ಬೆಳಗಾವಿಯಲ್ಲಿ ಹಸುಳೆಯನ್ನು ದೇವಸ್ಥಾನದಲ್ಲಿ ಎಸೆದ ಪಾಪಿಗಳು

ಬೆಳಗಾವಿ, ಏಪ್ರಿಲ್ 10: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡದಲ್ಲಿ ಇಂದು ಬೆಳಗಿನ ಜಾವ ಅಮಾನವೀಯ ಕೃತ್ಯ ನಡೆದಿರುವದು ಕಂಡು ಬಂದಿದೆ.

ಮುಗಳಖೋಡದ ಕೆನಾಲ್ ಆಫೀಸ್ ಹತ್ತಿರ ಇರುವ ಬಸವಣ್ಣನ ದೇವಸ್ಥಾನದಲ್ಲಿ ಬೆಳಿಗ್ಗೆ 4 ಗಂಟೆ ಸುಮಾರಿಗೆ ಆಗತಾನೆ ಜನಿಸಿದ ಹಸಿಕಂದಮ್ಮನನ್ನು (ಗಂಡುಮಗು) ಬಿಸಾಡಿ ಹಾಕಿರುವ ಅಮಾನವೀಯ ಘಟನೆ ನಡೆದಿದೆ.

Parents Who Are Throwed baby In Belagavi

ಆ ದೇವಸ್ಥಾನದ ಹತ್ತಿರ ಜನರು ಕೂಡುತ್ತಿದಂತೆ ಘಟನಾ ಸ್ಥಳಕ್ಕೆ ಆಶಾ ಕಾಯ೯ಕತ೯ರು, ಆರೋಗ್ಯ ಕೇಂದ್ರದ ನಸ್೯, ಆರಕ್ಷಕ ಠಾಣೆ ಸಿಬ್ಬಂದಿ ಎಎಸ್ಐ ದುಂಡಿನಮನಿ ಭೇಟಿ ನೀಡಿ ಆ ಕಂದಮ್ಮನ ರಕ್ಷಣೆಯಲ್ಲಿ ತೊಡಗಿದ್ದಾರೆ.

Parents Who Are Throwed baby In Belagavi

ಈ ಘಟನೆಯನ್ನು ಪರಿಶೀಲಿಸಿ ಮಗುವನ್ನು ಸಂಬಂಧಿಸಿದವರಿಗೆ ಹಸ್ತಾಂತರ ಮಾಡುವ ಕೆಲಸ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸ್ಥಳೀಯ ಜನರನ್ನು ಆ ಘಟನೆ ಬಗ್ಗೆ ಮಾಹಿತಿ ಕೇಳಿದಾಗ ಬೆಳಿಗ್ಗೆ 4-5 ಗಂಟೆ ಸುಮಾರಿಗೆ ಈ ಗಂಡು ಮಗವನ್ನು ಹಾಕಿ ಹೋಗಿದ್ದಾರೆ ಎಂದು ತಿಳಿಸಿದ್ದಾರೆ. ಸದ್ಯ ಈ ಕಂದಮ್ಮನ ರಕ್ಷಣೆ ಆಶಾ ಕಾಯ೯ಕತ೯ರು ಹಾಗೂ ಸ್ಟಾಪ್ ನಸ್೯ ಅವರ ಹೆಗಲ ಮೇಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+