ಹೌದು, ನಾನು ಅತ್ಯಾಚಾರ ಎಸಗಿದೆ: ಬಸವಲಿಂಗ ಶ್ರೀ
ಬೆಳಗಾವಿ, ಜೂ.29: ಅಡುಗೆ ಕೆಲಸದಾಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಲಿಂಗಾಯತ ಧರ್ಮಪೀಠದ ಸ್ವಾಮೀಜಿ ಬಸವಲಿಂಗ ಪ್ರಭು ಸ್ವಾಮೀಜಿ ಅವರು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಈ ನಡುವೆ ಕೆಲಸಕ್ಕೆ ಸೇರಿ ಒಂದು ದಿನದೊಳಗೆ ಈ ರೀತಿ ಗಂಭೀರ ಆರೋಪಿಸಿದ ಮಹಿಳೆ ದೂರಿನ ಸತ್ಯಾಸತ್ಯತೆ ಬಗ್ಗೆಯೂ ತನಿಖೆ ಮುಂದುವರೆದಿದೆ.
ಬೆಳಗಾವಿಯ ಆಂಜನೇಯ ನಗರದಲಿರುವ ಲಿಂಗಾಯತ ಧರ್ಮಪೀಠದ ಸ್ವಾಮೀಜಿ ಬಸವಲಿಂಗ ಪ್ರಭು ಅವರನ್ನು ಅತ್ಯಾಚಾರದ ಆರೋಪದ ಮೇಲೆ ಪೊಲೀಸರು ಶನಿವಾರ ರಾತ್ರಿ ಬಂಧಿಸಿದ್ದರು.
60 ವರ್ಷದ ಬಸವಲಿಂಗ ಪ್ರಭು ಅವರ ಮೇಲೆ 47 ವರ್ಷ ವಯಸ್ಸಿನ ಧಾರವಾಡ ಮೂಲದ ಶೋಭಾ ಎಂಬ ಮಹಿಳೆ ಮೇಲೆ ಅತ್ಯಾಚಾರ ಎಸಗಿಸಿದ ಆರೋಪ ಹೊರೆಸಲಾಗಿದೆ. ಸ್ವಾಮೀಜಿ ವಿರುದ್ಧ ಐಪಿಸಿ ಸೆಕ್ಷನ್ 376ರ ಅನ್ವಯ ಪ್ರಕರಣ ದಾಖಲಿಸಿಕೊಂದು ಮಾಳಮಾರುತಿ ಪೊಲೀಸ್ ಠಾಣಾಧಿಕಾರಿಗಳು ವಿಚಾರಣೆ ಕೈಗೊಂಡಿದ್ದಾರೆ.

ಆಂಜನೇಯ ನಗರದಲ್ಲಿರುವ ಲಿಂಗಾಯತ ಧರ್ಮ ಪೀಠದಲ್ಲಿ ಅಡುಗೆ ಕೆಲಸಕ್ಕೆ ಹುಬ್ಬಳ್ಳಿ ಮೂಲದ ಶೋಭಾ ಎಂಬ ಮಹಿಳೆ ಶುಕ್ರವಾರ ಸೇರಿಕೊಂಡಿದ್ದರು. ಶನಿವಾರ ಮಧ್ಯಾಹ್ನ ಮಠಕ್ಕೆ ಕರೆದೊಯ್ದ ಸ್ವಾಮೀಜಿ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಮಾಳಮಾರುತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ವಾಮೀಜಿಯನ್ನು ಬಂಧಿಸಿದ್ದಾರೆ.
ಘಟನೆ ನಂತರ ನೇರವಾಗಿ ಪೊಲೀಸ್ ಠಾಣೆಗೆ ತೆರಳದ ಮಹಿಳೆ ತನ್ನ ಹೇಳಿಕೆಯನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡು ನಂತರ ಠಾಣೆಗೆ ಬಂದಿದ್ದಾಳೆ. ಅತ್ಯಾಚಾರ ಎಸಗಿರುವ ಬಗ್ಗೆ ಜಿಲ್ಲಾಸ್ಪತ್ರೆಯಿಂದ ಇನ್ನೂ ವೈದ್ಯಕೀಯ ಪರೀಕ್ಷಾ ವರದಿ ಬಂದಿಲ್ಲ. ಈ ನಡುವೆ ವಿಚಾರಣೆ ವೇಳೆ ಸ್ವಾಮೀಜಿ ತಪ್ಪೊಪ್ಪಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಶಿರಗುಪ್ಪಿ ಗ್ರಾಮದ ಮೂಲದವರಾದ ಸ್ವಾಮೀಜಿಗಳು ತಮ್ಮ 22ನೇ ವಯಸ್ಸಿಗೆ ಸನ್ಯಾಸ ದೀಕ್ಷೆ ಪಡೆದುಕೊಂಡವರು. ಇವರ ಪೂರ್ವಾಶ್ರಮದ ಹೆಸರು ಬಸಪ್ಪ ನ್ಯಾಮಗೌಡರ್. ಸುಮಾರು 15 ವರ್ಷಗಳ ಹಿಂದೆ ಲಿಂಗಾಯತ ಧರ್ಮಪೀಠ ಸ್ಥಾಪಿಸಿ, ಪಂಚಮಸಾಲಿ ಮಠಕ್ಕೆ ಜಗದ್ಗುರುವಾಗಿದ್ದಾರೆ.












Click it and Unblock the Notifications