೆಟ್ರೊ ಸ್ಟೇಷನ್‌ನಿಂದ ಇಂದಿರಾನಗರ, ದೊಮ್ಮಲೂರು, ಮಡಿವಾಳ ಮಾರ್ಗವಾಗಿ ಸಿಲ್ಕ್ ಬೋರ್ಡ್ ಜಂಕ್ಷನ್‌ ವರೆಗೆ ಎಲಿವೇಟೆಡ್ ಕಾರಿಡಾರ್

* ನಾಗವಾರ ಜಂಕ್ಷನ್‌ನಿಂದ ರಾಮಕೃಷ್ಣಹೆಗಡೆ ನಗರ ಜಂಕ್ಷನ್, ಸಂಪಿಗೆಹಳ್ಳಿ, ತಿರುಮೇನಹಳ್ಳಿ, ಬೆಲ್ಲಹಳ್ಳಿ, ಬಾಗಲೂರು ಮುಖ್ಯರಸ್ತೆ ಜಂಕ್ಷನ್‌ವರೆಗೆ ಎಲಿವೇಟೆಡ್ ಕಾರಿಡಾರ್‌.

* ಹೊರವರ್ತುಲ ರಸ್ತೆಯಿಂದ ಹೆಣ್ಣೂರು ಮುಖ್ಯರಸ್ತೆ ಜಂಕ್ಷನ್‌ನಿಂದ ಬಾಗಲೂರು ಜಂಕ್ಷನ್‌ವರೆಗೆ ಎಲಿವೇಟೆಡ್ ಕಾರಿಡಾರ್

* ಟ್ಯಾನರಿ ರಸ್ತೆಯಿಂದ ಮಾಧವ ಮೊದಲಿಯಾರ್ ರಸ್ತೆಯಿಂದ ನಾಗವಾರ ಜಂಕ್ಷನ್‌ ವರೆಗೆ ಎಲಿವೇಟೆಡ್ ಕಾರಿಡಾರ್

* ವೆಸ್ಟ್‌ಆಫ್ ಕಾರ್ಡ್‌ ರಸ್ತೆಯಿಂದ ಪೈಪ್‌ ಲೈನ್‌ ರಸ್ತೆ (ನಂದಿನಿ ಲೇಔಟ್‌) ಮೂಲಕ ಹೊರವರ್ತುಲ ರಸ್ತೆವರೆಗೆ ಎಲಿವೇಟೆಡ್ ಕಾರಿಡಾರ್

*ಯಲಹಂಕ ಉಪನಗರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆವರೆಗೆ ಎಲಿವೇಟೆಡ್ ಕಾರಿಡಾರ್

* ಆನಂದರಾವ್ ವೃತ್ತದಿಂದ ನೃಪತುಂಗ ರಸ್ತೆ ಮಾರ್ಗವಾಗಿ ಕೆ.ಆರ್. ವೃತ್ತದವರೆಗೆ ಮೇಲ್ಸೇತುವೆ ವಿಸ್ತರಣೆ.

* ಹಡ್ಸನ್‌ ವೃತ್ತದಿಂದ ಮಿನರ್ವ ವೃತ್ತದವರೆಗೆ ಇಂಟಿಗ್ರೇಟೆಡ್ ಎಲಿವೇಷನ್

* ಸಿರ್ಸಿ ವೃತ್ತದಿಂದ ಮೈಸೂರು ರಸ್ತೆ ಮಾರ್ಗವಾಗಿ ನಾಯಂಡಹಳ್ಳಿವರೆಗೆ ಎಲಿವೇಟೆಡ್ ಕಾರಿಡಾರ್

ಆಸ್ತಿದಾರರಿಗೆ ಬಂಪರ್‌: ಇನ್ನು ಈ ಪ್ರಮುಖ ಕಾರಿಡಾರ್‌ನ ಸುತ್ತಮುತ್ತಲಿನ ಪ್ರದೇಶದ ಆಸ್ತಿದಾರರಿಗೆ ಬಂಪರ್‌ ಬಂದಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಮಿಯ ಬೆಲೆಯು ಗಣನೀಯವಾಗಿ ಹೆಚ್ಚಳವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+