Steel Mirror: ಜನರಿಗೆ ಬುದ್ಧಿ ಕಲಿಸಲು ಬೆಂಗಳೂರು - ಮೈಸೂರು ಮಾದರಿ ಅಳವಡಿಸಿಕೊಂಡ ಅಸ್ಸಾಂ!

Steel Mirror: ಬೆಂಗಳೂರು - ಮೈಸೂರಿನಲ್ಲಿ ಅಳವಡಿಸಿಕೊಂಡಿದ್ದ ತಂತ್ರವನ್ನು ಇದೀಗ ದೂರದ ಅಸ್ಸಾಂನಲ್ಲೂ ಅಳವಡಿಸಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ಮೊದಲು ಸಾರ್ವಜನಿಕರು ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುವುದನ್ನು ತಪ್ಪಿಸುವ ಉದ್ದೇಶದಿಂದ ಕನ್ನಡಿಗಳನ್ನು ಅಳವಡಿಸಲಾಗಿತ್ತು. ಇದೇ ಮಾದರಿಯನ್ನು ಮೈಸೂರಿನಲ್ಲೂ ಅಳವಡಿಸಿಕೊಳ್ಳಲಾಗಿತ್ತು. ಇದೀಗ ಈ ಮಾದರಿಯನ್ನು ದೂರದ ಅಸ್ಸಾಂನಲ್ಲೂ ಅಳವಡಿಸಿಕೊಳ್ಳಲಾಗಿದೆ. ಅಸ್ಸಾಂ ರಾಜ್ಯದಲ್ಲಿ ಎಲ್ಲೆಂದರಲ್ಲಿ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುವುದನ್ನು ತಪ್ಪಿಸುವ ಉದ್ದೇಶದಿಂದ ಎಲ್‌ಇಡಿ ಪರದೆ ಮೇಲೆ ಪ್ರದರ್ಶನ ಮಾಡಲಾಗುತ್ತಿದೆ. ಈಚೆಗೆ ಮೈಸೂರಿನಲ್ಲಿ ಕನ್ನಡಿ ಅಳವಡಿಸುವ ಮಾದರಿಯನ್ನೇ ಅಸ್ಸಾಂನ ನಗರಗಳಲ್ಲೂ ಅಳವಡಿಸಲಾಗಿದೆ. 2020ರಲ್ಲಿ ಅಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಬೆಂಗಳೂರಿನಲ್ಲೂ ಈ ಮಾದರಿಯಲ್ಲಿ ಕನ್ನಡಿ ಅಳವಡಿಸಲಾಗಿತ್ತು. ಬೆಂಗಳೂರಲ್ಲಿ ಎಲ್ಲೆಂದರಲ್ಲಿ ಜನ ಮೂತ್ರ ವಿಸರ್ಜನೆ ಮಾಡುವುದನ್ನು ತಪ್ಪಿಸುವ ಉದ್ದೇಶದಿಂದ ಕನ್ನಡಿಗಳನ್ನು ಅಳವಡಿಸಲಾಗಿತ್ತು.

Steel Mirror

ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡುವುದನ್ನು ತಪ್ಪಿಸುವ ಉದ್ದೇಶದಿಂದ ಮೈಸೂರಿನಲ್ಲಿ ಕನ್ನಡಿ ಅಳವಡಿಸಲಾಗಿತ್ತು. ಇದೀಗ ಅಸ್ಸಾಂನಲ್ಲೂ ಇದೇ ಟ್ರಿಕ್ಸ್‌ ಅನುಸರಿಸಲಾಗುತ್ತಿದೆ. ಅಸ್ಸಾಂನ ರಾಜ್ಯದ ಟಿನ್ನುಕಿಯಾ ಪುರಸಭೆಯು 'ಹಾಲ್ ಆಫ್ ಶೇಮ್' ಎನ್ನುವ ವಿಶೇಷ ಅಭಿಯಾನವನ್ನು ಪ್ರಾರಂಭಿಸಿದೆ. ಈ ಯೋಜನೆಯ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕರು ಯಾರಾದರೂ ರಸ್ತೆ ಬದಿ ಅಥವಾ ಇತರ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡಿದರೆ ಅಥವಾ ಕಸ ಚೆಲ್ಲಿದರೆ ಆ ದೃಶ್ಯಗಳನ್ನು ಸಿಸಿಟಿವಿಯಲ್ಲಿ ಸೆರೆಯಾಗಲಿದೆ. ಅಲ್ಲದೆ ರಸ್ತೆ ಬದಿ ಮೂತ್ರ ವಿಸರ್ಜಿಸುವವರ ದೃಶ್ಯಗಳನ್ನು ಎಲ್‌ಇಡಿ ಪರದೆ ಮೇಲೆ ನೇರಪ್ರಸಾರ ಮಾಡುವ ವ್ಯವಸ್ಥೆಯನ್ನೂ ಮಾಡಲಾಗಿದೆ.

ಶಿಕ್ಷೆ ವಿಧಿಸಿ; ಅವಮಾನ ಸರಿಯಲ್ಲ

ಇನ್ನು ಈ ಮಾದರಿಯ ಪ್ರಯೋಗಕ್ಕೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ರೀತಿ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ ಇಲ್ಲವೇ ದಂಡ ವಿಧಿಸಿ, ಈ ಮಾದರಿಯಲ್ಲಿ ಅವಮಾನ ಮಾಡುವುದು ಸರಿ ಅಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಇನ್ನೂ ಕೆಲವರು ಈ ರೀತಿ ನಾಗರಿಕ ಪ್ರಜ್ಞೆಯೇ ಇಲ್ಲದೆ ವರ್ತಿಸುವವರಿಗೆ ಈ ರೀತಿ ಮಾಡುವುದೇ ಸರಿ ಎಂದು ಹೇಳಿದ್ದಾರೆ. ಇನ್ನೂ ಕೆಲವರು ಸರಿಯಾದ ಮೂಲಸೌಕರ್ಯವನ್ನು ಸಹ ಕಲ್ಪಿಸಬೇಕು ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಪ್ರಯೋಗ

ಇನ್ನು ಮೈಸೂರು ನಗರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡುವುದನ್ನು ತಪ್ಪಿಸಲು ವಿನೂತನ ಕ್ರಮ ಅನುಸರಿಸಲಾಗಿತ್ತು. ಮೈಸೂರು ನಗರ ಪಾಲಿಕೆ (MCC) ವಿನೂತನ ಕನ್ನಡಿ (Steel Mirror) ಪ್ರಯೋಗವನ್ನು ಈಚೆಗೆ ಪ್ರಯೋಗಿಸಿತ್ತು. ಗೋಡೆಗಳ ಮೇಲೆ ಉಕ್ಕಿನ ಕನ್ನಡಿಗಳನ್ನು ಮತ್ತು ರಾತ್ರಿ ವೇಳೆ ಎಲ್‌ಇಡಿ (LED) ದೀಪಗಳನ್ನು ಅಳವಡಿಸಲಾಗಿತ್ತು. ಇದು ಸಾರ್ವಜನಿಕರ ಗಮನ ಸೆಳೆಯುವ ಮೂಲಕ ಬಹಿರಂಗ ಮೂತ್ರ ವಿಸರ್ಜನೆಗೆ ಕಡಿವಾಣ ಹಾಕುವಲ್ಲಿ ತಕ್ಕ ಮಟ್ಟಿಗೆ ಯಶಸ್ವಿಯೂ ಆಗಿತ್ತು. ಇದಕ್ಕೂ ಮೊದಲು ಬೆಂಗಳೂರಿನಲ್ಲೂ 2020ನೇ ಸಾಲಿನಲ್ಲಿ ಈ ಮಾದರಿಯನ್ನು ಪ್ರಯೋಗಿಕವಾಗಿ ಬಳಸಲಾಗಿತ್ತು. ಆದರೆ ಬೆಂಗಳೂರಿನಲ್ಲಿ ಈ ಮಾದರಿ ಯಶಸ್ವಿ ಆಗಿರಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+