ಬೆಳಗಾವಿ: ವಿಷ ಸೇವಿಸಿ ಪ್ರಿಯತಮೆ ಸಾವು, ಪ್ರಿಯತಮ ಎಸ್ಕೇಪ್
ಬೆಳಗಾವಿ, ಮಾರ್ಚ್. 23 : ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ನಡೆಸಿದ ಘಟನೆಯಲ್ಲಿ ಪ್ರಿಯತಮೆ ಸಾವನ್ನಪ್ಪಿ, ಪ್ರೇಮಿ ತೀವ್ರ ಅಸ್ವಸ್ಥಗೊಂಡ ಪ್ರಕರಣ ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ನಡೆದಿದೆ.
ಲಕ್ಷ್ಮೀ (19) ಎಂಬ ಯುವತಿಯೇ ಸಾವನ್ನಪ್ಪಿದವಳು. ಈಕೆಯ ಪ್ರಿಯತಮ ಮಹಾಂತೇಶ ಘೋರ್ಪಡೆ (19) ತೀವ್ರ ಅಸ್ವಸ್ಥಗೊಂಡಿದ್ದು, ಘಟಪ್ರಭಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತ ಯುವತಿ ಸಾವನ್ನಪ್ಪಿದ ವಿಷಯ ತಿಳಿದ ಮಾಹಾಂತೇಶ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದಾನೆ.[ಹಾಸಿಗೆಗೆ ಬೆಂಕಿ ಇಟ್ಟು ಗಂಡನನ್ನು ಕೊಲ್ಲಲೆತ್ನಿಸಿದ ಪತ್ನಿ?]

ಹುಕ್ಕೇರಿ ತಾಲೂಕಿನ ಕಡಕಲಾಟ ಗ್ರಾಮದ ನಿವಾಸಿಗಳಾದ ಮಹಾಂತೇಶ್ ಮತ್ತು ಲಕ್ಷ್ಮೀ ಹುಕ್ಕೇರಿ ಪಟ್ಟಣದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು.
ಆದರೆ, ಈಚೆಗೆ ಲಕ್ಷ್ಮೀಯ ಪೋಷಕರು ಆಕೆಗೆ ಬೇರೆ ಕಡೆ ಗಂಡು ಹುಡುಕ ತೊಡಗಿದ್ದರಿಂದ ಮನನೊಂದ ಇಬ್ಬರು ಹುಕ್ಕೇರಿಯಲ್ಲಿ ಬುಧವಾರ ತಡರಾತ್ರಿ ವಿಷ ಸೇವಿಸಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications