ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರತ್ಯೇಕ ರಾಜ್ಯ ರಚನೆ ಹೋರಾಟಕ್ಕೆ 24 ಸಂಘಟನೆಗಳ ಬೆಂಬಲ: ಭೀಮಪ್ಪ ಗಡಾದ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಜುಲೈ 30: ಸವರ್ಣಸೌಧದ ಮುಂದೆ ನಾಳೆ ನಡೆಯುವ ಹೋರಾಟಕ್ಕೆ 24 ಸಂಘಟನೆಗಳು ಬೆಂಬಲ ನೀಡಿವೆ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಭೀಮಪ್ಪ ಗಡಾದ ಹೇಳಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ವಾಮೀಜಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಸ್ವಾಮೀಜಿಗಳು ಅನುಮತಿ ನೀಡಿದರೆ ಸುವರ್ಣಸೌಧದ ಮುಂದೆಯೇ ಉತ್ತರ ಕರ್ನಾಟಕ ಹೋರಾಟ ಸಮಿತಿಂದ ಉತ್ತರ ಕರ್ನಾಟಕದ ಧ್ವಜ ಹಾರಿಸುವುದಾಗಿ ಅವರು ಹೇಳಿದರು.

ಬೆಳಗಾವಿ: ಸುವರ್ಣ ಸೌಧದ ಎದುರೇ ಪ್ರತ್ಯೇಕ ರಾಜ್ಯದ ಧ್ವಜಾರೋಹಣಬೆಳಗಾವಿ: ಸುವರ್ಣ ಸೌಧದ ಎದುರೇ ಪ್ರತ್ಯೇಕ ರಾಜ್ಯದ ಧ್ವಜಾರೋಹಣ

ಪ್ರತ್ಯೇಕ ಧ್ವಜದಲ್ಲಿ ಕೇಸರಿ ಹಳದಿ ಹಸಿರು ಮಧ್ಯದಲ್ಲಿ ಉತ್ತರ ಕರ್ನಾಟಕದ ಲಾಂಛನವಿರುತ್ತೆ ಎಂದು ಮಾಹಿತಿ ನೀಡಿದ ಅವರು, ಸುವರ್ಣ ಸೌಧಕ್ಕೆ ಕಾಯಕಲ್ಪ ಕೊಡಬೇಕು, ಉತ್ತರ ಕರ್ನಾಟಕ ಅಭಿವೃದ್ಧಿ ಮಾಡಬೇಕೆಂದು ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆ ಇದು ಎಂದರು.

more than 100 swamijis will participate in protest about separate state

ನಿಡಸೋಶಿ ಮಠದ ಪಂಚಮಲಿಂಗೇಶ್ವರ ಸ್ವಾಮೀಜಿ, ನಾಗನೂರು ರುದ್ರಾಕ್ಷಿ ಮಠದ ಸಿದ್ಧರಾಮ ಸ್ವಾಮೀಜಿ, ಹುಕ್ಕೇರಿ ಮಠದ ಚಂದ್ರಶೇಖರ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಗುತ್ತಿದ್ದು ಸುಮಾರು ನೂರಕ್ಕೂ ಅಧಿಕ ಸ್ವಾಮೀಜಿಗಳು ಪ್ರತಿಭಟನೆಯಲ್ಲಿ ಭಾಗಿ ಆಗಲಿದ್ದಾರೆ ಎಂದು ಅವರು ಹೇಳಿದರು.

ಪ್ರತ್ಯೇಕ ರಾಜ್ಯದ ಕೂಗಿಗೆ ಜಾತಿ, ರಾಜಕೀಯ ಕಾರಣ: ಪದ್ಮರಾಜ ದಂಡಾವತಿಪ್ರತ್ಯೇಕ ರಾಜ್ಯದ ಕೂಗಿಗೆ ಜಾತಿ, ರಾಜಕೀಯ ಕಾರಣ: ಪದ್ಮರಾಜ ದಂಡಾವತಿ

ಯಡಿಯೂರಪ್ಪ ಅವರು ಪ್ರತ್ಯೇಕ ರಾಜ್ಯ ಬೇಡವೆಂದು ಮನವೊಲಿಸಲು ಬೆಳಗಾವಿಗೆ ಆಗಮಿಸುತ್ತಿರುವ ಬಗ್ಗೆ ಮಾತನಾಡಿದ ಅವರು, 'ಯಡಿಯೂರಪ್ಪ ಅವರು ಬಂದರೆ ನಮ್ಮ ಸ್ವಾಗತವಿದೆ' ಎಂದು ಹೇಳಿದರು.

ಒಂದು ಸಂಘರ್ಷದ ಕಾಲ ನಮ್ಮೆಲ್ಲರನ್ನೂ ಒಗ್ಗೂಡಿಸಬೇಕು!ಒಂದು ಸಂಘರ್ಷದ ಕಾಲ ನಮ್ಮೆಲ್ಲರನ್ನೂ ಒಗ್ಗೂಡಿಸಬೇಕು!

ಪ್ರತ್ಯೇಕ ರಾಜ್ಯ ಹೋರಾಟಕ್ಕೆ ಬಲ ಬರಲು ಮಾಧ್ಯಮಗಳೇ ಕಾರಣ ಎಂಬ ಕುಮಾರಸ್ವಾಮಿ ಅವರ ಮಾತನ್ನು ತಳ್ಳಿ ಹಾಕಿದ ಭೀಮಪ್ಪ ಗಡಾದ ಅವರು, 'ನಾವು ಹೇಳಿದ್ದನ್ನೇ ಮಾಧ್ಯಮದವರು ಬಿತ್ತರಿಸುತ್ತಾರೆ, ಮಾದ್ಯಮಗಳ ಬಗ್ಗೆ ಹೇಳಿಕೆಕೊಡುವ ಮೊದಲು ಯೋಚಿಸಿ ಹೇಳಿಕೆ ಕೊಡಬೇಕು ಸಿಎಂ ಇರಲಿ ಅಥವಾ ಪಿಎಂ ಇರಲಿ ಮಾದ್ಯಮಗಳ ಬಗ್ಗೆ ಹಗುರವಾಗಿ ಹೇಳಿಕೆ ಕೊಡಬಾರದು' ಎಂದರು.

English summary
North Karnataka separate state activist comity president Bheemappa Gadada said, 'More than 100 swamiji's are participating in protest against state government', 'if swamijis permit we will hoist separate state flag in front of Suvarna Soudha'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X