ಬೆಳಗಾವಿ, ಹುಬ್ಬಳ್ಳಿ ಜನರಿಗೆ ಸಿಹಿ ಸುದ್ದಿ ಕೊಟ್ಟ ಎನ್‌ಇಕೆಆರ್‌ಟಿಸಿ
ಬೆಳಗಾವಿ, ಡಿಸೆಂಬರ್ 09 : ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ ಮತ್ತು ಬೆಳಗಾವಿ ಜನರಿಗೆ ಸಿಹಿಸುದ್ದಿಯನ್ನು ನೀಡಿದೆ. ಉಭಯ ನಗರಗಳ ನಡುವಿನ ವೋಲ್ವೊ ಬಸ್ ಸಂಚಾರ ಪುನಃ ಆರಂಭವಾಗಿದೆ.
ಕೋವಿಡ್ ಹರಡದಂತೆ ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ಹುಬ್ಬಳ್ಳಿ - ಬೆಳಗಾವಿ ನಡುವಿನ ತಡೆ ರಹಿತ ವೋಲ್ವೊ ಬಸ್ಸುಗಳ ಸಂಚಾರ ಸ್ಥಗಿತವಾಗಿತ್ತು. ಜನರು ಬಸ್ ಸಂಚಾರ ಆರಂಭಿಸಬೇಕು ಎಂದು ಬೇಡಿಕೆ ಇಟ್ಟಿದ್ದರು.
ಜನರ ಒತ್ತಾಯದಿಂದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬೆಳಗಾವಿ-ಹುಬ್ಬಳ್ಳಿ ಮತ್ತು ಹುಬ್ಬಳ್ಳಿ-ಬೆಳಗಾವಿ ತಡೆ ರಹಿತ ವೋಲ್ವೊ ಬಸ್ ಸೇವೆಗೆ ಮತ್ತೆ ಚಾಲನೆ ನೀಡಿದೆ.

ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಹೊಸ ಬಸ್ ನಿಲ್ದಾಣದಿಂದ ತಡೆ ರಹಿತ ವೋಲ್ವೊ ಬಸ್ ಸಂಚಾರವನ್ನು ಆರಂಭಿಸಲಿದೆ ಎಂದು ಪ್ರಕಟಣೆಯ ತಿಳಿಸಿದೆ.
ಪ್ರತಿ ದಿನ ಬೆಳಗ್ಗೆ 8.30, 9, ಮಧ್ಯಾಹ್ನ 11.15, 12.45, 3, 3.30 ಮತ್ತು ಸಂಜೆ 5.30 ಮತ್ತು 6ಕ್ಕೆ ಹುಬ್ಬಳ್ಳಿ ಹಾಗೂ ಬೆಳಗಾವಿಯಿಂದ ಏಕ ಕಾಲಕ್ಕೆ ಹೊರಡಲಿವೆ.
ಈ ಬಸ್‌ಗಳಿಗೆ ರಿಯಾಯಿತಿ ಪ್ರಯಾಣ ದರ ರೂ.150 ನಿಗದಿ ಮಾಡಲಾಗಿದೆ. ಸಾರ್ವಜನಿಕರು ಈ ಸೌಲಭ್ಯದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಲಾಗಿದೆ.












Click it and Unblock the Notifications