ಸ್ಪೈಸ್ ಜೆಟ್‌ನಿಂದ ಬೆಳಗಾವಿ-ಮಂಗಳೂರು ವಿಮಾನ ಸೇವೆ
ಬೆಳಗಾವಿ, ನವೆಂಬರ್ 19 : ಸ್ಪೈಸ್ ಜೆಟ್ ಮಂಗಳೂರು-ಬೆಂಗಳೂರು-ಬೆಳಗಾವಿ ನಡುವೆ ವಿಮಾನ ಸೇವೆಯನ್ನು ಆರಂಭಿಸಿದೆ. ನವೆಂಬರ್ 18ರಿಂದ ಈ ಸೇವೆ ಆರಂಭವಾಗಿದ್ದು, ಪ್ರತಿದಿನ ವಿಮಾನ ಸಂಚಾರ ನಡೆಸಲಿದೆ.
ಸ್ಪೈಸ್ ಜೆಟ್‌ನ ಎಸ್‌ಜಿ 1027, ಎಸ್‌ಜಿ 1028 ವಿಮಾನ ಪ್ರತಿದಿನ ಮಂಗಳೂರು-ಬೆಳಗಾವಿ-ಬೆಂಗಳೂರು ನಡುವೆ ಸಂಚಾರ ನಡೆಸಲಿದೆ ಎಂದು ಬೆಳಗಾವಿ ವಿಮಾನ ನಿಲ್ದಾಣ ನಿರ್ದೇಶಕ ಜೆ.ಟಿ. ರಾಧಾಕೃಷ್ಣ ಅವರು ತಿಳಿಸಿದ್ದಾರೆ. [ಹುಬ್ಬಳ್ಳಿ-ಬೆಳಗಾವಿ ವಿಮಾನ ನಿಲ್ದಾಣ ಅಭಿವೃದ್ಧಿ]

ವೇಳಾಪಟ್ಟಿ : ಎಸ್‌ಜಿ 1027 ವಿಮಾನ ಮಂಗಳೂರಿನಿಂದ ಪ್ರತಿದಿನ ಬೆಳಗ್ಗೆ 9.20ಕ್ಕೆ ಹೊರಡಲಿದ್ದು, ಬೆಂಗಳೂರು ಮೂಲಕ ಬೆಳಗಾವಿಗೆ ತಲುಪಲಿದೆ. ಎಸ್‌ಜಿ 1028 ವಿಮಾನ ಬೆಳಗಾವಿಯಿಂದ ಬೆಂಗಳೂರು ಮೂಲಕ ಮಂಗಳೂರಿಗೆ ಸಂಜೆ 5.50ಕ್ಕೆ ಬಂದು ತಲುಪಲಿದೆ. [ಸ್ಪೈಸ್ ಜೆಟ್ ವೆಬ್ ಸೈಟ್]
ಹುಬ್ಬಳ್ಳಿಗೆ ಬೆಳಗ್ಗೆ ವಿಮಾನ : ಏರ್ ಪೆಗಾಸಸ್ ಬೆಂಗಳೂರು-ಹುಬ್ಬಳ್ಳಿ ನಡುವೆ ಬೆಳಗ್ಗೆ ವಿಮಾನ ಹಾರಾಟ ಆರಂಭಿಸಿದೆ. ಬೆಳಗ್ಗೆ 7.30ಕ್ಕೆ ಬೆಂಗಳೂರಿನಿಂದ ಹೊರಡುವ ವಿಮಾನ 8.15ಕ್ಕೆ ಹುಬ್ಬಳ್ಳಿ ತಲುಪಲಿದೆ. 8.40ಕ್ಕೆ ಹುಬ್ಬಳ್ಳಿಯಿಂದ ಹೊರಡಲಿರುವ ವಿಮಾನ 9.30ಕ್ಕೆ ಬೆಂಗಳೂರಿಗೆ ವಾಪಸ್ ಆಗಲಿದೆ. ['ಹುಸಿ' ಬೆದರಿಕೆ ಕರೆ ಮಾಡಿದ್ದವ ಹೇಳಿದ ಕೊಲೆ 'ಸತ್ಯ' ಕಥೆ]
ಬೆಳಗಾವಿ ಏರ್ ಪೋರ್ಟ್ ಅಭಿವೃದ್ಧಿ : ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ದೇಶದ ಐದು ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ 141.44 ಕೋಟಿ, ಬೆಳಗಾವಿಯಲ್ಲಿ 141.87 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ.












Click it and Unblock the Notifications