ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣ, ಏರ್‌ಪೋರ್ಟ್ ರೀತಿ ಜಗಮಗಿಸಲಿದೆ
ಬೆಂಗಳೂರು, ಜನವರಿ 21: ಇನ್ನುಮುಂದೆ ದೇಶದ ರೈಲ್ವೆ ನಿಲ್ದಾಣಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಂತೆ ವಿಶ್ವದರ್ಜೆಗೆ ಏರಲಿವೆ. ದೇಶದ ಒಟ್ಟು 11 ರೈಲ್ವೆ ನಿಲ್ದಾಣಗಳು ವಿಶ್ವದರ್ಜೆಗೇರಲಿವೆ. ಅದರಲ್ಲಿ ಬೆಂಗಳೂರು ಕೂಡ ಒಂದಾಗಿದೆ. ಒಟ್ಟು 1 ಲಕ್ಷ ಕೋಟಿ ರೂ ಹಣವನ್ನು ಇದಕ್ಕೆ ವ್ಯಯಿಸಲಾಗುತ್ತಿದೆ.
ನೈಋತ್ಯ ರೈಲ್ವೆ ನಿಲ್ದಾಣಗಳ ಪೈಕಿ ಕೇವಲ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಮೇಲ್ದರ್ಜೆಗೇರಲಿದೆ.
ಆನಂದ ವಿಹಾರ ಹಾಗೂ ಬ್ರಿಜ್‌ವಾಸನ್(ದೆಹಲಿ) ಚಂಡೀಗಢ, ಗಾಂಧಿನಗರ(ಗುಜರಾತ್) ಹಾಗೂ ಶಿವಾಜಿನಗರ್ ನಿಲ್ದಾಣಗಳಲ್ಲಿ ವಿಶ್ವಮಟ್ಟದ ಸೌಲಭ್ಯಗಳು ದೊರೆಯಲಿವೆ. ಅದರಲ್ಲಿ ವಾಹನ ನಿಲುಗಡೆ ಸೌಲಭ್ಯ, ಫುಡ್ ಸ್ಟಾಲ್‌ಗಳು, ಜಾಹೀರಾತಿಗೆ ಸ್ಥಳಾವಕಾಶವನ್ನು ಕಲ್ಪಿಸಿಕೊಡಲಾಗುತ್ತದೆ.

ಭೋಪಾಲ್‌ನಲ್ಲಿ ರೈಲ್ವೆ ನಿಲ್ದಾಣದ ಒಳಗೆ 300ಕ್ಕೂ ಹೆಚ್ಚು ಕೋಣೆಗಳಿರುವ ಫೈವ್ ಸ್ಟಾರ್ ಹೋಟೆಲ್ ನಿರ್ಮಾಣವಾಗಲಿದೆ. ಗುಜರಾತಿನ ಗಾಂಧಿ ನಗರದಲ್ಲೂ ಕೂಡ ಇದೇ ಮಾದರಿಯಲ್ಲಿ ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿ ಪಡಿಸಲಾಗುತ್ತದೆ.












Click it and Unblock the Notifications