ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿಯ ವಿದ್ಯಾನಗರದಲ್ಲಿ ಜನರ ವಿರೋಧದ ನಡುವೆಯೂ ಎಂಎಸ್‌ಐಎಲ್ ಆರಂಭ

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಸೆಪ್ಟೆಂಬರ್‌, 21: ಬಳ್ಳಾರಿಯ ವಿದ್ಯಾನಗರದ ಮೂರನೇ ಕ್ರಾಸ್‌ನಲ್ಲಿ ಎಂಎಸ್‌ಐಎಲ್ ಆರಂಭಿಸಲಾಗಿದೆ. ಆದರೆ, ಇದು ಜನವಸತಿ ಪ್ರದೇಶ ಆಗಿದ್ದರಿಂದ ಎಂಎಸ್‌ಐಎಲ್ ಆರಂಭಿಸಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

ಸ್ಥಳೀಯರು ಎಂಎಸ್‌ಐಎಲ್ ಶಾಪ್ ಮುಂದೆ ದಿಢೀರ್ ಪ್ರತಿಭಟನೆ ನಡೆಸಿದರು‌. ಸ್ಥಳೀಯರು ವಿರೋಧ ಮಾಡಿ ಪ್ರತಿಭಟನೆಗೆ ಇಳಿದಿದ್ದರಿಂದ ಪೊಲೀಸ್ ಭದ್ರತೆಯಲ್ಲಿ ಎಂಎಸ್ಐಎಲ್ ಶಾಪ್ ಒಪನ್ ಮಾಡಲಾಗಿದೆ. ಜನವಸತಿ ಪ್ರದೇಶದಲ್ಲಿ ಎಂಎಸ್‌ಐಎಲ್ ಶಾಪ್ ಆರಂಭ ಮಾಡಬಾರದು ಎಂದು ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಎಂಎಸ್‌ಐಎಲ್ ಶಾಪ್ ಪಕ್ಕದಲ್ಲಿಯೇ ವಿಮ್ಸ್ ಆಸ್ಪತ್ರೆ ಸೇರಿದಂತೆ ವಿವಿಧ ಶಾಲಾ-ಕಾಲೇಜುಗಳಿವೆ. ಹೀಗಿರುವಾಗ ಎಂಎಸ್‌ಐಎಲ್ ಆರಂಭ ಮಾಡಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಬಳ್ಳಾರಿ ಜಿಲ್ಲೆಯ ಉಪ್ಪಾರಹಳ್ಳಿಯಲ್ಲಿ ಮದ್ಯಪಾನ ನಿಷೇಧ: ಮಹಿಳೆಯರ ಸಂತಸಬಳ್ಳಾರಿ ಜಿಲ್ಲೆಯ ಉಪ್ಪಾರಹಳ್ಳಿಯಲ್ಲಿ ಮದ್ಯಪಾನ ನಿಷೇಧ: ಮಹಿಳೆಯರ ಸಂತಸ

2017ರಲ್ಲೂ ಇದೇ ವಿದ್ಯಾನಗರದ ನಾಲ್ಕನೇ ಕ್ರಾಸ್ ಬಳಿ ಎಂಎಸ್‌ಐಎಲ್ ಆರಂಭಕ್ಕೆ ಮುಂದಾಗಿದ್ದರು. ಆಗ ಸ್ಥಳೀಯ ನಿವಾಸಿಗಳು ಇದನ್ನು ವಿರೋಧಿಸಿ ತೀವ್ರ ಹೋರಾಟ ನಡೆಸಿದ್ದರು. ಜನರು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಅದನ್ನು ಬೇರೆಡೆ ಸ್ಥಳಾಂತರ ಮಾಡಲಾಗಿತ್ತು. ಆದರೆ ಇದೀಗ ಜನರ ವಿರೋಧವಿದ್ದರೂ ಎಂಎಸ್‌ಐಎಲ್ ಆರಂಭ ಮಾಡಲಾಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.

Ballary Vidyanagar residents oppose for MSIL Shop

ಇನ್ನು ನಿಯಮದ ಪ್ರಕಾರ ಎಂಎಸ್ಐಎಲ್ ಆರಂಭ ಮಾಡಲಾಗಿದೆ. ಅಂಗಡಿಯನ್ನು ಸ್ಥಳಾಂತರ ಮಾಡಬೇಕೆಂದರೆ, ಹಿರಿಯ ಅಧಿಕಾರಿಗಳೇ ನಿರ್ಧಾರ ಮಾಡಬೇಕು. ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಅಬಕಾರಿ ಅಧಿಕಾರಿಗಳು ಹೇಳುತ್ತಿದ್ದಾರೆ. ಸ್ಥಳೀಯರ ವಿರೋಧದ ನಡುವೆಯೂ ವಿದ್ಯಾ ನಗರ ಜನವಸತಿ ಪ್ರದೇಶದಲ್ಲಿ ಎಂಎಸ್‌ಐಎಲ್ ಆರಂಭ ಮಾಡಿರುವುದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಬಹುದು ಎನ್ನಲಾಗಿದೆ.

Breaking: ಬಳ್ಳಾರಿ ಬಳಿ ಕಾಲುವೆಗೆ ಬಿದ್ದ ಕೂಲಿ ಕಾರ್ಮಿಕರು ಸಾಗುತ್ತಿದ್ದ ಆಟೋ, 3 ಸಾವುBreaking: ಬಳ್ಳಾರಿ ಬಳಿ ಕಾಲುವೆಗೆ ಬಿದ್ದ ಕೂಲಿ ಕಾರ್ಮಿಕರು ಸಾಗುತ್ತಿದ್ದ ಆಟೋ, 3 ಸಾವು

ಉಪ್ಪಾರಹಳ್ಳಿಯಲ್ಲಿ ಮದ್ಯ ಮಾರಾಟ ನಿಷೇಧ:
ಇದೇ ರೀತಿ ಜಿಲ್ಲೆಯ ಕಂಪ್ಲಿ ಸಮೀಪದ ಮೇಟ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಪ್ಪಾರಹಳ್ಳಿ ಗ್ರಾಮದಲ್ಲಿ ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಮದ್ಯಪಾನ ನಿಷೇಧ ಮಾಡಿ ಎಂದು ನಾಮಫಲಕವನ್ನು ಹಾಕಲಾಗಿತ್ತು. ಮಧ್ಯಪಾನಮುಕ್ತ ಗ್ರಾಮವೆಂದು ನಾಮಫಲಕ ಅನಾವರಣಗೊಳಿಸಲಾಗಿತ್ತು. ಜಿಲ್ಲೆಯ ಎಸ್‌ಪಿ ಸೈದುಲ್ ಅಡಾವತ್, ಎಎಸ್‌ಪಿ ನಟರಾಜ್, ಡಿವೈಎಸ್‌ಪಿ ಎಸ್.ಎಸ್.ಕಾಶಿ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಉಪ್ಪಾರಹಳ್ಳಿ ಗ್ರಾಮವನ್ನು ಮದ್ಯಮುಕ್ತ ಗ್ರಾಮವನ್ನಾಗಿ ಘೋಷಿಸಿತ್ತು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಭೀಮಪ್ಪ, ಹನುಮನಗೌಡ ಮಾತನಾಡಿ, ಪ್ರತಿನಿತ್ಯ ಕುಡಿತದಿಂದಲೇ ಜೀವನ ಕಳೆಯುತ್ತಿದ್ದಾರೆ. ಈ ಗ್ರಾಮದ ಹಲವಾರು ಯುವಕರು ಸಂಪೂರ್ಣ ಕುಡಿತದ ಚಟಕ್ಕೆ ಬಿದ್ದಿದ್ದಾರೆ. ಒಗ್ಗಟ್ಟಿನಿಂದ ಮುಂದೆ ಬಂದು ಮದ್ಯಮುಕ್ತ ಗ್ರಾಮವನ್ನಾಗಿಸಲು ನಾವು ನಿರ್ಧರಿಸಿದ್ದೇವೆ. ಅಲ್ಲದೇ ಗ್ರಾಮದಲ್ಲಿ ಮದ್ಯ ಮಾರಾಟ ಮಾಡಿದರೆ ಅಥವಾ ಕುಡಿದರೆ ಅಂತಹವರನ್ನು ಗ್ರಾಮದಿಂದ ಹೊರಹಾಕಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದ್ದರು.

Ballary Vidyanagar residents oppose for MSIL Shop

ಮದ್ಯ ಮಾರಾಟ ಮಾಡಿದರೆ ಸೂಕ್ತ ಕ್ರಮ:
ನಂತರ ಪಿಐ ಸುರೇಶ್‌ ತಳವಾರ ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಉಪ್ಪಾರಳ್ಳಿ ಗ್ರಾಮವನ್ನು ಮದ್ಯಮುಕ್ತ ಗ್ರಾಮವೆಂದು ಜನರ ಸಹಕಾರದೊಂದಿಗೆ ಘೋಷಿಸಲಾಗಿದೆ. ಗ್ರಾಮದ ಜನರು ಮುಂದೆ ಬಂದು ತಮ್ಮ ಗ್ರಾಮದಲ್ಲಿ ಮದ್ಯವನ್ನು ಸಂಪೂರ್ಣವಾಗಿ ನಿಷೇಧಿಸಿದ್ದಾರೆ. ಮುಂದಿನ ದಿನಗಳಲ್ಲಿ ಯಾರಾದರೂ ಅಕ್ರಮವಾಗಿ ಮದ್ಯ ಮಾರಾಟ ಮಾಡಿದರೆ 112 ನಂಬರ್‌ಗೆ ಕರೆ ಮಾಡಿ ತಿಳಿಸಬೇಕು. ನಂತರ ನಾವು ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು. ಇದೇ ವೇಳೆ ಗಂಗಮ್ಮ ಎಂಬ ಗ್ರಾಮದ ಮಹಿಳೆಯೊಬ್ಬರು ಆಗಮಿಸಿ, ಮದ್ಯಪಾನದಿಂದ ನಮ್ಮ ಕುಟುಂಬದ ಪರಿಸ್ಥಿತಿ ತೀರಾ ಹದಗೆಟ್ಟು ಹೋಗಿತ್ತು. ಮದ್ಯಪಾನ ಮಾಡುತ್ತಿದ್ದ ನನ್ನ ಪತಿಯಿಂದ ನಮಗೆಲ್ಲ ನೆಮ್ಮದಿ ಇಲ್ಲದಂತಾಗಿತ್ತು. ಮದ್ಯಪಾನ ಮುಕ್ತ ಗ್ರಾಮ ಮಾಡಿರುವುದು ತುಂಬಾ ಸಂತೋಷ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಇದರ ಬೆನ್ನಲ್ಲೇ ಇದೀಗ ಬಳ್ಳಾರಿಯ ವಿದ್ಯಾನಗರದ ಮೂರನೇ ಕ್ರಾಸ್‌ನಲ್ಲಿ ಎಂಎಸ್‌ಐಎಲ್‌ ಆರಂಭ ಮಾಡಿದ್ದು, ಜನರ ಅಂಗಡಿ ಮಾಲೀಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಹಾಗೂ ಎಂಎಸ್‌ಐಎಲ್‌ ಅಂಗಡಿ ಮುಚ್ಚುವಂತೆ ಪಟ್ಟು ಹಿಡಿದಿದ್ದಾರೆ.

English summary
MSIL Shop started at Vidyanagar Third Cross Bellary. People expressed outrage over MSIL. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X