ಮುಸ್ಲಿಂ ಯುವತಿಗೆ ಲಿಂಗದೀಕ್ಷೆ ನೀಡಿದ ವಿರಕ್ತಮಠದ ಸ್ವಾಮೀಜಿ

ಬೆಳಗಾವಿ, ಮೇ 09: ಮುಸ್ಲಿಂ ಸಮುದಾಯಕ್ಕೆ ಸೇರಿದ ಯುವತಿಯೊಬ್ಬಳಿಗೆ ಹುಕ್ಕೇರಿ ವಿರಕ್ತಮಠದ ಶಿವಬಸವ ಸ್ವಾಮೀಜಿ ಮಠದಲ್ಲಿ ಗುರುವಾರ, ಮೇ 07ರಂದು ಲಿಂಗದೀಕ್ಷೆ ನೀಡಿದ್ದಾರೆ.

ಚಿಕ್ಕೋಡಿ ತಾಲೂಕಿನ ಕಬ್ಬೂರ ಮೂಲದ ಲಿಂಗಾಯತ ಸಮುದಾಯಕ್ಕೆ ಸೇರಿದ ಯುವಕ ಅದೇ ಗ್ರಾಮದ ಮುಸ್ಲಿಂ ಸಮುದಾಯದ ಯುವತಿಯನ್ನು ಪ್ರೀತಿಸಿ ಚಿಕ್ಕೋಡಿ ರೆಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿ ವಿವಾಹ ನೋಂದಣಿಯನ್ನೂ ಮಾಡಿಸಿದ್ದ.

Virakthamata Swamiji Gave Lingadeekshe To Muslim Girl

ಆದರೆ ಯುವಕನ ತಂದೆ ತಾಯಿಯು ಯುವತಿ ಮುಸ್ಲಿಂ ಎಂಬ ಕಾರಣಕ್ಕೆ ಮನೆಗೆ ಸೇರಿಸಿಕೊಂಡಿರಲಿಲ್ಲ. ಬಳಿಕ ಲಿಂಗ ದೀಕ್ಷೆಯಿಲ್ಲದೇ ಮನೆಗೆ ಸೇರಿಸಿಕೊಳ್ಳಲು ಒಪ್ಪಿಗೆ ನೀಡಿರಲಿಲ್ಲ.

ಸ್ವಾಮೀಜಿ ಸನ್ಯಾಸತ್ವ ಬಿಟ್ಟು ಸಂಸಾರಿಯಾಗಿದ್ದು ಯಾಕೆ?
ಮನೆಯವರ ನಿರಾಕರಣೆಯ ಹಿನ್ನೆಲೆಯಲ್ಲಿ ಯುವಕ ವಿರಕ್ತಮಠಕ್ಕೆ ಭೇಟಿ ನೀಡಿ ಶ್ರೀಗಳಿಗೆ ವಿಚಾರ ತಿಳಿಸಿದ್ದಾನೆ. ತನ್ನ ಹೆಂಡತಿಗೆ ಲಿಂಗದೀಕ್ಷೆ ನೀಡುವಂತೆ ವಿನಂತಿಸಿದ್ದಾನೆ. ಶ್ರೀಗಳು ಕೂಡಲೇ ಒಪ್ಪಿ, ಲಿಂಗಾಯತ ವಿಧಿ-ವಿಧಾನದ ಪ್ರಕಾರ ಮುಸ್ಲಿಂ ಯುವತಿಗೆ ಲಿಂಗದೀಕ್ಷೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+