ಬಳ್ಳಾರಿಯಿಂದ ಸ್ಪರ್ಧೆ, ಬಿಜೆಪಿಯಿಂದ ಅಚ್ಚರಿಯ ಹೆಸರು
Recommended Video

ಬಳ್ಳಾರಿ, ಫೆಬ್ರವರಿ 13: ಬಳ್ಳಾರಿ ಜಿಲ್ಲಾ ಬಿಜೆಪಿಯಲ್ಲಿ ಅಚ್ಚರಿಯ ಹೆಸರೊಂದು ಮೇಲ್ಪಂಕ್ತಿಗೆ ಬರುತ್ತಿದೆ. ಕಳಂಕಿತರನ್ನು ಸಕ್ರಿಯ ರಾಜಕೀಯದಿಂದ ದೂರವೇ ಇರಿಸಲು ಮತ್ತು ಕಳಂಕಿತರಿಂದ ಅಂತರ ಕಾಪಾಡಿಕೊಳ್ಳಲು ನಿರ್ಧರಿಸಿರುವ ಬಿಜೆಪಿ ರಾಷ್ಟ್ರ ಮುಖಂಡರು, ಬಳ್ಳಾರಿ ಜಿಲ್ಲೆಯಿಂದ ಪ್ರಯೋಗ ಮಾಡಲು ಮುಂದಾಗಿದ್ದಾರೆ.
ಗಾಲಿ ರೆಡ್ಡಿ ಸಹೋದರರನ್ನು ಎದುರು ಹಾಕಿಕೊಳ್ಳಲು ಸಿದ್ದವಿಲ್ಲದ ಸ್ಥಿತಿಯಲ್ಲಿದ್ದ ಬಿಜೆಪಿ ಈ ಚುನಾವಣೆಯಿಂದಲೇ ರೆಡ್ಡಿ ಸಹೋದರನ್ನು ಕೈಬಿಟ್ಟು ಜಿಲ್ಲೆಯಲ್ಲಿ ರಾಜಕೀಯ ನಡೆಸಲು ಮುಂದಾಗಿದೆ.
ಬಿ.ಎಸ್. ಆನಂದಸಿಂಗ್, ಬಿ. ನಾಗೇಂದ್ರ ಬಿಜೆಪಿಯನ್ನು ಬಿಟ್ಟ ನಂತರ ಇಡೀ ಪಕ್ಷವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿರುವ ಸಂತೋಷ್ ಜೀ ಮತ್ತು ಆರ್‍ಎಸ್‍ಎಸ್, ಸಂಘ ಪರಿವಾರ ಬೇಲ್ ಡೀಲ್‍ನಲ್ಲಿ ಬಂಧಿತರಾಗಿ, ಜಾಮೀನಿನ ಮೇಲಿರುವ ಗಾಲಿ ಸೋಮಶೇಖರರೆಡ್ಡಿ ಅವರಿಗೆ ಪರ್ಯಾಯ ಅಭ್ಯರ್ಥಿಯನ್ನು ಅಂತಿಮಗೊಳಿಸಿದ್ದಾರೆ.
ಜಿ. ಸೋಮಶೇಖರೆಡ್ಡಿ ಅವರಿಗೆ ಪರ್ಯಾಯವಾಗಿ ಡಾ. ಬಿ.ಕೆ. ಸುಂದರ್ ಅವರ ಹೆಸರನ್ನು ಪಕ್ಷ ಅಂತಿಮಗೊಳಿಸಿದೆ. ಅಲ್ಲದೇ, ಚುನಾವಣೆಗೆ ಸಿದ್ಧತೆ ನಡೆಸಲು ಸೂಕ್ಷಮವಾಗಿ ಗ್ರೀನ್ ಸಿಗ್ನಲ್ ನೀಡಿದೆ.

ಸೋಮಶೇಖರ ರೆಡ್ಡಿ ಬದಲಿಗೆ ಡಾ. ಬಿ.ಕೆ ಸುಂದರ್
ಗಾಲಿ ರೆಡ್ಡಿ ಸಹೋದರರನ್ನು ಎದುರು ಹಾಕಿಕೊಳ್ಳಲು ಸಿದ್ದವಿಲ್ಲದ ಸ್ಥಿತಿಯಲ್ಲಿದ್ದ ಬಿಜೆಪಿ ಈ ಚುನಾವಣೆಯಿಂದಲೇ ರೆಡ್ಡಿ ಸಹೋದರನ್ನು ಕೈಬಿಟ್ಟು ಜಿಲ್ಲೆಯಲ್ಲಿ ರಾಜಕೀಯ ನಡೆಸಲು ಮುಂದಾಗಿದೆ. ಜಿ. ಸೋಮಶೇಖರೆಡ್ಡಿ ಅವರಿಗೆ ಪರ್ಯಾಯವಾಗಿ ಡಾ. ಬಿ.ಕೆ. ಸುಂದರ್ ಅವರ ಹೆಸರನ್ನು ಪಕ್ಷ ಅಂತಿಮಗೊಳಿಸಿದೆ.
ಡಾ. ಬಿ.ಕೆ. ಸುಂದರ್ ಅವರು ಕೂಡ, ಪ್ರಥಮ ಸುತ್ತಿನಲ್ಲಿ ತಮ್ಮ ವೈದ್ಯಕೀಯ ವೃತ್ತಿಯ ಆಪ್ತರು, ಮಿತ್ರರು ಮತ್ತು ವೃತ್ತಿಬಾಂಧವನ್ನು ವೈಯಕ್ತಿಕವಾಗಿ ಭೇಟಿ ಮಾಡುತ್ತಿದ್ದು, ಕಣಕ್ಕಿಳಿಯಲು ಸಜ್ಜಾಗುತ್ತಿದ್ದಾರೆ.

ಸುಷ್ಮಾಸ್ವರಾಜ್ ಅವರ ಸಂಪೂರ್ಣ ಬೆಂಬಲ
ಅಷ್ಟೇ ಅಲ್ಲ, ಸುಷ್ಮಾಸ್ವರಾಜ್ ಅವರ ಸಂಪೂರ್ಣ ಬೆಂಬಲ ಪಡೆದಿರುವ ಸುಂದರ್, ಕಳೆದ 2 ವರ್ಷಗಳಿಂದ ಪಕ್ಷದ ವಿವಿಧ ವೇದಿಕೆಗಳಲ್ಲಿ ರಾಜ್ಯ - ರಾಷ್ಟ್ರ ಬಿಜೆಪಿ ಮುಖಂಡರ ಜೊತೆ ಆಪ್ತ ಸಮಾಲೋಚನೆ ನಡೆಸಿದ್ದಾರೆ. ಕಳೆದಬಾರಿ ಶೋಭಾಕರಂದ್ಲಾಜೆ ಅವರು ಬಳ್ಳಾರಿಗೆ ಭೇಟಿ ನೀಡಿದಾಗ, ಡಾ. ಬಿ.ಕೆ. ಸುಂದರ್, ಅವರ ತಂದೆ ಡಾ. ಬಿ.ಕೆ. ಶ್ರೀನಿವಾಸಮೂರ್ತಿ ಅವರೊಂದಿಗೂ ರಾಜಕೀಯ ಪ್ರವೇಶದ ಚರ್ಚೆ ನಡೆಸಿದ್ದರು ಎನ್ನಲಾಗಿದೆ.

ರೆಡ್ಡಿ ವಿರೋಧಗಳ ಬೆಂಬಲವೂ ಇದೆ
ಸುಷ್ಮಾಸ್ವರಾಜ್ ಅವರ ಬೆಂಬಲದಿಂದಲೇ ರಾಜಕೀಯ ಪ್ರವೇಶವನ್ನು ಮಾಡುತ್ತಿರುವ ಡಾ. ಬಿ.ಕೆ. ಸುಂದರ್, ಸೈಕ್ಲಿಂಗ್, ಪರಿಸರ ಜಾಗೃತಿ, ಆರೋಗ್ಯ ಶಿಬಿರಗಳನ್ನು ಏರ್ಪಡಿಸುವ ಮೂಲಕ ಗುಪ್ತವಾಗಿ ಜನಸಂಪರ್ಕ ಸಾಧಿಸುತ್ತಿದ್ದಾರೆ. ಜಿ. ಸೋಮಶೇಖರರೆಡ್ಡಿ ಮತ್ತು ರೆಡ್ಡಿ ಪರಿವಾರವನ್ನು ವಿರೋಧಿಸುವ ಎಲ್ಲರೂ ಇವರೊಂದಿಗೆ ಗುರುತಿಸಿಕೊಳ್ಳಲು ಉತ್ಸುಕರಾಗಿದ್ದಾರೆ.

ಡಾ. ಸುಂದರ್ ಹಿನ್ನಲೆ
1999ರಲ್ಲಿ ಸುಷ್ಮಾಸ್ವರಾಜ್ ಅವರು ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ನಗರದ ಖ್ಯಾತ ವೈದ್ಯ ಡಾ. ಬಿ.ಕೆ. ಶ್ರೀನಿವಾಸಮೂರ್ತಿ ಅವರ ಕುಟುಂಬದ ನಂಟು ಶುರುವಾಯಿತು. ಒಂದು ಹಂತದಲ್ಲಿ ಡಾ. ಬಿ.ಕೆ. ಸುಂದರ್ ಅವರು ಸುಷ್ಮಾಸ್ವರಾಜ್ ಅವರ ಕುಟುಂಬದ ಸದಸ್ಯರಾಗುವ ಅವಕಾಶವೂ ಇತ್ತು.
ಅಂದಿನಿಂದ ಪ್ರತೀವರ್ಷದ ಶ್ರಾವಣ ಶುಕ್ರವಾರಕ್ಕೆ ಬಳ್ಳಾರಿಗೆ ಬಂದು ಬಳ್ಳಾರಿಯ ಮಗಳಂತೆ ವರಮಹಾಲಕ್ಷ್ಮೀವ್ರತದಲ್ಲಿ ಪಾಲ್ಗೊಳ್ಳುವ ಭರವಸೆ ನೀಡಿದ್ದ ಸುಷ್ಮಾಸ್ವರಾಜ್, ಕಾಲಾನಂತರ ಬಳ್ಳಾರಿಗೆ ಆಗಮಿಸುತ್ತಿಲ್ಲ.

ಶುದ್ಧಹಸ್ತದವರಿಗೆ ರಾಜಕೀಯ ಅವಕಾಶ
ಡಾ.ಬಿ.ಕೆ. ಶ್ರೀನಿವಾಸಮೂರ್ತಿ ಮತ್ತು ಅವರ ಕುಟುಂಬದ ಸದಸ್ಯರ ಜೊತೆಯಲ್ಲಿ ನಿರಂತರ ಸಂಪರ್ಕ ಹೊಂದಿರುವ ಸುಷ್ಮಾ ಸ್ವರಾಜ್ ಅವರು ಶುದ್ಧಹಸ್ತದವರಿಗೆ ರಾಜಕೀಯ ಅವಕಾಶ ಕಲ್ಪಿಸಬೇಕು ಎನ್ನುವ ವಿಚಾರಕ್ಕೆ ಬೆಂಬಲ ನೀಡಿ, ಡಾ. ಬಿ.ಕೆ. ಸುಂದರ್ ಅವರ ಹೆಸರನ್ನು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಅವರೇ ಶಿಫಾರಸ್ಸು ಮಾಡಿದ್ದಾರೆ ಎಂದು ಮೂಲಗಳು ಬಲಪಡಿಸಿವೆ.

ಪರ್ಯಾಯ ಅಭ್ಯರ್ಥಿಯನ್ನು ಹುಡುಕಾಟ
ಬೇಲ್ ಡೀಲ್ ನಲ್ಲಿ ಆರೋಪಿ ಆಗಿರುವ ಜಿ. ಸೋಮಶೇಖರರೆಡ್ಡಿ ಚುನಾವಣೆಯ ವೇಳೆಗೆ ಪುನಃ ಕಾನೂನಾತ್ಮಕ ತೊಂದರೆಗೆ ಸಿಲುಕಿದಲ್ಲಿ ಪರ್ಯಾಯ ಅಭ್ಯರ್ಥಿಯನ್ನು ಹುಡುಕಾಡುವ ಬದಲು, ಈಗಲೇ ಸಿದ್ಧಪಡಿಸಿಕೊಳ್ಳಬೇಕು ಎನ್ನುವ ದೂರದೃಷ್ಟಿಯಿಂದ ಡಾ. ಬಿ.ಕೆ. ಸುಂದರ್ ಅವರನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಲು ಪಕ್ಷ ನಿರ್ಧರಿಸಿದೆ.
ಆದರೆ, ಬಿಜೆಪಿಯ ಹೈಕಮಾಂಡ್‍ನ ನಿಗೂಢನಡೆ ಜಿ. ಸೋಮಶೇಖರರೆಡ್ಡಿ ಅವರತ್ತ ವಾಲುವ ಸಂದರ್ಭಗಳು ಡೋಲಾಯಮಾನವಾಗಿದೆ. ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಹಾಗು ಪಕ್ಷದ ಪಾರ್ಲಿಮೆಂಟರಿ ಕಮಿಟಿ ಕರ್ನಾಟಕ ರಾಜಕೀಯದ ಆಗುಹೋಗುಗಳ ನಿರ್ಧಾರಗಳನ್ನು ಕೈಗೊಳ್ಳಲಿದೆ. ಆಗ, ಡಾ. ಬಿ.ಕೆ. ಸುಂದರ್ ಮೇಲುಗೈ ಸಾಧಿಸಲಿದ್ದಾರೆ ಎನ್ನುತ್ತದೆ ಬಿಜೆಪಿ.
-
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Asha Bosle Net Worth: ದೇಶ-ವಿದೇಶಗಳಲ್ಲಿ ರೆಸ್ಟೊರೆಂಟ್ಸ್, ನೂರಾರು ಕೋಟಿ ಒಡತಿ ಆಶಾ ಭೋಸ್ಲೆ ಒಟ್ಟು ಆಸ್ತಿ ವಿವರ ಹೀಗಿದೆ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ












Click it and Unblock the Notifications