ಯಲಹಂಕದಲ್ಲಿ ಡ್ಯಾನ್ಸ್ ಕ್ಲಾಸ್ ನಲ್ಲೇ 12ರ ಬಾಲಕಿ ಆತ್ಮಹತ್ಯೆ
ಬೆಂಗಳೂರು, ಅಕ್ಟೋಬರ್ 31: ಡ್ಯಾನ್ಸ್ ಕ್ಲಾಸ್ ನಲ್ಲೇ 12 ವರ್ಷದ ಬಾಲಕಿ ನೇಣಿಗೆ ಶರಣಾದ ಆಘಾತಕಾರಿ ಘಟನೆ ನಗರದ ಯಲಹಂಕ ನ್ಯೂಟೌನ್ ನಲ್ಲಿ ನಡೆದಿದೆ.
ಇಲ್ಲಿನ ನ್ಯೂಟೌನ್ ಅಟ್ಟೂರು ಲೇಔಟ್ ನಲ್ಲಿರುವ ಡ್ಯಾನ್ಸ್ ಕ್ಲಾಸ್ ನಲ್ಲೇ 12 ವರ್ಷದ ಚಂದನಾ ನೇಣಿಗೆ ಶರಣಾಗಿದ್ದಾಳೆ.

ಡ್ಯಾನ್ಸ್ ಮಾಸ್ಟರ್ ಸತೀಶ್ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದುಕೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಚಂದನಾ ಸಂಬಂಧಿಕರು ಸತೀಶ್ ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ನಂತರ ಸ್ಥಳಕ್ಕೆ ಬಂದ ಯಲಹಂಕ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸತೀಶ್ ನನ್ನು ಬಂಧಿಸಿದ್ದಾರೆ.












Click it and Unblock the Notifications