Gold: 'ಕೆಜಿಎಫ್' ರಾಕಿ ಭಾಯ್‌ನಂತೆ ತಾಯಿ ಆಸೆ ಈಡೇರಿಸಲು ಹೋದ ಮಗ ಜೈಲುಪಾಲು!

ಬೆಂಗಳೂರು, ಡಿಸೆಂಬರ್ 03: ಮನರಂಜನೆ ಉದ್ದೇಶದಿಂದ ಮಾಡುವ ಸಿನಿಮಾಗಳು ಜನಸಾಮಾನ್ಯರ ಮೇಲೆ ಪ್ರಭಾವ ಬೀರುತ್ತವೆ. ಕೆಲವೊಮ್ಮೆ ಜೀವನದ ಘಟನೆಗಳು, ಸಿನಿಮಾಗೂ ಹೋಲಿಕೆ ಎಂಬಂತೆ ಕಾಣುತ್ತಿವೆ. ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ನಟ ಯಶ್ ಅವರು ಅಭಿನಯಿಸಿದ 'ಕೆಜೆಎಫ್' ಸಿನಿಮಾ ಬಗ್ಗೆ ಗೊತ್ತು. ಅದರಲ್ಲಿ ತಾಯಿ ಆಸೆ ಈಡೇರಿಸಲು ನಾಯಕ ನಟ ಏನೆಲ್ಲ ಮಾಡುತ್ತಾರೆ ಎಂಬುದು ತೆರೆಯಲ್ಲಿ ಕಾಣಬಹುದು. ಇಂತದ್ದೆ ಒಂದು ಘಟನೆ ಬೆಳಗಾವಿಯಲ್ಲಿ ನಡೆದಿದ್ದು, ತಾಯಿ ಆಸೆ ಈಡೇರಿಲು ಹೋದ ಮಗ ಜೈಲು ಸೇರಿದ್ದಾನೆ.

ಸದ್ಯ ಪೊಲೀಸರ ಅತಿಥಿಯಾಗಿರುವ ಈ ಖತರ್ನಾಕ್ ಪುತ್ರ ತಾಯಿ ಆಸೆ ಈಡೇರಿಲು ಹೋಗಿದ್ದ ಎನ್ನಲಾಗಿದೆ. ಹಾಗಾದರೆ ತಾಯಿಯ ಆಸೆ ಏನಾಗಿತ್ತು. ಅದಕ್ಕಾಗಿ ಈ ಆರೋಪಿ ಮಾಡಿದ್ದೇನು ಎಂದು ಕೇಳಿದರೆ ನಿಮಗೆ ಕೆಜಿಎಫ್ ಸಿನಿಮಾ ನೆನಪಿಗೆ ಬಾರದ ಇರದು.

Son Arrested for Theft Money from ATM and Giving Gold Jewels to Mother

ಬೆಳಗಾವಿಯ ಜ್ಯೋತಿ ನಗರ ಕೃಷ್ಣಾ ಸುರೇಶ ದೇಸಾಯಿ (23) ಜೈಲು ಪಾಲಾದ ಯುವಕ. ಈತ ಬೆಳಗಾವಿ ಜಿಲ್ಲೆಯ ಕೋರ್ಟ್ ಎದುರಿನ ಎಚ್‌ಡಿಎ‌ಫ್‌ಸಿ ಬ್ಯಾಂಕ್‌ನಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದೆ. ಎಟಿಎಂ ಕಸ್ಟೋಡಿಯನ್ ಆಗಿ ಕೆಲಸ ಮಾಡುತ್ತಿದ್ದ. ಘಟನೆಯ ದಿನ ಈತ ಅದೇ ಬ್ಯಾಂಕ್ ಎಟಿಎಂ ನಲ್ಲಿ ಕಳ್ಳತ‌ನ ಮಾಡಿದ್ದಾನೆಂದು ಪ್ರಕರಣ ದಾಖಲಾಗಿತ್ತು.

ಎಟಿಂಬನಿಂದ ಒಟ್ಟು 8.65 ಲಕ್ಷ ರೂ ಎಗರಿಸಿದ್ದ ಈ ಭೂಪ ತಾಯಿಗೆ ಅವರ ಆಸೆಯಂತೆ 20 ಗ್ರಾಂ‌ ಚಿನ್ನದ ಸರ ಮಾಡಿಸಿ ಕೊಟ್ಟಿದ್ದ. ಇಲ್ಲಿಯೇ ಕೆಲಸ ಮಾಡುತ್ತಿದ್ದ ಕಾರಣ ನಿತ್ಯ ಬ್ಯಾಂಕಿನಿಂದ ಹಣ ತಂದು ನಗರದ ಎಲ್ಲ ಎಚ್‌ಡಿಎಫ್‌ಸಿ ಎಟಿಎಂಗೆ ಹಣ ಹಾಕುತ್ತಿದ್ದ.

ಎರಡು ದಿನಗಳ ‌ಹಿಂದೆ ಎಚ್‌ಡಿಎಫ್‌ಸಿ ಎಟಿಎಂನಲ್ಲಿ ಹಣ ಹಾಕಿ ಹೋಗಿದ್ದ ಬಂಧಿತ ಕೃಷ್ಣ, ಕೆಲ ಹೊತ್ತಿನ ಬಳಿಕ‌ ತಾನೇ ಬಂದು ಲಾಕ್ ಓಪನ್ ಮಾಡಿ 8.65 ಲಕ್ಷ ಹಣ ಕದ್ದು ಪರಾರಿಯಾಗಿದ್ದಾನೆ. ಈ ಹಣದಲ್ಲಿ ‌1.54 ಲಕ್ಷ ಮೌಲ್ಯದ ಚಿನ್ನದ ಸರವನ್ನು ತಾಯಿಗೆ ಕೊಡಿಸಿದ್ದಾನೆ ಎಂದು ತನಿಖೆ ನಡೆಸಿದ ಮಾರ್ಕೆಟ್ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಸಿಸಿ ಟಿವಿ ದೃಶ್ಯದಲ್ಲಿ ಕೃತ್ಯ ಸೆರೆ

ಬಂಗಾರ ಕೊಡಿಸಿ ಉಳಿದ ಕಡ್ಡ ಹಣದಲ್ಲಿ ಫುಲ್ ಮೋಜು ಮಸ್ತಿ ಮಾಡಿದ್ದಾನೆ. ಆದರೆ ಈತ ಹಣ ಹಾಕುವುದು ಮತ್ತು ಹಣ ಕದ್ದು ಹೋಗುವ ದೃಶ್ಯಗಳೆಲ್ಲವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಸಿಸಿ ಟಿವಿ ದೃಶ್ಯ ಪರಿಶೀಲಿಸಿದ ಪೊಲೀಸರಿಗೆ ಈತನ ಮೇಲೆಯೇ ಅನುಮಾನ ಮೂಡಿದೆ.

ಕೂಲೇ ಕಾರ್ಯಪ್ರವೃತ್ತರಾಗಿ ಹಲವು ಗಂಟೆಗಳಲ್ಲಿ ಪ್ರಕರಣ ‌ಬೇಧಿಸಿದ್ದಾರೆ. ಆತನನ್ನು ಬಂಧಿಸಿದ್ದಲ್ಲದೇ, ತಾಯಿಗೆ ಕೊಡಿಸಿದ್ದ ಚಿನ್ನದ ಸರ, 5.74 ಲಕ್ಷ ಹಣ ಜಪ್ತಿ ಮಾಡಿದ್ದಾರೆ. ಸಿನಿಮಾ ಶೈಲಿಯಲ್ಲಿ ಹಣ ಕದ್ದು ಪರಾರಿಯಾದವನೇ ಸೀದಾ ಚಿನ್ನಭರಣ ಅಂಗಡಿಗೆ ಹೋಗಿ ತಾಯಿಗೆಂದು ಬಂಗಾರ ಖರೀದಿಸಿ ಕೊಟ್ಟಿದ್ದಾನೆ. ಪ್ರಕರಣ ಬೆಳಕಿಗೆ ಬಂದ ಮೇಲೆ ಪೊಲೀಸರು ಚಿನ್ನಾಭರವ ಖರೀದಿಸಿದ ರಶೀದಿ ಹಾಗೂ ತಾಯಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+