ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಾರಾಷ್ಟ್ರದಲ್ಲಿ ಮಳೆ: ಕೃಷ್ಣಾ ನದಿಗೆ 65,000 ಕ್ಯೂಸೆಕ್ ನೀರು ಬಿಡುಗಡೆ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಅಕ್ಟೋಬರ್ 15: ಮಹಾರಾಷ್ಟ್ರದಲ್ಲಿ ಮತ್ತೆ ಮಳೆಯಾಗುತ್ತಿದ್ದು, ಕೃಷ್ಣಾ ನದಿಯ ಒಳಹರಿವಿನಲ್ಲಿ ಏರಿಕೆಯಾಗಿದೆ. ಹೀಗಾಗಿ ಮತ್ತೆ ಪ್ರವಾಹದ ಆತಂಕ ಕಾಣಿಸಿಕೊಂಡಿದೆ. ಮಹಾರಾಷ್ಟ್ರ ಹಾಗೂ ಚಿಕ್ಕೋಡಿ ಉಪ ವಿಭಾಗದಲ್ಲಿ ಮೂರು ದಿನಗಳಿಂದ ಮಳೆಯಾಗುತ್ತಿದೆ. ಇದರಿಂದ ಕೃಷ್ಣಾ, ವೇದಗಂಗಾ ಮತ್ತು ದೂಧ್​ಗಂಗಾ ನದಿಗಳ ಒಳಹರಿವಿನಲ್ಲೂ ಏರಿಕೆಯಾಗಿದೆ. ಕೃಷ್ಣಾ ನದಿಗೆ 65,000ಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದುಬರುತ್ತಿದೆ.

ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್ ‌ನಿಂದ 53,500 ಕ್ಯೂಸೆಕ್, ದೂಧ್​​ಗಂಗಾದಿಂದ 11,616 ಕ್ಯೂಸೆಕ್ ನೀರು ಹರಿಸಿದ್ದು, ಒಟ್ಟು 65,000 ಕ್ಯೂಸೆಕ್​​ಗೂ ಅಧಿಕ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದೆ.

ಮಹಾಮಳೆಗೆ ಉತ್ತರ ಕರ್ನಾಟಕ ತತ್ತರ: ಜನಜೀವನ ಅಸ್ತವ್ಯಸ್ತಮಹಾಮಳೆಗೆ ಉತ್ತರ ಕರ್ನಾಟಕ ತತ್ತರ: ಜನಜೀವನ ಅಸ್ತವ್ಯಸ್ತ

ಚಿಕ್ಕೋಡಿ - 86.4 ಮಿ.ಮೀ., ಅಂಕಲಿ - 68.8 ಮಿ.ಮೀ., ನಾಗರಮುನ್ನೊಳಿ - 48.6 ಮಿ.ಮೀ., ಸದಲಗಾ - 95 ಮಿ.ಮೀ., ಜೋಡಟ್ಟಿ - 50.5 ಮಿ.ಮೀ. ಮಳೆಯಾಗಿದೆ. ಸದ್ಯ ಕೊಯ್ನಾ ಜಲಾಶಯ ಶೇ. 99.39, ವಾರಣಾ ಜಲಾಶಯ ಶೇ. 100, ರಾಧಾನಗರಿ ಜಲಾಶಯ ಶೇ. 98.89, ಕಣೇರ ಜಲಾಶಯ ಶೇ.100, ಧೂಮ ಜಲಾಶಯ ಶೇ. 99.85, ಪಾಟಗಾಂವ ಶೇ. 100, ಧೂದ್​ಗಂಗಾ ಶೇ. 100ರಷ್ಟು ತುಂಬಿದೆ. ಹಿಪ್ಪರಗಿ ಬ್ಯಾರೇಜ್ ‌ನಿಂದ 68,000 ಹಾಗೂ ಆಲಮಟ್ಟಿ ಜಲಾಶಯದಿಂದ 1,17,000 ಕ್ಯೂಸೆಕ್ ನೀರು ಹೊರಗಡೆ ಬಿಡಲಾಗುತ್ತಿದೆ.

Belagavi: More Than 65000 Cusecs Of Water Released To Krishna River

ಚಿಕ್ಕೋಡಿ ಉಪ ವಿಭಾಗದ ಶಿನಾಳ-ಕಾತ್ರಾಳ, ಕೌಲಗುಡ್ಡ-ಮೋಳೆ, ಕೆಂಪವಾಡ - ಮಿರಜ, ಶಿರೂರ -ಖೇಳೆಗಾಂವ, ಕಾತ್ರಾಳ - ತಂಗಡಿ, ಸಂಬರಗಿ-ಆಜೂರ ಬಿಜ್ಜರಗಿ - ತೇಲಸಂಗ, ಕೆಂಪವಾಡ - ಖಟಾವ ರಸ್ತೆಗೆ ನುಗ್ಗಿದ ನೀರಿನಿಂದ ಜನರಿಗೆ ತೊಂದರೆ ಉಂಟಾಗಿದೆ. ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.

English summary
Its raining again in maharashtra and water level increased in krishna river. More than 65,000 cusecs of water released to krishna river,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X