ಹಾಡಹಗಲೇ ಬೆಳಗಾವಿಯ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ 12 ಲಕ್ಷ ಕಳ್ಳತನ

ಬೆಳಗಾವಿ, ಜುಲೈ 6: ಹಾಡಹಗಲೇ ಬ್ಯಾಂಕಿನಿಂದ 12 ಲಕ್ಷ ರೂಪಾಯಿ ಕಳ್ಳತನ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಇಲ್ಲಿನ ಕಿರ್ಲೋಸ್ಕರ್ ರಸ್ತೆಯಲ್ಲಿರುವ 'ಬ್ಯಾಂಕ್ ಆಫ್ ಮಹಾರಾಷ್ಟ್ರ' ಶಾಖೆಯಲ್ಲಿ ಈ ಕಳ್ಳತನ ನಡೆದಿದೆ.

ಇಂದು ಬೆಳಗ್ಗೆ 10.30ಕ್ಕೆ ಬ್ಯಾಂಕ್ ಕಚೇರಿಯಲ್ಲಿ ಕೆಲಸ ಆರಂಭವಾಗಿತ್ತಷ್ಟೆ. ಈ ವೇಳೆ ಕಚೇರಿಯೊಳಕ್ಕೆ ನುಗ್ಗಿದ ನುಗ್ಗಿದ ಐದು ಜನರಿದ್ದ ಕಳ್ಳರ ಗುಂಪು 12 ಲಕ್ಷ ರೂಪಾಯಿ ಹಣ ದೋಚಿ ಪರಾರಿಯಾಗಿದೆ.

Group of 5 thieves robbed 12 lakh from Bank of Maharashtra in Belagavi

ಐದು ಜನರು ಹಣ ಡ್ರಾ ಮಾಡುವ ನೆಪದಲ್ಲಿ ಕ್ಯಾಶ್ ಕೌಂಟರ್ ಬಳಿ ಹೋಗಿದ್ದಾರೆ. ಈ ವೇಳೆ ಬ್ಯಾಂಕ್ ಸಿಬ್ಬಂದಿಯ ಗಮನವನ್ನು ಬೇರೆಡೆಗೆ ಸೆಳೆದು ಹಣ ದೋಚಿದ್ದಾರೆ.

ಸ್ಥಳಕ್ಕೆ ಇಲ್ಲಿನ ಖಡೇ ಬಜಾರ್ ಠಾಣೆ ಪೊಲೀಸರು ಮತ್ತು ಡಿಸಿಪಿ ಅಮರನಾಥ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಪೊಲೀಸುರ ಬಲೆ ಬೀಸಿದ್ದಾರೆ. ಬ್ಯಾಂಕಿನಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಕಳ್ಳರ ಕೈಚಳಕ ದಾಖಲಾಗಿದ್ದು ಈ ದೃಶ್ಯಗಳನ್ನಾಧರಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯತಂತ್ರ ರೂಪಿಸಿದ್ದಾರೆ.

ಕಳ್ಳರು ತಮಿಳುನಾಡಿಗೆ ಸೇರಿದವರು ಎಂದು ಹೇಳಲಾಗಿದೆಯಾದರೂ ಸ್ಪಷ್ಟ ಮಾಹಿತಿಗಳು ಮಾತ್ರ ಸಿಕ್ಕಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+