ಮಹಾರಾಷ್ಟ್ರದಲ್ಲಿ ಭೂಕಂಪ, ಬೆಳಗಾವಿಯಲ್ಲೂ ಭೂಮಿ ಕಂಪಿಸಿದ ಅನುಭವ
ಬೆಳಗಾವಿ, ಜೂನ್ 04 : ಮಹಾರಾಷ್ಟ್ರದ ಕೋಯ್ನಾ ಸೇರಿದಂತೆ ಬೆಳಗಾವಿಯಲ್ಲೂ ಶನಿವಾರ ತಡರಾತ್ರಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.
ಮಹಾರಾಷ್ಟ್ರದ ಕೋಯ್ನಾನದ ಸತಾರ ಜಿಲ್ಲೆಯಲ್ಲಿ ಶೇ 4.8 ರಿಕ್ಟರ್ ಮಾಪಕದಲ್ಲಿ ಭೂಮಿ ಕಂಪಿಸಿದೆ. ಇದರ ಪರಿಣಾಮ ದಕ್ಷಿಣ ಮಹಾರಾಷ್ಟ್ರದ ಸಾಂಗ್ಲಿ, ಕೊಲ್ಲಾಪುರದಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ.
ಭೂಮಿ ಕಂಪಿಸಿದ ಸ್ಥಳದಿಂದ 120 ಕಿ.ಮೀ ವರೆಗೆ ಭೂ ಕಂಪಿಸಿದ ಅನುಭವವಾಗಿದೆ ಎಂದು ಕೋಯ್ನಾ ಆಣೆಕಟ್ಟಿನ ಭೂಕಂಪನ ಮಾಪಕ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇದರ ಪರಿಣಾಮ ಮಹಾರಾಷ್ಟ್ರದ ಗಡಿಭಾಗದಲ್ಲಿರವ ಬೆಳಗಾವಿಯ ಹಲವು ಕಡೆಗಳಲ್ಲಿ ಭೂಮಿ ಕಂಪಿಸಿದ್ದು, ಇದು ವರೆಗೆ ಯಾವುದೇ ಸಾವು ನೋವು ಕಂಡುಬಂದ ಬಗ್ಗೆ ವರದಿಯಾಗಿಲ್ಲ.
ಮನೆಯ ಗೋಡೆಗಳು ಬಿರುಕುಬಿಟ್ಟಿವೆ. ಇದರಿಂದಾಗಿ ಜನರು ಮನೆಯೊಳಗೆ ಹೋಗುವುದಕ್ಕೇ ಹೆದರುತ್ತಿದ್ದಾರೆ.












Click it and Unblock the Notifications