Satish Jarkiholi Nomination: ಕಳೆದ ಬಾರಿ ರಾಹುಕಾಲದಲ್ಲಿ, ಈ ಬಾರಿ ಗ್ರಹಣ ಅಮಾವಾಸ್ಯೆಯ ದಿನದಂದು ಸತೀಶ್ ಜಾರಕಿಹೊಳಿ ನಾಮಪತ್ರ

ಬೆಂಗಳೂರು, ಏಪ್ರಿಲ್‌ 20: ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ( Karnataka Elections 2023 ) ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಗುರುವಾರ 'ರಾಹುಕಾಲ' ಸಂದರ್ಭದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಜಾರಕಿಹೊಳಿ ಅವರು ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ ಯಮಕನಮರಡಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ಏಪ್ರಿಲ್ 20 ರ ಗುರುವಾರದಂದು ರಾಹುಕಾಲ ಮಧ್ಯಾಹ್ನ 1.30 ರಿಂದ 3 ಗಂಟೆಯವರೆಗೆ ಇರುತ್ತದೆ ಎಂದು ಜ್ಯೋತಿಷಿಗಳು ಹೇಳಿದ್ದಾರೆ. ಆದರೆ, ಪ್ರಗತಿಪರ ವಿಚಾರವಾದಿಯೂ ಆಗಿರುವ ಸತೀಶ್‌ ಜಾರಕಿಹೊಳಿ ಮಧ್ಯಾಹ್ನ 2 ಗಂಟೆಗೆ ನಾಮಪತ್ರ ಸಲ್ಲಿಸಿದರು.

Satish Jarkiholi Files Nomination from Yemkanmardi Constituency During Surya Grahana

ಈ ಕುರಿತು ಹೇಳಿಕೆ ನೀಡಿರುವ ಸತೀಶ್‌ ಜಾರಕಿಹೊಳಿ, 'ಇದು ನನ್ನ ನಾಲ್ಕನೇ ವಿಧಾನಸಭೆ ಚುನಾವಣೆ. ಈ ಹಿಂದೆಯೂ ಹೆಚ್ಚಿನ ಜನ ಸೇರಿಸಿದ ನಾಮಪತ್ರ ಸಲ್ಲಿಸಿದ್ದೆ. ಈ ಬಾರಿಯೂ ಐವರು ಜೊತೆ ಸೇರಿ ನಾಮಪತ್ರ ಸಲ್ಲಿಸುತ್ತೇನೆ. ಚುನಾವಣೆಗೆ 20 ದಿನಗಳು ಬಾಕಿಯಿದ್ದು, ನನ್ನ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರನ್ನು ಇಂದು ನನ್ನೊಂದಿಗೆ ಬರುವಂತೆ ಕೇಳಿಕೊಳ್ಳುತ್ತೇನೆ. ಕಳೆದ ಚುನಾವಣೆಗೆ ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿದ್ದೆ, ಈ ಬಾರಿಯೂ ಅದೇ ರೀತಿ ಮಾಡುತ್ತೇನೆ' ಎಂದು ಹೇಳಿದ್ದಾರೆ.

ಸತೀಶ್ ಅವುರ ಮೂರು ಬಾರಿ ಯಮಕನಮರಡಿ ಶಾಸಕರಾಗಿದ್ದಾರೆ. ಅವರ ಸಹೋದರ ರಮೇಶ್ ಜಾರಕಿಹೊಳಿ 2019 ರಲ್ಲಿ ಬಿಜೆಪಿಗೆ ಪಕ್ಷಾಂತರಗೊಂಡರು. ಇದು ಜನತಾದಳ- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣವಾಯಿತು.

ತಿಂಗಳ ಹಿಂದೆ ಸತೀಶ್ ಅವರು ಸ್ಮಶಾನದಿಂದ ಚುನಾವಣಾ ಪ್ರಚಾರ ಆರಂಭಿಸುವುದಾಗಿ ಹೇಳಿದ್ದರು. 'ಮಾನವ ಬಂಧುತ್ವ ವೇದಿಕೆ' ಎಂಬ ಮೂಢನಂಬಿಕೆ ವಿರೋಧಿ ಸಂಘಟನೆಯ ಸಂಸ್ಥಾಪಕರಾಗಿರುವ ಅವರು ಕುರುಡು ನಂಬಿಕೆಗಳು ಮತ್ತು ಆಚರಣೆಗಳ ಬಗ್ಗೆ ಮುಕ್ತವಾಗಿ ಮಾತನಾಡುತ್ತಾರೆ. ಈ ಹಿಂದೆ ಮೂಢನಂಬಿಕೆ ಹೋಗಲಾಡಿಸಲು ಸ್ಮಶಾನದಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಸಿದ್ದರು.

ಆಪರೇಷನ್ ಹಸ್ತ: ಸತೀಶ್‌ ಹೇಳಿದ್ದೇನು?

'ಆಪರೇಷನ್ ಕಮಲ'ದ ಪರಿಣಾಮಗಳನ್ನು ಬಿಜೆಪಿ ಎದುರಿಸುತ್ತಿದ್ದು, ಕಾಂಗ್ರೆಸ್‌ಗೆ ನಾಯಕರು ಪಕ್ಷಾಂತರ ಮಾಡುತ್ತಿದ್ದಾರೆ. ಇದೀಗ ಆಪರೇಷನ್ ಹಸ್ತ ಸ್ವಾಭಾವಿಕವಾಗಿ ನಡೆಯುತ್ತಿದೆ ಎಂದು ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.

ಡಿಕೆ ಸುರೇಶ್‌ ನಾಮಪತ್ರ ಸಲ್ಲಿಕೆ

ಕರ್ನಾಟಕ ವಿಧಾನಸಭಾ ಚುನಾವಣೆಗೆ ಕನಕಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಮುಖಂಡ ಹಾಗೂ ಬೆಂಗಳೂರು ಗ್ರಾಮಾಂತರ ಸಂಸದ ಡಿ ಕೆ ಸುರೇಶ್ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ.

ಶಿವಕುಮಾರ್ ಅವರ ನಾಮಪತ್ರ ತಿರಸ್ಕೃತವಾಗಬಹುದು ಎಂಬ ಆತಂಕದಿಂದ ಕಾಂಗ್ರೆಸ್ ಲೋಕಸಭಾ ಸಂಸದ ಕನಕಪುರದಿಂದ ನಾಮಪತ್ರ ಸಲ್ಲಿಸಿದ್ದಾರೆ.

2023 ಕರ್ನಾಟಕ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಗುರುವಾರ ಕೊನೆಯ ದಿನವಾಗಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕೊನೆಯ ದಿನವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+