ಸತೀಶ್‌ ಜಾರಕಿಹೊಳಿ ರಾಜ್ಯದ ಉಪಮುಖ್ಯಮಂತ್ರಿ ಆಗ್ತಾರೆ: ಲಖನ್‌ ಜಾರಕಿಹೊಳಿ

ಬೆಳಗಾವಿ, ಜೂನ್‌ 08: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬೀಳಲ್ಲ. ಆದರೆ ಮುಂದೆ ಸತೀಶ್‌ ಜಾರಕಿಹೊಳಿ ರಾಜ್ಯದ ಉಪಮುಖ್ಯಮಂತ್ರಿಯಾಗುತ್ತಾರೆ ಎಂದು ವಿಧಾನಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಹೇಳಿದ್ದಾರೆ.

ಗೋಕಾಕ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಇಬ್ಬರನ್ನೂ ಬೆಂಬಲಿಸಿದ್ದೆ. ಬೆಳಗಾವಿಯಲ್ಲಿ ಜಗದೀಶ ಶೆಟ್ಟರ್ ಹಾಗೂ ಚಿಕ್ಕೋಡಿಯಲ್ಲಿ ಪ್ರಿಯಾಂಕಾಗೆ ಬೆಂಬಲ ಕೊಟ್ಟಿದ್ದೆ. ಇಬ್ಬರೂ ಗೆದ್ದಿರುವುದು ನಮಗೆ ಸಂತೋಷ ಆಗಿದೆ ಎಂದರು.

Satish Jarkiholi Will Be The Deputy Chief Minister Of The State Says Lakhan Jarkiholi

ಚಿಕ್ಕೋಡಿಯಲ್ಲಿ ಗೆಲುವು ಸಾಧಿಸುವ ಮೂಲಕ ಜಾರಕಿಹೊಳಿ ಸಹೋದರರು ಬಲಿಷ್ಠ ಎಂಬುದು ಮತ್ತೆ ಸಾಬೀತು ಆಯಿತಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಲಖನ್, ಜನರು ಮತ್ತು ದೇವರ ಆಶೀರ್ವಾದ ಇರೋವರೆಗೂ ಜಾರಕಿಹೊಳಿ ಕುಟುಂಬ ಬಲಿಷ್ಠವಾಗಿರುತ್ತದೆ‌. ನಾವು ಇಷ್ಟು ಮೇಲಕ್ಕೆ ಬರಲು ಇದೇ ಕಾರಣ. ಇನ್ನು ಜನರ ಜೊತೆ ನಾವು ನಿರಂತರವಾಗಿ ಸಂಪರ್ಕ ಇಟ್ಟುಕೊಂಡಿದ್ದೇವೆ ಎಂದರು.

ಚಿಕ್ಕೋಡಿಯಲ್ಲಿ ಪ್ರಿಯಾಂಕಾ ಸೋಲಿಸುವ ತಂತ್ರಗಾರಿಕೆ ಮಾಡಿದ್ದರು ಎನ್ನುವ ಆರೋಪಕ್ಕೆ ಉತ್ತರಿಸಿದ ಅವರು, ರಾಜಕೀಯದಲ್ಲಿ ತಂತ್ರಗಾರಿಕೆ ಇದ್ದೆ ಇರುತ್ತದೆ. ಆದರೆ, ನಮಗೆ ಜನರ ಆಶೀರ್ವಾದ ಇದೆ. ಅಥಣಿಯಲ್ಲಿ ಕಾಂಗ್ರೆಸ್ ಇದ್ದರೂ ಸಹ ಮತ ಕಡಮೆ ಆದ ಕಡಿಮೆ ಆದ ವಿಚಾರದ ಬಗ್ಗೆ ಸಚಿವರಾಗಿರುವ ಸತೀಶ ಅವರು ನೋಡಿಕೊಳ್ಳುತ್ತಾರೆ. ಅಲ್ಲಿ 25 ಸಾವಿರ ಲೀಡ್ ಬರಬೇಕಿತ್ತು. ಪ್ರತಿ ಚುನಾವಣೆ ಬಂದಾಗ ನಮ್ಮ ವಿರುದ್ಧ ಟೀಂ ಬಂದು ಪ್ರಚಾರ ಮಾಡುತ್ತದೆ ಅಷ್ಟೆ ಎಂದು ಹೇಳಿದರು.

ಇನ್ನು ಚಿಕ್ಕೋಡಿಯಲ್ಲಿ ಲೀಡ್ ಕಡಿಮೆ ಆಗಿದ್ದಕ್ಕೆ ಇನ್ನೂ 50 ಸಾವಿರ ಲೀಡ್ ಬರಬೇಕಿತ್ತು. ಆದರೆ ಅದು ಕಡಿಮೆ ಆಗಿದೆ. ಪ್ರಿಯಾಂಕಾ, ರಾಹುಲ್ ಇಬ್ಬರೂ ಕಾರ್ಯಕರ್ತರ ಜೊತೆಗೆ ಕೆಲಸ ಮಾಡಿದ್ದಾರೆ. ಯಮಕನಮರಡಿಯಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಹಾಗಾಗಿ, ಮುಂದಿನ ಚುನಾವಣೆಯಲ್ಲಿ ಪ್ರಿಯಾಂಕಾ 3 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಲಖನ್ ವಿಶ್ವಾಸ ವ್ಯಕ್ತಪಡಿಸಿದರು.

ಜಾರಕಿಹೊಳಿ ಸಹೋದರರು ಹೆಬ್ಬಾಳಕರ್ ಅವರನ್ನು ಸೋಲಿಸುವುದರ ಜೊತೆಗೆ ಸೇಡು ತೀರಿಸಿಕೊಂಡರು ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಲಖನ್, ಒಳ್ಳೆ ಕೆಲಸ ಮಾಡಿದವರಿಗೆ ಜನ ಮತ ಹಾಕುತ್ತಾರೆ. ಇದರಲ್ಲಿ ಸೇಡು ಎನ್ನುವ ಪ್ರಶ್ನೆಯೇ ಬರಲ್ಲ. ಹಿರಿಯರ ಬಗ್ಗೆ ಅಗೌರವ ತೋರಿ ಮಾತಾಡಿದ್ದರಿಂದ ಈ ರೀತಿ ಆಗಿದೆ. ಅವರ ಸ್ವಭಾವ ನೋಡಿ ಜನ ಅವರಿಗೆ ಮತ ನೀಡಿದ್ದಾರೆ ಎಂದರು.

ರಾಜ್ಯ ಸರ್ಕಾರದ ಬಗ್ಗೆ ಮಾತನಾಡಿದ ವರು, ಸರ್ಕಾರ ಬೀಳಲ್ಲ ಸಿದ್ದರಾಮಯ್ಯ ಗಟ್ಟಿಯಾಗಿದ್ದಾರೆ. ಮಳೆ ಬೀಳಬಹುದು. ಆದರೆ ಸರ್ಕಾರ ಬೀಳಲ್ಲ ಸತೀಶ್‌ ಜಾರಕಿಹೊಳಿ ಕರ್ನಾಟಕದ ಏಕನಾಥ ಶಿಂಧೆ ಆಗುತ್ತಾರೆ. ಮಹಾರಾಷ್ಟ್ರ ಮಾದರಿಯಲ್ಲಿ ಸರ್ಕಾರ ಬೀಳುತ್ತದೆ ಎನ್ನುವುದೆಲ್ಲಾ ಅಪಪ್ರಚಾರ ಅದೆಲ್ಲ ಆಗುವುದಿಲ್ಲ. ಹಿರಿಯರ ಪಟ್ಟಿಯಲ್ಲಿ ಸತೀಶಗೆ ಡಿಸಿಎಂ ಸಿಗಬಹುದು ಮುಂದೆ ಕೊಡಬಹುದು. ಸಿನಿಯಾರಿಟಿ ಆಧಾರದ ಮೇಲೆ ಡಿಸಿಎಂ ಆಗ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+