ಗೆಳತಿ ಮನೆಯವರ ಕಿರುಕುಳ; ಫೇಸ್ ಬುಕ್ ಲೈವ್ ನಲ್ಲಿ ವಿಷ ಕುಡಿದ ಯುವಕ

ಬೆಳಗಾವಿ, ಆಗಸ್ಟ್ 22: ತನ್ನ ಗೆಳತಿಯ ಮನೆಯವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಯುವಕನೊಬ್ಬ ಫೇಸ್ ಬುಕ್ ಲೈವ್ ವೀಡಿಯೋದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಅರಭಾವಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಪ್ರವೀಣ ಚಂದುಗೋಳ ಎಂಬಾತನೇ ಲೈವ್ ಮಾಡಿ ವಿಷ ಸೇವಿಸಿದ ಯುವಕ.

ಪ್ರವೀಣ ಅದೇ ಗ್ರಾಮದ ಕಾಂಚನಾ ಎಂಬ ಯುವತಿಯನ್ನು 4 ವರ್ಷಗಳಿಂದ ಪ್ರೀತಿಸುತ್ತಿದ್ದನು. ಆದರೆ ವಿಷಯ ತಿಳಿದ ಕಾಂಚನಾ ಮನೆಯವರು ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿ, ವಿಷ ಸೇವಿಸುವ ಮುಂಚೆ ತನ್ನ ಸಾವಿಗೆ ಯುವತಿಯ ಮನೆಯವರೇ ಕಾರಣ ಎಂದು ಹೇಳಿ ಫೇಸ್ ಬುಕ್ ಲೈವ್ ವಿಡಿಯೋದಲ್ಲಿ ವಿಷ ಸೇವಿಸಿದ್ದಾನೆ.

Young Man Drink Poison Facebook Live Video In Gokak

ಅಸ್ವಸ್ಥನಾದ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ. ಘಟಪ್ರಭಾ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+