ರೇಷ್ಮೆ ಸೀರೆ: ಬೆಂಗಳೂರಲ್ಲಿ 10ದಿನ ಶೇ.25ರಷ್ಟು ರಿಯಾಯ್ತಿ ಮಾರಾಟ
Recommended Video

ಬೆಂಗಳೂರು, ಅಕ್ಟೋಬರ್ 10: ಮೈಸೂರು ದಸರಾ ಅಂಗವಾಗಿ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ವತಿಯಿಂದ ಅ.10ರಿಂದ 17ರವರೆಗೆ ಸೀರೆಗಳ ಮಾರಾಟ ಮತ್ತು ಪ್ರದರ್ಶನ ಆಯೋಜಿಸಿದೆ.
ಜಾರ್ಜೆಂಟ್, ಕ್ರೇಪ್ ಡಿಸೈನ್, ವಿವಾಹ ಸಂಗ್ರಹ ಸೀರೆಗಳು ಸೇರಿ ಎಲ್ಲಾ ಉತ್ಪನ್ನಗಳ ಮೇಲೆ ಶೇ.25ರಷ್ಟು ರಿಯಾಯಿತಿ ದೊರೆಯಲಿದೆ. ಬೆಳಗ್ಗೆ 10ರಿಂದ ಸಂಜೆ 7ರವರೆಗೆ ತೆರೆದಿರುತ್ತದೆ.
ವಿಂಟೇಜ್ ಮೈಸೂರು ಸಿಲ್ಕ್ ಸೀರೆಗಳ ಸ್ಪರ್ಧೆ ವಿಜೇತರಿಗೆ ಅ.10ರಂದು ಮಧ್ಯಾಹ್ನ 2.30ಕ್ಕೆ ಬಹುಮಾನ ವಿತರಿಸಲಾಗುತ್ತದೆ. ಸ್ಪರ್ಧೆ ಅಂಗವಾಗಿ ಗ್ರಾಹಕರು 1977-78ಕ್ಕಿಂತ ಹಳೆಯ ಮೈಸೂರು ರೇಷ್ಮೆ ನೇಯ್ಗೆ ಕಾರ್ಖಾನೆಯಲ್ಲಿ ನೇಯ್ದ ಸೀರೆಗಳನ್ನು ನೀಡಿದ್ದರು.

ಅದರಲ್ಲಿ ಉತ್ತಮ ನಿರ್ವಹಣೆ ಮಾಡಲಾಗಿರು ವ ಅರಕೆರೆಯ ಎಸ್ ಜೆಆರ್ ಲಕ್ಸೂರಿಯಾ ಅಪಾರ್ಟ್ ಮೆಂಟ್ ನಿವಾಸಿ ಪದ್ಮಾವತಿ ಸುಬ್ಬಣ್ಣ ಮತ್ತು ಚಂದ್ರಾ ಲೇಔಟ್ ನ ಡಾ. ಬಿ.ಆರ್. ಶರ್ಮಿಳಾರನ್ನು ಆಯ್ಕೆ ಮಾಡಲಾಗಿದೆ.
5 ವಿಂಟೇಜ್ ಸೀರೆಗಳಿಗೆ ಸಮಾಧಾನಕರ ಬಹುಮಾನ ನೀಡಲಾಗುತ್ತಿದ್ದು, 5 ಸಾವಿರ ರೂ. ಮೌಲ್ಯದ ಮರುಖರೀದಿ ಗಿಫ್ಟ್ ಕೂಪನ್ ವಿತರಿಸಲಾಗುತ್ತಿದೆ.












Click it and Unblock the Notifications