ಬೆಳಗಾವಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 10 ಕ್ಕೆ ಏರಿಕೆ
ಬೆಳಗಾವಿ, ಏಪ್ರಿಲ್ 09: ಬೆಳಗಾವಿ ಜಿಲ್ಲೆಯಲ್ಲಿ ಇಂದು ಮತ್ತೆ ಮೂರು ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.
ಈ ಮೂರೂ ಹೊಸ ಪ್ರಕರಣ ಸೇರಿದಂತೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಒಟ್ಟಾರೆ 10 ಕ್ಕೆ ಏರಿದಂತಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಇಂದಿನ (ಏ.9) ಪತ್ರಿಕಾ ಪ್ರಕಟಣೆಯ ಪ್ರಕಾರ 50 ವರ್ಷದ ವ್ಯಕ್ತಿ (ಪಿ-182), 40 ವರ್ಷದ ಮಹಿಳೆ(ಪಿ-192) ಹಾಗೂ 22 ವರ್ಷದ ಯುವಕ(ಪಿ-193) ನಲ್ಲಿ ಸೋಂಕು ಪತ್ತೆಯಾಗಿದೆ.

ಈ ಮೂವರೂ ಈಗಾಗಲೇ ಸೋಂಕಿತರಾಗಿರುವ 20 ವರ್ಷದ ಪಿ-128 ಇವರ ಕುಟುಂಬದ ಸದಸ್ಯರಾಗಿದ್ದಾರೆ. ಸೋಂಕಿತ ಯುವಕ ಪಿ-128 ಇವರ ತಂದೆ, ತಾಯಿ ಮತ್ತು ಸಹೋದರನಿಗೆ ಕೂಡ ಸೋಂಕು ದೃಢಪಟ್ಟಿರುವುದು ಆರೋಗ್ಯ ಇಲಾಖೆಯ ಇಂದಿನ ಪ್ರಕಟಣೆಯಿಂದ ತಿಳಿದುಬಂದಿದೆ.












Click it and Unblock the Notifications