ಬೆಳಗಾವಿಯಲ್ಲಿ ತಯಾರಾಗುತ್ತಿದೆ ವೈದ್ಯರ ರಕ್ಷಣಾ ಕವಚ

ಬೆಳಗಾವಿ, ಏಪ್ರಿಲ್ 15: ಇಡೀ ಜಗತ್ತು ಇಂದು ಕೊರೊನಾ ವೈರಸ್ ಗೆ ತತ್ತರಿಸಿ ಹೋಗುತ್ತಿದೆ. ಈ ವೈರಸ್ ವೈದ್ಯಕೀಯ ಲೋಕಕ್ಕೆ ಸವಾಲಾಗಿ ಪರಿಣಮಿಸಿದೆ. ಈಗಾಗಲೇ ಎಷ್ಟೋ ಜನ ವೈದ್ಯರು ಈ ವೈರಸ್ ನಿಂದ ಮೃತಪಟ್ಟಿದ್ದಾರೆ. ಅದಕ್ಕಾಗಿ ಎಲ್ಲ ಡಾಕ್ಟರ್ ಗಳಿಗೂ ಉಪಯೋಗವಾಗಲಿ ಎಂದು ಬೆಳಗಾವಿಯಲ್ಲಿ ಒಂದು ಮೆಡಿಕಲ್ ಕಿಟ್‍ ತಯಾರಿಸಲಾಗಿದೆ.

ಕೊರೊನಾ ವೈರಸ್ ಗೆ ಭಾರತದಲ್ಲಿ 300 ಕ್ಕೂ ಹೆಚ್ಚು ಜನ ಈಗಾಗಲೇ ಬಲಿಯಾಗಿದ್ದಾರೆ. ಅವರಿಗೆ ಚಿಕಿತ್ಸೆ ನೀಡುವ ವೈದ್ಯರಿಗೂ ಕೂಡಾ ಆ ಸೋಂಕು ತಗುಲಿ ವೈದ್ಯರು ತಮ್ಮ ಮನೆ ಮತ್ತು ಕುಟುಂಬವನ್ನು ಬಿಟ್ಟು ಬೇರೆ ಕಡೆ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಳಗಾವಿಯ ವಡಂಗಾವಿಯ ಟಿ.ಡಿ ಗ್ರೂಫ್ ಸಂಸ್ಥೆಯು ಐಸೋಲೀಶನ್ ನಲ್ಲಿ ಕಾರ್ಯನಿರ್ವಹಣೆ ಮಾಡುವ ವೈದ್ಯರಿಗೆ ಮತ್ತು ನರ್ಸ್ ಗಳಿಗೆ ಉಪಯೋಗವಾಗಲಿ ಎಂದು ಮತ್ತು ಅವರು ಕೊವಿಡ್-19 ವೈರಸ್ ನಿಂದ ರಕ್ಷಣೆ ಪಡೆದುಕೊಳ್ಳಬೇಕು ಎನ್ನುವ ಉದ್ದೇಶದಿಂದ ಪ್ರೈವೇಟ್ ಪ್ರೊಟೆಕ್ಷನ್ ಕಿಟ್‍ ಗಳನ್ನು ಸಿದ್ದಪಡಿಸಿದ್ದಾರೆ.

Prepared Private Protection Medical Kits In Belagavi

ಈ ಕಿಟ್ 350 ರೂ. ವೆಚ್ಚದಲ್ಲಿ ತಯಾರಿಸಲಾಗಿದೆ. ಈ ಕಿಟ್‍ ತಯಾರಿಸಲು ಪ್ರತಿನಿತ್ಯ 15 ಜನ ಕಾರ್ಮಿಕರು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.

ಪ್ರೈವೇಟ್ ಪ್ರೊಟೆಕ್ಷನ್ ಕಿಟ್‍ ಗಳ ಜೊತೆಗೆ ಕಣ್ಣಿನ ವೈರಸ್ ತಡೆಗಟ್ಟಲು ಐ-ಗ್ಲಾಸ್ ಕೋವಿಡ್-19 3 ಪ್ಲಾಯ ಮಾಸ್ಕ್ ಗಳನ್ನು ಸಿದ್ದಪಡಿಸಿದ್ದಾರೆ. ಟಿ.ಡಿ ಗ್ರೂಫ್ ಸಂಸ್ಥೆಯು ಪ್ರತಿನಿತ್ಯ 70 ರಿಂದ 100 ಕಿಟ್ ಗಳನ್ನು ತಯಾರಿಸುತ್ತಿದ್ದಾರೆ.

Prepared Private Protection Medical Kits In Belagavi

ಈ ಪ್ರೈವೇಟ್ ಪ್ರೊಟೆಕ್ಷನ್ ಕಿಟ್‍ ನ್ನು ಕೆಎಲ್ಇ ಸಂಸ್ಥೆಯು ಸರ್ಟಿಪಾಯಿಡ್ ಮಾಡಿದ್ದಾರೆ. ಇನ್ನೂ ಈ ಕಿಟ್ ನ್ನು ಗೋಕಾಕ ಆಸ್ಪತ್ರೆ, ಬೈಲಹೊಂಗಲ ಮತ್ತು ರಾಮದುರ್ಗ ಸೇರಿದಂತೆ ಕುಂದಾನಗರಿ ಎಲ್ಲ ಡಾಕ್ಟರ್ ಗಳು ಈ ಕಿಟ್‍ ನ್ನು ಉಪಯೋಗಿಸುತ್ತಿದ್ದಾರೆ.

Prepared Private Protection Medical Kits In Belagavi

ವೈದ್ಯರ ರಕ್ಷಣಾ ಕವಚದ ತಯಾರಕರಾದ ಭರತೇಶ ಅವರು ಮಾತನಾಡಿ, ""ಈ ಪ್ರೈವೇಟ್ ಪ್ರೊಟೆಕ್ಷನ್ ಕಿಟ್‍ ಗಳು ಆ್ಯಾಂಟಿ ವೈರಸ್ ಕ್ಲಾಥ್ ನಿಂದ ತಯಾರಿಸಲಾಗಿದೆ. ಈ ಕಿಟ್ ನ್ನು 6 ರಿಂದ 7 ಬಾರಿ ವಾಶ್ ಮಾಡಬಹುದಾಗಿದೆ. ಇದರಿಂದ ಎಲ್ಲ ವೈದ್ಯರಿಗೆ ಅನುಕೂಲವಾಗಲಿದೆ'' ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+