• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಾಪ್‌ಕಾಮ್ಸ್: ಹಣ್ಣು, ತರಕಾರಿಗಳ ಜತೆ ಹಾಲಿನ ಉತ್ಪನ್ನವೂ ಲಭ್ಯ

|

ಬೆಂಗಳೂರು, ಫೆಬ್ರವರಿ 27 : ಕೇವಲ ತರಕಾರಿ, ಹಣ್ಣುಗಳು, ಜ್ಯೂಸ್ ಮಾರಾಟವಾಗುತ್ತಿದ್ದ ಹಾಪ್‌ಕಾಮ್ಸ್ ಗಳಲ್ಲಿ ಇನ್ನುಮುಂದೆ ಹಾಲು ಹಾಗೂ ಹಾಲಿನ ಉತ್ಪನ್ನಗಳು ಕೂಡ ದೊರೆಯಲಿದೆ.

ಮಾರ್ಚ್ ಮಧ್ಯದಲ್ಲಿ ನಂದಿನಿ ಹಾಲಿನ ಉತ್ಪನ್ನಗಳು ಹಾಗೂ ಕರ್ನಾಟಕ ಹಾಲು ಒಕ್ಕೂಟದ ಉತ್ಪನ್ನಗಳು ಹಾಪ್ ಕಾಮ್ಸ್ ಮಳಿಗೆಯಲ್ಲಿ ಲಭ್ಯವಿರಲಿದೆ.

ಕೆಎಂ ಎಫ್ ಅಪೆಕ್ಸ್ ಬಾಡಿಯಾಗಿದ್ದು, ಈಗಾಗಲೇ ಹಾಲು ಮಾರಾಟ, ಹಾಲು ಉತ್ಪನ್ನಗಳ ಮಾರಾಟ ಮಾಡುತ್ತಿದ್ದು ಇದೀಗ ನೀರಿನ ಮಾರಾಟ ಕ್ಷೇತ್ರಕ್ಕೂ ಕಾಲಿಟ್ಟಿದೆ. ಹಾಲಿನ ಜತೆಗೆ ಮೊಸರು, ಪನೀರ್, ಲಸ್ಸಿ, ಫ್ಲೇವರ್ಡ್ ಮಿಲ್ಕ್, ತುಪ್ಪ, ಬೆಣ್ಣೆ, ಐಸ್ ಕ್ರೀಮ್, ಚೀಸ್, ಬಾದಾಮಿ ಪೌಡರ್, ಜಾಮೂನ್, ಪಾಯಸ ಮಿಕ್ಸ್, ರೆಡಿ ಟು ಯೂಸ್ ಮಿಲ್ಕ್ ಉತ್ಪನ್ನಗಳು ಲಭ್ಯವಿದೆ.

ಕರ್ನಾಟಕದಾದ್ಯಂತ ಸುಮಾರು 12 ಸಾವಿರ ಕೆಎಂಎಫ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದರಲ್ಲಿ 4 ಸಾವಿರ ಮಂದಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಹಾಪ್‌ಕಾಮ್ಸ್ ಜತೆಗೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಇನ್ನು ಮುಂದೆ ಹಾಪ್‌ಕಾಮ್ಸ್ ಮಳಿಗೆಯಲ್ಲಿ ಕೆಎಂಎಫ್ ಉತ್ಪನ್ನಗಳು ಲಭ್ಯವಾಗಲಿದೆ.

ಹಾಪ್ ಕಾಮ್ಸ್ ನಲ್ಲಿ ಹಣ್ಣು, ತರಕಾರಿಗಳ ಜತೆಗೆ ಇನ್ನುಮುಂದೆ ಹಾಲು, ಹಾಲಿನ ಉತ್ಪನ್ನಗಳು ದೊರೆಯಲಿದೆ. ಮೊದಲು ಬೆಂಗಳೂರಿನಲ್ಲಿ 25 ಮಳಿಗೆಗಳಲ್ಲಿ ಆರಂಬಿಸಲಾಗುತ್ತದೆ ಜನರ ಪ್ರತಿಕ್ರಿಯೆ ನಂತರ ಇನ್ನುಳಿದ ಮಳಿಗೆಗಳಿಗೆ ವಿಸ್ತರಿಸಲಾಗುತ್ತದೆ ಎಂದು ಕೆಎಂಎಫ್ ಅಧಿಕಾರಿಗಳು ತಿಳಿಸಿದ್ದಾರೆ.

English summary
By mid March , Nandini Milk sachets and other Karnataka Milk Federation products will be available at Horticultur's Cooperative Marketing and Processing society outlets along with KMF parlours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X