ಬಿಜೆಪಿಯಿಂದ ಮೊದಲ ನಾಮಪತ್ರ ಸಲ್ಲಿಸಿದ್ದು ಇವರೇ ನೋಡಿ

ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು ಮೂರು ಪ್ರಮುಖ ಪಕ್ಷಗಳ ಪೈಕಿ ಮೊದಲ ನಾಮಪತ್ರವನ್ನು ಬಿಜೆಪಿ ಅಭ್ಯರ್ಥಿ ಸಲ್ಲಿಸಿದ್ದಾರೆ.

ಸವದತ್ತಿ ಯಲ್ಲಮ್ಮ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ್ ವಿಶ್ವನಾಥ ಮಾಮನಿ ಅವರು ಇಂದು ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಿದ್ದು, ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದಾರೆ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಯಾವುದೇ ಆಡಂಭರವಿಲ್ಲದೆ, ಬೆಂಬಲಿಗರನ್ನು ಕರೆತರದೆ ಸರಳವಾಗಿ ತಮ್ಮ ಕುಟುಂಬದ ಹಿರಿಯರು ಮತ್ತು ನಾಮಪತ್ರ ಸಲ್ಲಿಕೆಗೆ ಬೇಕಾದ ಜಾಮೀನುದಾರರನ್ನು ಮಾತ್ರವೇ ಕರೆತಂದು ಅವರು ನಾಮಪತ್ರ ಸಲ್ಲಿಸಿರುವುದು ವಿಶೇಷ.

Karnataka elections: BJP candidate files nomination today

ಕಾಂಗ್ರೆಸ್ ಸಹ ಇಂದಿನಿಂದ ಬಿ-ಫಾರಂ ವಿತರಿಸಿದ್ದು, ಜೆಡಿಎಸ್ ಕೂಡ ಮೊದಲ ಹಂತದ ಬಿ-ಫಾರಂ ವಿತರಣೆ ಆರಂಭಿಸಿದೆ. ಆದರೆ ನಾಮಪತ್ರ ಸಲ್ಲಿಕೆಗೆ ಮೊದಲ ದಿನವಾದ ಇಂದು ಮಂಗಳವಾರವಾದ ಕಾರಣ ಬಹುತೇಕರು ಇಂದು ನಾಮಪತ್ರ ಸಲ್ಲಿಸುತ್ತಿಲ್ಲ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಟಿಕೆಟ್ ರಾಜಕೀಯ

ಇಂದು (ಏಪ್ರಿಲ್ 17) ನಾಮಪತ್ರ ಸಲ್ಲಿಕೆ ಆರಂಭವಾದರೆ ಏಪ್ರಿಲ್ 24ರಂದು ನಾಂಪತ್ರ ಸಲ್ಲಿಕೆಗೆ ಅಂತಿಮದಿನವಾಗಿದೆ. ಏಪ್ರಿಲ್ 25ರಿಂದ ನಾಮಪತ್ರ ಪರಿಶೀಲನೆ ಆರಂಭವಾದರೆ, ನಾಮಪತ್ರ ವಾಪಾಸ್ ಪಡೆಯುವ ಕೊನೆಯ ದಿನ ಏಪ್ರಿಲ್ 28 ಆಗಿದೆ. ಮತದಾನವು ಮೇ 12ಕ್ಕೆ ನಡೆಯುತ್ತಿದ್ದು, ಮೇ 15ಕ್ಕೆ ಮತ ಎಣಿಕೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+