ಹುಬ್ಬಳ್ಳಿ ಬಂದ್, ಬೆಳಗಾವಿಯಿಂದ ಸ್ಪೈಸ್‌ ಜೆಟ್ ಹಾರಾಟ

ಬೆಳಗಾವಿ, ಮಾ.11 : ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸ್ಪೈಸ್‌ ಜೆಟ್ ವಿಮಾನ ಅಪಘಾತಗೊಂಡು, ವಿಮಾನ ಸೇವೆ ಸ್ಥಗಿತಗೊಂಡಿದೆ. ಆದ್ದರಿಂದ ಸ್ಪೈಸ್‌ ಜೆಟ್ ವಿಮಾನಗಳು ಬೆಳಗಾವಿ ವಿಮಾನ ನಿಲ್ದಾಣದ ಮೂಲಕ ಮಾ.13ರ ತನಕ ಕಾರ್ಯನಿರ್ವಹಿಸಲಿವೆ.

ಭಾನುವಾರ ಸಂಜೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಿದ್ದ ಸ್ಪೈಸ್‌ಜೆಟ್ ವಿಮಾನ ಲ್ಯಾಂಡ್‌ ಆಗುವ ವೇಳೆ ಅಪಘಾತ ಸಂಭವಿಸಿತ್ತು. 77 ಪ್ರಯಾಣಿಕರು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದರು. ವಿಮಾನದಲ್ಲಿ ಸಚಿವ ರೋಷನ್ ಬೇಗ್ ಮತ್ತು ಧಾರವಾಡ ಹೈಕೋರ್ಟ್‌ ಪೀಠದ ನಾಲ್ವರು ನ್ಯಾಯಮೂರ್ತಿಗಳಿದ್ದರು. [ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ಅನಾಹುತ]

ವಿಮಾನ ನಿಲ್ದಾಣದಲ್ಲಿ ನಡೆದ ಅಪಘಾತದ ಬಗ್ಗೆ ಪರಿಶೀಲನೆ ನಡೆಸಲು ನಾಗರಿಕ ವಿಮಾನಯಾನ ಇಲಾಖೆಯ ಮಹಾನಿರ್ದೇಶಕರ ನೇತೃತ್ವದ ತಂಡ ಹುಬ್ಬಳ್ಳಿಗೆ ಆಗಮಿಸಿದೆ. ತಂಡ ತನ್ನ ವರದಿ ನೀಡುವ ತನಕ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

Belagavi

ಆದ್ದರಿಂದ, ಬೆಂಗಳೂರು-ಹುಬ್ಬಳ್ಳಿ, ಹುಬ್ಬಳ್ಳಿ-ಮುಂಬೈ ನಡುವೆ ಸಂಚರಿಸುವ ಸ್ಪೈಸ್ ಜೆಟ್ ವಿಮಾನಗಳು ಮಾ.13ರ ತನಕ ಬೆಳಗಾವಿ ವಿಮಾನ ನಿಲ್ದಾಣದಿಂದ ಕಾರ್ಯನಿರ್ವಹಿಸಲಿವೆ. ಹುಬ್ಬಳ್ಳಿಯಲ್ಲಿ ವಿಮಾನ ಸೇವೆ ಆರಂಭಿಸುವ ಕುರಿತು ಇನ್ನೂ ಅಂತಿಮ ನಿರ್ಧಾರವನ್ನು ಕೈಗೊಂಡಿಲ್ಲ. [ಹುಬ್ಬಳ್ಳಿ ನಿಲ್ದಾಣದಲ್ಲಿನ ಕಾಮಗಾರಿ ಏನು?]

ಹುಬ್ಬಳ್ಳಿಯಲ್ಲಿ ಏನಾಗಿತ್ತು : ಭಾನುವಾರ ಸಂಜೆ 6.30ರ ಸುಮಾರಿಗೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದ ವಿಮಾನ ಲ್ಯಾಂಡಿಂಗ್‌ ವೇಳೆ, ಟೈರ್‌ ಸ್ಫೋಟಗೊಂಡು ರನ್‌ವೇಯಿಂದ ಜಾರಿ ಪಕ್ಕದ ಸಿಗ್ನಲ್ ದೀಪಕ್ಕೆ ಡಿಕ್ಕಿ ಹೊಡೆದು, ರನ್‌ವೇ ಪಕ್ಕದ ಮಣ್ಣಿನಲ್ಲಿ ಸಿಕ್ಕಿಕೊಂಡಿತು.

ಅಂದಹಾಗೆ ಸುಮಾರು ಆರು ತಿಂಗಳ ನಂತರ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಸ್ಪೈಸ್ ಜೆಟ್ ವಿಮಾನಯಾನ ಸೇವೆ ಮಾರ್ಚ್‌ನಲ್ಲಿ ಆರಂಭವಾಗಿತ್ತು. ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ ಕಾರ್ಯದ ಹಿನ್ನಲೆಯಲ್ಲಿ ವಿಮಾನ ಸೇವೆ ಸ್ಥಗಿತಗೊಳಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+