ಬೆಳಗಾವಿಯಲ್ಲಿ ಔಷಧಿ ಅಂಗಡಿ ಚಾವಣಿ ಒಡೆದು ಮಾಸ್ಕ್‌ ಮೂಟೆ ಕದ್ದ ಕಳ್ಳರು

ಬೆಳಗಾವಿ, ಅಕ್ಟೋಬರ್ 30: ಔಷಧಿ ಮಳಿಗೆಯೊಂದರ ಚಾವಣಿ ಒಡೆದು ಒಳ ನುಗ್ಗಿದ ಕಳ್ಳರು ಒಂದು ಚೀಲ ಮಾಸ್ಕ್ ಅನ್ನು ಕದ್ದು ಪರಾರಿಯಾಗಿರುವ ಘಟನೆ ಜಿಲ್ಲೆಯ ‌ಸವದತ್ತಿ ತಾಲೂಕಿನ ‌ಇನಾಮಹೊಂಗಲ ಗ್ರಾಮದಲ್ಲಿ ಗುರುವಾರ ತಡರಾತ್ರಿ ನಡೆದಿದೆ.

ಇನಾಮಹೊಂಗಲ ಗ್ರಾಮದ ಚಂದ್ರಶೇಖರ ಹುಚ್ಚಣ್ಣವರ ಅವರಿಗೆ ಸೇರಿದ ಇಲ್ಲಿನ ಗುರು ಮೆಡಿಕಲ್ ಶಾಪ್ ನಲ್ಲಿ ಕಳ್ಳತನವಾಗಿದೆ. ಗುರುವಾರ ತಡರಾತ್ರಿಯಲ್ಲಿ ಕಳ್ಳರು ಮಳಿಗೆಗೆ ನುಗ್ಗಿದ್ದು, ಒಂದು ಚೀಲ ತುಂಬಿದ್ದ ಮಾಸ್ಕ ಅನ್ನು ಕದ್ದೊಯ್ದಿದ್ದಾರೆ. ಇಂದು ಬೆಳಗ್ಗೆ ಅಂಗಡಿ ಬಾಗಿಲು ತೆರೆದಾಗ ಮಾಸ್ಕ್ ಕಳ್ಳತನ ನಡೆದಿರುವ ಸಂಗತಿ ಬೆಳಕಿಗೆ ಬಂದಿದೆ.

Belagavi: Thieves Broke Roof Of Medical Shop And Stole Mask Bag

ಐದು ಸಾವಿರ ರೂಪಾಯಿ ಮೌಲ್ಯದ ಒಂದು ಚೀಲ ಮಾಸ್ಕ್ ಹಾಗೂ 50ಕ್ಕೂ ಹೆಚ್ಚಿನ ಸ್ಪ್ರೇಗಳನ್ನು ಕಳ್ಳತನ ಮಾಡಿರುವುದಾಗಿ ತಿಳಿದುಬಂದಿದೆ. ಜೊತೆಗೆ ಕ್ಯಾಶ್ ಕೌಂಟರ್ ನಲ್ಲಿದ್ದ ಆರು ಸಾವಿರ ನಗದನ್ನೂ ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಮಾಸ್ಕ್ ಗಾಗಿ ಚಾವಣಿ ಒಡೆದು ಕಳ್ಳತನ ಮಾಡಿರುವುದು ಅಚ್ಚರಿ ತಂದಿದೆ.

ಈ ಕುರಿತು ಸವದತ್ತಿ ಪೊಲೀಸ್ ‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+