ಶಾಸಕ ಅರವಿಂದ ಬೆಲ್ಲದ ಪ್ರಯಾಣಿಸುತ್ತಿದ್ದ ಕಾರ್ ಪಲ್ಟಿ
ಬೆಳಗಾವಿ, ಪೆಬ್ರವರಿ 25: ಧಾರವಾಡ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಪ್ರಯಾಣಿಸುತ್ತಿದ್ದ ಕಾರ್ ಪಲ್ಟಿಯಾಗಿರುವ ಘಟನೆ ಖಾನಾಪುರ ಬಳಿಯ ಜಾಂಬೋಟಿ ಬಳಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಕೂದಲೆಳೆ ಅಂತರದಲ್ಲಿ ಶಾಸಕ ಅರವಿಂದ ಬೆಲ್ಲದ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದ್ದು, ಅವರು ಗೋವಾದಿಂದ ಧಾರವಾಡಕ್ಕೆ ವಾಪಾಸ್ ಆಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿತ್ತು, ಏರ್‌ಬ್ಯಾಗ್ ಇದ್ದದ್ದರಿಂದ ದುರ್ಘಟನೆ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಕುಟುಂಬ ಸಮೇತ ಗೋವಾಕ್ಕೆ ಹೋಗಿ, ವಾಪಸ್ ಧಾರವಾಡಕ್ಕೆ ಆಗಮಿಸುತ್ತಿದ್ದರು. ಖಾನಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬಿಜೆಪಿ ಯುವ ಶಾಸಕ ಹಾಗೂ ಉದ್ಯಮಿಯಾಗಿ ಗುರುತಿಸಿಕೊಂಡಿರುವ ಅರವಿಂದ ಬೆಲ್ಲದ ಪ್ರಸ್ತುತ ಹುಬ್ಬಳ್ಳಿ ಧಾರವಾಡ ಮಹಾನಗರ ಬಿಜೆಪಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.












Click it and Unblock the Notifications