ಬೆಳಗಾವಿ : ಅಹಮದಾಬಾದ್‌, ಪುಣೆಗೆ ವಿಮಾನ ಹಾರಾಟ ಆರಂಭ

ಬೆಳಗಾವಿ, ಮೇ 16 : ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಅಹಮದಾಬಾದ್ ಮತ್ತು ಪುಣೆ ನಗರಗಳಿಗೆ ವಿಮಾನ ಹಾರಾಟ ಆರಂಭವಾಗಿದೆ. ಉಡಾನ್ -3 ಯೋಜನೆಗೆ ಬೆಳಗಾವಿ ನಿಲ್ದಾಣ ಸೇರ್ಪಡೆಗೊಂಡಿದೆ.

ಪುಣೆ, ಅಹಮದಾಬಾದ್ ವಿಮಾನ ಹಾರಾಟ ಆರಂಭವಾಗಿದ್ದರಿಂದ ಬೆಳಗಾವಿಯಿಂದ ಮೂರು ವಿಮಾನಗಳ ಹಾರಾಟ ಆರಂಭವಾದಂತಾಗಿದೆ. ಬೆಳಗಾವಿ-ಹೈದರಾಬಾದ್ ನಡುವೆ ಈಗಾಗಲೇ ವಿಮಾನ ಹಾರಾಟ ನಡೆಯುತ್ತಿದೆ.

ಬೆಂಗಳೂರು-ಬೆಳಗಾವಿ-ಅಹಮದಾಬಾದ್-ಬೆಳಗಾವಿ-ಬೆಂಗಳೂರು ಮಾರ್ಗದಲ್ಲಿ ಮೆ.ಗೋಡಾವತ್ ಕಂಪನಿಯ ಸ್ಟಾರ್ ಏರ್ ಮತ್ತು ಬೆಂಗಳೂರು-ಬೆಳಗಾವಿ-ಪುಣೆ-ಬೆಳಗಾವಿ-ಬೆಂಗಳೂರು ಮಾರ್ಗದಲ್ಲಿ ಮೆ.ಅಲಯನ್ಸ್ ಕಂಪನಿಯ ವಿಮಾನ ಸಂಚಾರ ನಡೆಸಲಿದೆ.

Belagavi airport

ವೇಳಾಪಟ್ಟಿ : ಮಂಗಳವಾರ ಹೊರತುಪಡಿಸಿ ಉಳಿದ ದಿನ ಬೆಂಗಳೂರು-ಬೆಳಗಾವಿ-ಅಹಮದಾಬಾದ್ ವಿಮಾನ ಸಂಚಾರ ನಡೆಸಲಿದೆ. ಬೆಂಗಳೂರಿನಿಂದ ಹೊರಡುವ ವಿಮಾನ 8.40 ಬೆಳಗಾವಿಗೆ ಬರಲಿದ್ದು, 9.20ಕ್ಕೆ ಅಹಮದಾಬಾದ್‌ಗೆ ಹೊರಡಲಿದೆ.

ಅಹಮದಾಬಾದ್‌ನಿಂದ ಮಧ್ಯಾಹ್ನ 1 ಗಂಟೆಗೆ ಬೆಳಗಾವಿಗೆ ಬರಲಿರುವ ವಿಮಾನ 1.50ಕ್ಕೆ ಬೆಂಗಳೂರಿಗೆ ಹೊರಡಲಿದೆ. ಭಾನುವಾರ ಮಾತ್ರ 4.15ಕ್ಕೆ ಬೆಳಗಾವಿಗೆ ಬಂದು 4.40ಕ್ಕೆ ಅಹಮದಾಬಾದ್‌ಗೆ ತೆರಳಿದೆ. ರಾತ್ರಿ 10.20ಕ್ಕೆ ಬೆಳಗಾವಿಗೆ ಬಂದು, 10.40ಕ್ಕೆ ಬೆಂಗಳೂರಿಗೆ ಹೊರಡಲಿದೆ.

ಬೆಳಗಾವಿ-ಪುಣೆ ವಿಮಾನ ಮಧ್ಯಾಹ್ನ 3.40ಕ್ಕೆ ಬೆಳಗಾವಿಗೆ ಆಗಮಿಸಲಿದೆ. 4.05ಕ್ಕೆ ಪುಣೆಯತ್ತ ಹೊರಡಲಿದೆ. ಪುಣೆಯಿಂದ ಸಂಜೆ 7.05ಕ್ಕೆ ಬೆಳಗಾವಿಗೆ ಬರಲಿರುವ ವಿಮಾನ, 7.30ಕ್ಕೆ ಬೆಂಗಳೂರಿಗೆ ಹೊರಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+