ನಮ್ಮ ಮೆಟ್ರೋ: ಬಾಗಿಲು ಮುಚ್ಚದ ಪರಿಣಾಮ 10 ನಿಮಿಷ ಮೆಟ್ರೋ ರೈಲು ಸಂಚಾರ ವ್ಯತ್ಯಯ
ಬೆಂಗಳೂರು, ಅಕ್ಟೋಬರ್ 12: ಬೆಂಗಳೂರಿನ ಅನೇಕ ಮಂದಿ ಸಂಚಾರಕ್ಕೆ ಹೆಚ್ಚು ಅವಲಂಬಿಸಿರುವ 'ನಮ್ಮ ಮೆಟ್ರೋ' ರೈಲಿನ ಬಾಗಿಲು ಜಾಮ್ ಆಗಿದ್ದರಿಂದ ಹಸಿರು ಮೆಟ್ರೋ ರೈಲುಗಳ ಸಂಚಾರದಲ್ಲಿ 10 ನಿಮಿಷ ವ್ಯತ್ಯಯವಾಗಿದೆ. ಇದರಿಂದ ಕೆಲ ಕಾಲ ಪ್ರಯಾಣಿಕರು ಆತಂಕಗೊಂಡ ಘಟನೆ ಮಂಗಳವಾರ ನಡೆದಿದೆ.
ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ಇಂಟರ್‌ಚೇಂಜ್ ಭೂಗತ ನಿಲ್ದಾಣದಲ್ಲಿ ಈ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಮೆಜೆಸ್ಟಿಕ್ ನಿಲ್ದಾಣದಿಂದ ಹಸಿರು ಮಾರ್ಗವಾಗಿ ನಾಗಸಂದ್ರ ತೆರಳಬೇಕಿದ್ದ ಒಂದು ಮೆಟ್ರೋ ರೈಲಿನ ಒಂದು ಬಾಗಿಲು ಮಂಗಳವಾರ ಸಂಜೆ ಜಾಮ್ ಆಗಿತ್ತು. ಇದರಿಂದ ಹಸಿರು ಮೆಟ್ರೋ ಮಾರ್ಗದಲ್ಲಿ (ನಾಗಸಂದ್ರದಿಂದ ಸಿಲ್ಕ್ ಇನ್‌ಸ್ಟಿಟ್ಯೂಟ್) ಎರಡು ಮೆಟ್ರೊ ರೈಲುಗಳು ಸುಮಾರು 10 ನಿಮಿಷಗಳ ಕಾಲ ವಿಳಂಬವಾದವು.
ಮೆಟ್ರೋ ರೈಲಿನಲ್ಲಿ ಸ್ವಯಂ ಪ್ರೇರಿತವಾಗಿ ಬಾಗಿಲು ಮುಚ್ಚಿಕೊಳ್ಳುತ್ತವೆ. ಆದರೆ ತಾಂತ್ರಿಕ ದೋಷದಿಂದಾಗಿ 6.55 ಗಂಟೆಗೆ ಹೊರಡಬೇಕಿದ್ದ ಮೆಟ್ರೋ ರೈಲಿನ ಬಾಗಿಲು ಸುಮಾರು 8 ನಿಮಿಷಗಳ ಕಾಲ ಬಾಗಿಲು ಮುಚ್ಚಿಕೊಳ್ಳಲಿಲ್ಲ. ಮೆಟ್ರೋ ರೈಲಿನ ಎಲ್ಲ ಬಾಗಿಲುಗಳು ಮುಚ್ಚದ ಹೊರತು ರೈಲು ಮುಂದೆ ಚಲಿಸುವುದಿಲ್ಲ. ಹೀಗಾಗಿ ಇದೇ ಮಾರ್ಗದಲ್ಲಿ ಬರುತ್ತಿದ್ದ ಮತ್ತೊಂದು ರೈಲು ಸಂಚಾರದಲ್ಲೂ ಸಹ ವ್ಯತ್ಯಯ ಉಂಟಾಯಿತು ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ.

ಮೆಟ್ರೋ ರೈಲಿನ ಬಾಗಿಲು 8 ನಿಮಿಷ ತೆರದೇ ಇತ್ತು
ಎಂಟು ನಿಮಿಷದ ಬಳಿಕ ಮೆಟ್ರೋ ನಿಲ್ದಾಣದಲ್ಲಿದ್ದ ಸಿಬ್ಬಂದಿ ಬಂದು ತೆರೆದಿದ್ದ ಬಾಗಿಲನ್ನು ಕೈಯಿಂದ ಮುಚ್ಚಿದರು. ನಂತರ ಹಾಲಿ ಪ್ರಯಾಣ ಪೂರೈಸಿದ ಬಳಿಕ ಬಾಗಿಲಿನ ತಾಂತ್ರಿಕ ದೋಷ ಸರಿಪಡಿಸಲು ಆ ರೈಲನ್ನು ಪರಿಶೀಲನೆಗೆ ಒಳಪಡಿಸಲಾಯಿತು. ಬಾಗಿಲು ಮುಚ್ಚದ ಸಂದರ್ಭದಲ್ಲಿ ಪ್ರಯಾಣಿಕರಲ್ಲಿ ಆತಂಕ, ಭಯ ಉಂಟಾಗಿತ್ತು. ಸ್ವಲ್ಪ ಕಾಲ ಗಾಬರಿಗೊಂಡಿದ್ದೇವು ಎಂದು ಅದೇ ರೈಲಿನ ಪ್ರಯಾಣಿಕರೊಬ್ಬರು ಮಾಹಿತಿ ನೀಡಿದರು.

ಮೆಟ್ರೋ ರೈಲಿನ ಪ್ರತಿ ಕೋಚ್‌ಗಳ ಬಾಗಿಲು ಸ್ವಯಂಚಾಲಿತವಾಗಿ ಬಾಗಿಲು ತೆರೆದುಕೊಳ್ಳುವ ಹಾಗೂ ಮುಚ್ಚುವ ಕಾರ್ಯವಿಧಾನವನ್ನು ಹೊಂದಿಗೆ. ಆದರೆ ಈ ರೀತಿ ಬಾಗಿಲು ಸ್ವಯಂಪ್ರೇರಿತವಾಗಿ ಮುಚ್ಚಿಕೊಳ್ಳದಿದ್ದರೆ ಪ್ರಯಾಣಿಕರ ಹಿತ ದೃಷ್ಟಿಯಿಂದ ರೈಲು ಮುಂದೆ ಸಂಚರಿಸುವುದಿಲ್ಲ ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ತಿಳಿಸಿದರು.












Click it and Unblock the Notifications