ರಾಜ್ಯದಲ್ಲಿಂದು 11 ಕೇಸ್ ಪತ್ತೆ, ಒಟ್ಟು ಸೋಂಕಿತರ ಸಂಖ್ಯೆ 576

ಬೆಂಗಳೂರು, ಮೇ 1: ಕರ್ನಾಟಕದಲ್ಲಿಂದು 11 ಕೊರೊನಾ ಪ್ರಕರಣಗಳು ದಾಖಲಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 576ಕ್ಕೆ ಏರಿಕೆಯಾಗಿದೆ.

ನಿನ್ನೆ ಸಂಜೆ 5 ಗಂಟೆಯವರೆಗೂ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 565 ಇತ್ತು. ನಿನ್ನೆಯಿಂದ ಇಂದು ಮಧ್ಯಾಹ್ನದವರೆಗೂ ಹೊಸದಾಗಿ 11 ಪ್ರಕರಣ ದಾಖಲಾಗಿದೆ.

ಹೊಸ ಹನ್ನೊಂದು ಕೇಸ್‌ಗಳ ಪೈಕಿ ಮಂಡ್ಯದಲ್ಲಿ ಎಂಟು, ಬೆಳಗಾವಿಯಲ್ಲಿ ಮೂವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಮಂಡ್ಯದ ಏಂಟು ಸೋಂಕಿತರ ಪೈಕಿ ಮಂಡ್ಯ ನಗರದಲ್ಲಿ ಮೂರು, ಮಳವಳ್ಳಿಯಲ್ಲಿ ನಾಲ್ಕು ಹಾಗೂ ಕೆ.ಆರ್ ಪೇಟೆ ಕ್ಷೇತ್ರದಲ್ಲಿ ಒಂದು ಕೇಸ್ ವರದಿಯಾಗಿದೆ. ಬೆಂಗಳೂರಿನಲ್ಲಿ ಹೊಸ ಸೋಂಕಿತರು ಪತ್ತೆಯಾಗಿಲ್ಲ.

11 New Coronavirus Case Reported In Karnataka

ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕಿತರನ್ನು ಹೊಂದಿರುವ ಜಿಲ್ಲೆಗಳ ಪೈಕಿ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ ಒಟ್ಟು 141 ಸೋಂಕಿತರು ವರದಿಯಾಗಿದ್ದಾರೆ. ಮೈಸೂರಿನಲ್ಲಿ 88 ಜನರಿಗೆ ಕೊರೊನಾ ಅಂಟಿಕೊಂಡಿದೆ. ಬೆಳಗಾವಿಯಲ್ಲಿ 70 ಜನರಿಗೆ, ವಿಜಯಪುರದಲ್ಲಿ 43 ಹಾಗೂ ಕಲಬುರಗಿಯಲ್ಲಿ 53 ಜನರಿಗೆ ಕೊವಿಡ್ ಸೋಂಕು ತಗುಲಿದೆ.

ಮತ್ತೊಂದೆಡೆ ರಾಜ್ಯದಲ್ಲಿ ಜಿಲ್ಲಾವಾರು ರೆಡ್‌ಜೋನ್, ಆರೆಂಜ್‌ ಜೋನ್ ಮತ್ತು ಗ್ರೀನ್ ಜೋನ್ ಎಂದು ಮೂವರು ವಲಯಗಳಾಗಿ ವಿಂಗಡಿಸಿ, ರೆಡ್‌ಜೋನ್ ಹೊರತು ಪಡಿಸಿ ಉಳಿದ ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಸಡಿಲಿಕೆ ಮತ್ತು ಕೈಗಾರಿಕೆಗಳಿಗೆ ಅನುಮತಿ ನೀಡಲು ರಾಜ್ಯ ಸರ್ಕಾರ ಚಿಂತಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+