Namma Clinics : 108 ನಮ್ಮ ಕ್ಲಿನಿಕ್‌ಗೆ ಸಿಬ್ಬಂದಿ ನೇಮಕ, 8796 ರೋಗಿ ಭೇಟಿ, ಆರೋಪಕ್ಕೆ ತೆರೆಎಳೆದ ಬಿಬಿಎಂಪಿ
ಬೆಂಗಳೂರಿನಲ್ಲಿ ಜನರಿಗೆ ಗುಣಮಟ್ಟದ ಸೇವೆ ಲಭ್ಯವಾಗಿಸುವ ನೀಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಒಟ್ಟು 108 ನಮ್ಮ ಕ್ಲಿನಿಕ್‌ಗಳಿಗೆ ಚಾಲನೆ ನೀಡಿದೆ. ಎಲ್ಲ ಕ್ಲಿನಿಕ್‌ಗಳಿಗೆ ಅಗತ್ಯ ಸಿಬ್ಬಂದಿ ನಿಯೋಜಿಸಿದೆ. ಅದರ ಮತ್ತು ರೋಗಿಗಳ ಭೇಟಿ ವಿವರ ಇಲ್ಲಿದೆ.
ಬೆಂಗಳೂರು, ಫೆಬ್ರವರಿ 15: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜನರಿಗೆ ಉತ್ತಮ/ಗುಣಮಟ್ಟದ ಸೇವೆ ಲಭ್ಯವಾಗಿಸುವ ನೀಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಒಟ್ಟು 108 ನಮ್ಮ ಕ್ಲಿನಿಕ್‌ಗಳಿಗೆ ಚಾಲನೆ ನೀಡಿತ್ತು. ಅಷ್ಟು ಕ್ಲಿನಿಕ್‌ಗಳಿಗೆ ಅಗತ್ಯ ಸಿಬ್ಬಂದಿ ನಿಯೋಜಿಸಲಾಗಿದೆ. ಜೊತೆಗೆ ಸಾವಿರಾರು ರೋಗಿಗಳಿಗೆ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಈ ಕುರಿತು ಬುಧವಾರ ಅಧಿಕೃತ ಮಾಹಿತಿ ನೀಡಿದೆ. ಫೆಬ್ರವರಿ 07ರಂದು ಉದ್ದೇಶಿತ ಒಟ್ಟು ನಮ್ಮ ಕ್ಲಿನಿಕ್ ಆಸ್ಪತ್ರೆಗಳ ಪೈಕಿ 108 'ನಮ್ಮ ಕ್ಲಿನಿಕ್' ಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬೆಂಗಳೂರಿನಲ್ಲಿ ಉದ್ಘಾಟಿಸಿದ್ದರು.
ಸಾರ್ವಜನಿಕ ಚಿಕಿತ್ಸೆಗೆ ಲೋಕಾರ್ಪಣೆಗೊಂಡ ಬಳಿಕ ಎಲ್ಲ ನಮ್ಮ ಕ್ಲಿನಿಕ್‌ಗಳಿಗೆ ವೈದ್ಯಕೀಯ ಮತ್ತು ಅರೇವೈದ್ಯಕೀಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಎಲ್ಲ ವಿಭಾಗದಲ್ಲಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಫೆಬ್ರವರಿ 07ರಿಂದ ಮಂಗಳವಾರ ಫೆಬ್ರವರಿ 14ರವರೆಗೆ ನಗರದಲ್ಲಿ 8796 ರೋಗಿಗಳು ಭೇಟಿ ನೀಡಿದ್ದಾರೆ.

ಈ ಎಲ್ಲ ರೋಗಿಗಳಿಗೆ ಹೊರ ರೋಗಿ ವಿಭಾಗದಲ್ಲಿ ನೋಂದಾಯಿಸಿಕೊಂಡ ಮಾಹಿತಿ ಪ್ರಕಾರ, 3911 ಪುರುಷ ರೋಗಿಗಳು ಹಾಗೂ 4871 ಮಹಿಳಾ ರೋಗಿಗಳಾಗಿದ್ದಾರೆ. ಒಟ್ಟು ರೋಗಿಗಳ ಪೈಕಿ 14 ಇತರೆ ರೋಗಿಗಳು ಭೇಟಿ ನೀಡಿ ವೈದ್ಯರಿಂದ ಚಿಕಿತ್ಸೆ ಪಡೆದಿದ್ದಾರೆ. ಇನ್ನೂ ಇಲ್ಲಿಗೆ ಒಟ್ಟು 3000ಕ್ಕೂ ಅಧಿಕ ಪ್ರಯೋಗಾಲದಲ್ಲಿ (Lab) ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಸಾರ್ವಜನಿಕ ಆರೋಗ್ಯ ವಿಭಾಗದ ಮುಖ್ಯ ಆರೋಗ್ಯಾಧಿಕಾರಿ ಡಾ. ಬಾಲಸುಂದರ್ ತಿಳಿಸಿದರು.
ವೈದ್ಯ ಸಿಬ್ಬಂದಿ ಇಲ್ಲ: ಆರೋಪ
ಸರ್ಕಾರದ ಈ ನಮ್ಮ ಕ್ಲಿನಿಕ್‌ಗಳು ನಿಗದಿತ ಕಾಲಕ್ಕಿಂತ ತಡವಾಗಿ ಆರಂಭವಾಗಿವೆ ಎಂದು ಹೇಳಲಾಗುತ್ತಿದೆ. ಮುಖ್ಯವಾಗಿ ಈ ನಮ್ಮ ಕ್ಲಿನಿಕ್‌ಗಳಿಗೆ ಅಗತ್ಯ ಸಿಬ್ಬಂದಿ ಸೇರಿದಂತೆ ಮೂಲ ಸೌಕರ್ಯಗಳು ಇಲ್ಲ ಎಂದು ಆರೋಪಿಸಲಾಗಿತ್ತು. ಇತ್ತ ಸರ್ಕಾರ ಸಂಪೂರ್ಣ ತಯಾರಿ ನಡೆಸಿಯೇ ಕ್ಲಿನಿಕ್ ಆರಂಭಿಸಲಾಗಿದೆ, ಎಲ್ಲವು ಸರಿಯಿದೆ ಎಂದು ತಿಳಿಸಿತ್ತು.

ಕೆಲವೆಡೆ ಚಿಕಿತ್ಸೆಗೆ ಸಾಕಷ್ಟು ಮಂದಿ ಬರುತ್ತಿದ್ದಾರೆ. ಆದರೆ ಚಿಕಿತ್ಸಾಲಯದಲ್ಲಿ ಗ್ರೂಪ್ ಡಿ ವರ್ಗದ ಸಿಬ್ಬಂದಿ, ವೈದ್ಯಾಧಿಕಾರಿ, ಸ್ಟಾಫ್ ನರ್ಸ್ ಕೊರತೆ ಇದೆ ಎಂಬ ಆರೋಪಗಳು ಕೇಳಿ ಬಂದಿದ್ದವರು. ಅದರ ಬೆನ್ನಲ್ಲೆ ಬಿಬಿಎಂಪಿ ಇದೀಗ ಅಧಿಕೃತ ಮಾಹಿತಿ ನೀಡುವ ಮೂಲಕ ಆರೋಪ, ಟೀಕೆಗಳಿಗೆ ತೆರೆ ಎಳೆಯುವ ಕೆಲಸ ಮಾಡಿದೆ.
2023 ಫೆಬ್ರವರಿ 7 ರಿಂದ 14ವರೆಗಿನ ತಪಾಸಣೆ ವಿವರ ಪಟ್ಟಿಯಲ್ಲಿ ನೋಡುವುದಾದರೆ.
* ಒಟ್ಟು ಹೊರರೋಗಿಗಳ ಸಂಖ್ಯೆ: 8796
* ಪುರುಷ ಹೊರರೋಗಿಗಳ ಸಂಖ್ಯೆ : 3911
* ಮಹಿಳಾ ಹೊರರೋಗಿಗಳ ಸಂಖ್ಯೆ : 4871
* ಇತರರು : 14
* ಲ್ಯಾಬ್ ಪರೀಕ್ಷೆಗಳು : 3196












Click it and Unblock the Notifications