ಬೆಳಗಾವಿ : ಪಾರ್ಟಿ ನಡೆಯುತ್ತಿದ್ದ ಹೋಟೆಲ್ ಮೇಲೆ ಪೊಲೀಸರ ದಾಳಿ
ಬೆಳಗಾವಿ, ಫೆಬ್ರವರಿ 18 : ಬೆಳಗಾವಿಯ ಟಾಪ್ ಇನ್ ಟೌನ್ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಹೋಟೆಲ್ ಮಾಲೀಕರ ವಿರುದ್ಧ ಎರಡು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ಪ್ರಭಾವಿ ಕಾಂಗ್ರೆಸ್ ನಾಯಕನ ಬೆಂಬಲಿಗನಾದ ವಿಜಯ ಶೆಟ್ಟಿ ಮಾಲೀಕತ್ವದ ಹೋಟೆಲ್ ಮೇಲೆ ದಾಳಿ ಮಾಡಲಾಗಿದೆ. ವಾರಾಂತ್ಯದಲ್ಲಿ ಅನಧಿಕೃತವಾಗಿ ಪಬ್ ನಡೆಸುತ್ತಿದ್ದ ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿದ್ದಾರೆ.
ಬೆಳಗಾವಿ ನಗರದ ಖಡೇಬಜಾರದ ಕಿರ್ಲೋಸ್ಕರ್ ರಸ್ತೆಯಲ್ಲಿರುವ ಟಾಪ್ ಇನ್ ಟೌನ್ ಬಾರ್ ಅಂಡ್ ರೆಸ್ಟೋರೆಂಟ್ ಮೇಲೆ ದಾಳಿ ಮಾಡಲಾಗಿದೆ. ಡಿಸಿಪಿ ಸೀಮಾ ಲಾಟಕರ ನೇತೃತ್ವದ ಅಧಿಕಾರಿಗಳು ದಾಳಿ ಮಾಡಿದ್ದು, ಈ ವೇಳೆ ಪಾರ್ಟಿ ಮಾಡುತ್ತಿದ್ದ 20 ಜೋಡಿಗಳು ಸಿಕ್ಕಿಬಿದ್ದಿದ್ದಾರೆ.

ಪಾರ್ಟಿ ಮಾಡುತ್ತಿದ್ದವರನ್ನು ವಿಚಾರಣೆ ನಡೆಸಿ, ಕಳುಹಿಸಿದ್ದಾರೆ. ಹೋಟೆಲ್ ಮಾಲೀಕರ ವಿರುದ್ಧ ಎರಡು ಪ್ರತ್ಯೇಕ ಪ್ರಕರಣದ ದಾಖಲು ಮಾಡಲಾಗಿದೆ. ಬೆಳಗಾವಿ ಖಡೇಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಮಯ ಮೀರಿ ಮಧ್ಯರಾತ್ರಿ ವರೆಗೂ ಬಾರ್ ಆಂಡ್ ರೆಸ್ಟೋರೆಂಟ್ ನಡೆಸುತ್ತಿರುವುದು ಮತ್ತು ಲಾಡ್ಜ್ ನಲ್ಲಿ ವೇಶ್ಯಾವಾಟಿ ನಡೆಸುತ್ತಿರುವದಾಗಿ ಕೇಸ್ ದಾಖಲು ಮಾಡಲಾಗಿದೆ.












Click it and Unblock the Notifications