Double decker bus: ಬೆಂಗಳೂರಲ್ಲಿ 'ಇವಿ-ಡಬಲ್ ಡೆಕ್ಕರ್ ಬಸ್' ಕಾರ್ಯಾಚರಣೆ, ಟೆಂಡರ್ ಅಪ್ಡೇಟ್ ಮಾಹಿತಿ

ಬೆಂಗಳೂರು, ಜನವರಿ 16: ಕರ್ನಾಟಕ ರಾಜ್ಯ ಸರ್ಕಾರವು ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್ (EV Double Decker Bus) ಓಡಿಸುವ ಯೋಜನೆಗೆ ಇತ್ತೀಚೆಗೆ ಅನುಮೋದನೆ ನೀಡಿತು. ಈ ಬಸ್‌ಗಳು ನೇರ ಖರೀದಿಯಾಗುತ್ತವೆ, ಅಥವಾ ಇಂತಿಷ್ಟು ದಿವಸ ಎಂದು ಜಿಸಿಸಿ ಮಾದರಿಯಲ್ಲಿ ಪಡೆಯುತ್ತವೆ ಎಂಬುದರ ಮಾಹಿತಿ ಇಲ್ಲಿದೆ.

ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಬೆಂಗಳೂರಿನಲ್ಲಿ 10 ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್‌ಗಳನ್ನು ಪರಿಚಯಿಸಲು ಅನುಮೋದನೆ ನೀಡಿತು. ಇದಾದ ಬಳಿಕ ಟೆಂಡೆರ್ ಕರೆಯುವ ಪ್ರಕ್ರಿಯೆಯಲ್ಲಿ ಸಾರಿಗೆ ಇಲಾಖೆ ತೊಡಗಿದೆ. ಆದರೆ ಶಾಸ್ವತವಾಗಿ ಈ ಎಲೆಕ್ಟ್ರಿಕೆ ಸಬಲ್ ಡೆಕ್ಕರ್ ಬಸ್ ಖರೀದಿಗೆ ಮನಸ್ಸು ಮಾಡದೇ ಒಸಿಸಿ ಆಧಾರದಲ್ಲಿ ಬಸ್ ಖರೀದಿ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗುತ್ತಿದೆ.

10 Electric Double Decker Bus Operation Soon In Bengaluru Transport Dept Ready to Invite Tender

ಬೆಂಗಳೂರಿನಲ್ಲಿ ದಶಕಗಳ ಹಿಂದೆ ಪ್ರಸಿದ್ಧಿ ಪಡೆದಿದ್ದ ಡಬಲ್ ಡೆಕ್ಕರ್ ಬಸ್‌ಗಳನ್ನು ಸಾರಿಗೆ ಇಲಾಖೆ ಪರಿಚಯಿಸುವ ಕಾರ್ಯ ನಡೆಸಿದೆ. ಆದರೆ ಈವರೆಗೆ ನಡೆಸಿದ್ದ ಪ್ರಯತ್ನಗಳು ವಿಫಲವಾಗಿದ್ದವು. ಇದೀಗ ಸರ್ಕಾರ ಅನುಮೋದನೆ ನೀಡಿದೆ. ಟೆಂಡರ್ ಕರೆಯುವ ಪಕ್ರಿಯೆಯಲ್ಲಿ ಇಲಾಖೆ ನಿರತವಾಗಿದೆ.

ಜಿಸಿಸಿ ಬಸ್ ಆಧಾರದಲ್ಲಿ ಬಸ್ ಖರೀದಿ, ಸೇವೆ

ಉದ್ದೇಶಿತ ಈ ಹತ್ತು ಇವಿ ಡಬಲ್ ಡೆಕ್ಕರ್ ಬಸ್‌ಗಳನ್ನು ಗ್ರಾಸ್ ಕಾಸ್ಟ್ ಕಾಂಟ್ರಾಕ್ಟ್ (ಜಿಸಿಸಿ) ಆಧಾರದ ಮೇಲೆ ಬಸ್‌ಗಳನ್ನು ಖರೀದಿಸಿ ಕಾರ್ಯಾಚರಣೆ ನಡೆಸಲು ತೀರ್ಮಾನಿಸಲಾಗಿದೆ ಎಂದು ನಿಗಮದ ಮೂಲಗಳು ತಿಳಿಸಿವೆ.

10 Electric Double Decker Bus Operation Soon In Bengaluru Transport Dept Ready to Invite Tender

2023ರಲ್ಲಿ ಆಗ ಅಧಿಕಾರದಲ್ಲಿ ಬಿಜೆಪಿ ಸರ್ಕಾರದಲ್ಲಿ5 ಡಬಲ್ ಡೆಕ್ಕರ್ ಬಸ್‌ಗಳನ್ನು ಖರೀದಿಸಲು ಟೆಂಡರ್ ಕರೆಯಲಾಗಿತ್ತು. ಅಶೋಕ್ ಲೇಲ್ಯಾಂಡ್‌ನ ಎಲೆಕ್ಟ್ರಿಕ್ ವಾಹನ ವಿಭಾಗವಾದ ಸ್ವಿಚ್ ಮೊಬಿಲಿಟಿ ಎಂಬ ಏಕೈಕ ಬಿಡ್ಡರ್ ಐದು ಬಸ್‌ಗಳಿಗೆ 10 ಕೋಟಿ ರೂ. ಟೆಂಡರ್‌ಗೆ ಒಪ್ಪಿಗೆಯಾಗುವ ಸಾಧ್ಯತೆ ಇತ್ತು.

₹2 ಕೋಟಿ ಕೊಟ್ಟು ಬಸ್ ಖರೀದಿಸದಿರಲು ತೀರ್ಮಾನ

ಈ ಮಧ್ಯೆ ವಿಧಾನಸಭಾ ಚುನಾವಣೆ ನಡೆದು ಕರ್ನಾಟಕದಲ್ಲಿ 2023ರ ಮೇ ತಿಂಗಳಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂತು. ನಂತರ ಪ್ರತಿ ಬಸ್‌ಗೆ ₹2 ಕೋಟಿ ಕೊಟ್ಟು ಖರೀದಿ ಮಾಡುವುದು ಹೊರೆಯಾಗಬಹುದು ಎಂದು ಟೆಂಡರ್ ರದ್ದುಪಡಿಸಲಾಯಿತು ಎಂದು ತಿಳಿದು ಬಂದಿದೆ.

ಸದ್ಯ ಇತ್ತೀಚಿನ ಅನುಮೋದನೆ ಪ್ರಕಾರ, ಸಾರಿಗೆ ಇಲಾಖೆಗೆ ಮತ್ತೆ ಹೊಸದಾಗಿ ಟೆಂಡರ್‌ ಕರೆಯುವಂತೆ ಸರ್ಕಾರ ಸೂಚನೆ ನೀಡಲಾಗಿದೆ. ಆದರೆ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಬಸ್ ನಿಗಮಕ್ಕೆ ಭಾರಿ ಹೊರೆಯಾಗಲಿರುವ ನೇರ ಖರೀದಿಗೆ ಮುಂದಾಗಿಲ್ಲ. ಬದಲಾಗಿ ಜಿಸಿಸಿ ಮಾದರಿಯಲ್ಲೇ ಬಸ್ ಪಡೆದು ಕಾರ್ಯಚರಣೆ ನಡೆಸಲು ಇಲಾಖೆ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿದೆ.

ಆದಷ್ಟು ಶೀಘ್ರವೇ ಸಾರಿಗೆ ಇಲಾಖೆ ಟೆಂಡರ್ ಕರೆಯಲು ಕ್ರಮ ಕೈಗೊಳ್ಳಲಿದೆ. ಈ ಹಿಂದೆ ಸೆಪ್ಟಂಬರ್‌ನಲ್ಲಿ ರಾಮಲಿಂಗಾ ರೆಡ್ಡಿ ಅವರು ಟೆಂಡರ್ ಆಹ್ವಾನಕ್ಕೆ ಸೂಚಿಸದ್ದರು. ತದನಂತದಲ್ಲಿ ಒಂದಷ್ಟು ಬೆಳವಣಿಗೆ ಬಳಿಕ ಆ ಟೆಂಡರ್ ಮುಂದುವರಿಯಲಿಲ್ಲ. ಇದೀಗ ಹೊಸ ಟೆಂಡರ್ ಆಹ್ವಾನಕ್ಕೆ ಇಲಾಕೆ ಸಜ್ಜಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+