ಬೆಳಗಾವಿ: ಉದ್ಯಮಿ ರಮೇಶ್ ಪೈ ಮನೆ, ಕಚೇರಿ ಮೇಲೆ ಐಟಿ ದಾಳಿ
ಬೆಳಗಾವಿ, ಫೆಬ್ರವರಿ 26: ಉದ್ಯಮಿ ರಮೇಶ್ ಪೈ ಅವರ ಮನೆ, ಕಚೇರಿ ಹಾಗೂ ಕಾರ್ಖಾನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. 30ಕ್ಕೂ ಅಧಿಕ ಕಂಪನಿಗಳಲ್ಲಿ ತೆರಿಗೆ ವಂಚನೆ ಮಾಡಿರುವ ದೂರು ಕೇಳಿ ಬಂದ ಹಿನ್ನಲೆಯಲ್ಲಿ ಬುಧವಾರ ಬೆಳಗ್ಗೆ ಏಕಕಾಲಕ್ಕೆ ಐಟಿ ದಾಳಿ ನಡೆಸಲಾಗಿದೆ. ಇದೇ ವೇಳೆ ಮಂಗಳೂರು ಹಾಗೂ ಇತರೆಡೆ ಇರುವ ಫ್ರಾಂಚೈಸಿ ಮಳಿಗೆಗಳ ಮೇಲೂ ದಾಳಿ ನಡೆದಿದೆ.
30ಕ್ಕೂ ಅಧಿಕ ಬೀಡಿ ಕಂಪನಿಗಳ ಮಾಲೀಕರಾಗಿರುವ ರಮೇಶ್ ಪೈ, ಬೆಳಗೈ ಜಿಲ್ಲೆಯ ದೊಡ್ಡ ಉದ್ಯಮಿ. ಜಿಲ್ಲೆಯ ನಿಪ್ಪಾಣಿಯಲ್ಲಿರುವ ಪೈ ಅವರ ಮನೆ ಮೇಲೆ ಗೋವಾ ವಿಭಾಗದ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಐಟಿ ದಾಳಿ ವೇಳೆ ಮಹತ್ವದ ದಾಖಲೆಗಳು ವಶವಾಗಿರುವ ಸುದ್ದಿ ಬಂದಿದೆ.

ಪೈ ಅವರ ಮನೆ, ಕಚೇರಿ ಹಾಗೂ ಕಾರ್ಖಾನೆಗಳಲ್ಲಿ ಯಾವೆಲ್ಲ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬುದರ ಮಾಹಿತಿ ಇನ್ನೂ ತಿಳಿದು ಬಂದಿಲ್ಲ. ಭಾರತ್ ಬೀಡಿ ವರ್ಕ್ಸ್ ಮಳಿಗೆ ಮೇಲೆ 30ಕ್ಕೂ ಅಧಿಕಾರಿಗಳು ದಾಳಿ ಮಾಡಿದ್ದಾರೆ. ರಮೇಶ್ ಪೈ ಆಪ್ತರ ಮನೆ ಮೇಲೂ ಐಟಿ ದಾಳಿಯಾಗಿದೆ. ತಂಬಾಕು ಉತ್ಪಾದನೆಗೆ ಅನುಗುಣವಾಗಿ ಬೆಳಗಾವಿಯಲ್ಲಿ ಉದ್ಯಮವನ್ನು ವಿಸ್ತರಿಸಿದ್ದರು.












Click it and Unblock the Notifications